ಹಾಸ್ಟೆಲ್ ಹೊರ ಗುತ್ತಿಗೆ ಕಾರ್ಮಿಕ ಸಮಸ್ಯೆಗಳ ಚರ್ಚೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.12: ಎಐಯುಟಿಯುಸಿ ಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ಬಳ್ಳಾರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಸುರೇಶ್ ಬಾಬು ರವರಿಗೆ ಮನವಿ ಸಲ್ಲಿಸಲಾಯಿತು., ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶ್ ಬಾಬು ಅವರು ಬಾಕಿ ಪರಿಷ್ಕೃತ ವೇತನವನ್ನು, ಅರಿಯರ್ಸ್ ಕೂಡ ಈ ವಾರದಲ್ಲೆ ನೀಡಲಾಗುವುದು, ವಾರದ ರಜೆಯನ್ನು ಎಲ್ಲಾ ಕಾರ್ಮಿಕರಿಗೆ ನೀಡುವಂತೆ ಸೂಚಿಸಲಾಗುವುದು,
ಎಲ್ಲಾ ಕಾರ್ಮಿಕರಿಗೆ 4 ವರ್ಷಗಳಿಂದ ಬಾಕಿ ಇರುವ ಪಿ.ಎಫ್ ಹಣವನ್ನು ದೊರೆಯುವಂತೆ, ಸೂಕ್ತ ಕ್ರಮ ವಹಿಸಲಾಗುವುದು, ಗುರುತಿನ ಚೀಟಿ ಮತ್ತು ವೇತನಚೀಟಿ ಯನ್ನು ಈ ವಾರದಲ್ಲೆ ನೀಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎ.ದೇವದಾಸ್,  ವಸತಿ ನಿಲಯ ಕಾರ್ಮಿಕ ಸಂಘದ ಅಧ್ಯಕ್ಷರಾದ ಡಾ.ಪ್ರಮೋದ್, ಕಾರ್ಯದರ್ಶಿ ಸುರೇಶ್.ಜಿ,  ವಿವಿಧ ಹಾಸ್ಟಲ್ ಕಾರ್ಮಿಕರು ಉಪಸ್ಥಿತರಿದ್ದರು.

One attachment • Scanned by Gmail