
“ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ” ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು ತಾರಾ ನಟರು ಸಾಥ್ ನೀಡಿದ್ದಾರೆ. ಇದು ಸಹಜವಾಗಿ ತಂಡಕ್ಕೆ ಆನೆ ಬಲಬಂದಿದೆ.
ಅಜನೀಶ್ ಲೋಕನಾಥ್ ಸಂಗೀತದ ಹಾಡನ್ನು ರಿಷಬ್ ಶೆಟ್ಟಿ, ,ಡಾಲಿ ಧನಂಜಯ, ಧ್ರುವ ಸರ್ಜಾ ಸೇರಿ ಮತ್ತಿತರರು ಬಿಡುಗಡೆ ಮಾಡಿ ಹುಡುಗರಿಗೆ ಬೆನ್ನುತಟ್ಟಿದ್ದಾರೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಮೊದಲ ಚಿತ್ರ ಇದು.
ಸೆಟ್ಟೇರಿದ ದಿನದಿಂದಲೂ ಸುದ್ದಿಯಲ್ಲಿರುವ ಚಿತ್ರ ಸದ್ಯದಲ್ಲಿಯೇ ಬಿಡುಗಡೆಯಾಗಲು ಸಜ್ಜಾಗಿದೆ. ಈ ನಡುವೆ ತಾರೆಯರ ಬೆಂಬಲ ಸಿಕ್ಕಿರುವಿದು ಮತ್ತಷ್ಟು ಖುಷಿಗೆ ಕಾರಣವಾಗಿದೆ.
ಯೂತ್ ಸಬ್ಜೆಕ್ಟ್ ಒಳಗೊಂಡ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ರಂಗಭೂಮಿ ಪ್ರತಿಭೆಗಳು ಕಾಣಿಸಿಕೊಂಡಿರುವುದು ಚಿತ್ರದ ಬಗ್ಗೆ ಒಂದಷ್ಟು ನೀರೀಕ್ಷೆ ಹುಟ್ಟು ಹಾಕಿದೆ.
ಚಿತ್ರಕ್ಕೆ ಪುನೀತ್ ರಾಜ್ ಕುಮಾರ್, ಸುದೀಪ್, ರಮ್ಯಾ, ರಕ್ಷಿತ್ ಶೆಟ್ಟಿ ಹೀಗೆ ಸ್ಟಾರ್ ನಟ ನಟಿಯರು ಈ ಸಿನಿಮಾಗೆ ಸಾಥ್ ನೀಡಿದ್ದಾರೆ. ಪ್ರತಿ ಬಾರಿ ವಿಭಿನ್ನ ಕಾನ್ಸೆಪ್ಟ್ ಮೂಲಕ ಚಿತ್ರತಂಡ ಗಮನ ಸೆಳೆಯುತ್ತಿದೆ.
ನಿರ್ಮಾಪಕ ವರುಣ್ ಮಾಹಿತಿ ನೀಡಿ ಎರಡು ಮೂರು ತಿಂಗಳಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ಬಿಡುಗಡೆ ಮಾಡಲು ಉದ್ದೇಶಿಸಿದ್ದೇವೆ.ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು ಎಲ್ಲರ ಸಹಕಾರ ಅಗತ್ಯ ಎಂದರು. ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ.
ಗಮನ ಸೆಳೆದ ಚಿತ್ರ
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಆರಂಭದಿಂದಲೂ ಒಂದಿಲ್ಲ ಒಂದು ಕಾರಣಕ್ಕೆ ಕುತೂಹಲ ಹೆಚ್ಚು ಮಾಡುತ್ತಿದೆ.ಇದೀಗ ಹಲವು ತಾರಾ ನಟರು ಚಿತ್ರಕ್ಕೆ ಕೈಜೊಡಿಸಿರುವುದು ಚಿತ್ರ ತಂಡದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಇದು ಸಹಜವಾಗಿ ನಿರ್ಮಾಪಕ ವರುಣ್ ಮತ್ತವತರ ತಂಡದಲ್ಲಿ ಮಂದಹಾಸ ಮನೆ ಮಾಡಿದೆ. ಎಲ್ಲಾ ಅಂದು ಕೊಂಡಂತೆ ಆದರೆ ಎರಡು ಮೂರು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ