ಹಾಸ್ಟೆಲ್ ಗಳು ವಿದ್ಯಾರ್ಥಿ ಗಳ ಭವಿಷ್ಯ ರೂಪಿಸುವ ಕೇಂದ್ರಗಳು :- ಶಾಸಕ ಬಿ.ದೇವೇಂದ್ರಪ್ಪ

ಸಂಜೆವಾಣಿ ವಾರ್ತೆ

ಜಗಳೂರು.ಆ.೧೨ :- ಗ್ರಾಮೀಣ ಭಾಗದ ಹಾಸ್ಟೆಲ್ ಗಳು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕೇಂದ್ರ ಗಳಾಗಿದ್ದು. ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಬಿಸಿಎಂ ಇಲಾಖೆ ನೂತನ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಕಾಯಕ ಮನೋಭಾವ ಮೈ ಗೂಡಿಸಿಕೊಳ್ಳಬೇಕಿದೆ.ಅಕ್ಷರ,ಅನ್ನ,ಆಧ್ಯಾತ್ಮಿಕತೆಗಳ ತ್ರಿವಿಧದ ದಾಸೋಹ ಕೇಂದ್ರಗಳು ಹಾಸ್ಟೆಲ್ ಗಳಾಗಿವೆ.ತಾಲೂಕಿನ ಉದ್ಗಟ್ಟ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವ್ಯವಸ್ಥೆ ವಿದ್ಯಾರ್ಥಿಗಳ ತೇಜಸ್ಸು ಕಂಡು ಮೂಕವಿಸ್ಮಿತ ನಾಗಿ ವೃತ್ತಾಂತದ ಹಾಡು ಕೇಳಿಸಿದೆ ಎಂದು ನಿರ್ದೇಶನ ನೀಡಿದರು. 80 ರ ದಶಕದಲ್ಲಿ ಪ್ರೌಢ ಶಾಲೆ ವ್ಯಾಸಂಗಮಾಡುತ್ತಿರುವಾಗ ಸರಕಾರಿ ಹಾಸ್ಟೆಲ್ ಸಿಗದಿದ್ದಾಗ. ಬಿಡಿಓ ಅವರ ಶಿಫಾರಸ್ಸಿನ ಮೇರೆಗೆ ಹಾಸ್ಟೆಲ್ ಸೌಲಭ್ಯಪಡೆದರೂ ಹಾಸಿಗೆ ಹೊದಿಕೆ ವಿತರಣೆ ವಿಳಂಬವಾದ ವೇಳೆ ನಾನು ಗೋಣಿ ಚೀಲವನ್ನು ಹೊದಿಕೆಯಾಗಿಸಿ ಕೊಂಡಿದ್ದೆ.ಇದೀಗ ಐಷರಾಮಿ ಬದುಕು ಅನುಭವಿಸುತ್ತಿರುವೆ.ಕಡುಬಡತನದಲ್ಲಿ ಜನಿಸಿದ ನಾನು ಶಾಸಕನಾಗಿ ಹಾಸ್ಟೆಲ್ ನ ಲೊಕಾರ್ಪಣೆ ಸಂತಸ ತಂದಿದೆ ಎಂದು ಭಾವುಕರಾದರು.ಮಾಜಿ ಶಾಸಕ ಎಸ್.ವಿ‌.ರಾಮಚಂದ್ರ ಮಾತನಾಡಿ,ನನ್ನ ಆಡಳಿತಾ ವಧಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದೆ.ಇದೀಗ ಲೋಕಾರ್ಪಣೆ ಗೊಂಡಿದೆ.ಮಕ್ಕಳ ಉಜ್ವಲ ಭವಿಷ್ಯ ರೂಪಿಸಲಿ.ತಾಲೂಕಿಗೆ ಕೀರ್ತಿ ತರಬೇಕು.ನೀರಾವರಿ ಯೋಜನೆಗಳು ಸೇರಿದಂತೆ ಅಭಿವೃದ್ದಿ ವಿಚಾರದಲ್ಲಿ ಸಂಪೂರ್ಣಬೆಂಬಲವಿದೆ ಎಂದರು.ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ಗಾಯಿತ್ರಿ ಮಾತನಾಡಿ,50 ವಿದ್ಯಾರ್ಥಿ ಗಳು ಆನ್ ಲೈನ್ ನಲ್ಲಿ ಅರ್ಜಿಸಲ್ಲಿಸಿದ್ದರೂ ಹಾಸ್ಟೆಲ್ ಪ್ರಾರಂಭವಾಗದೆ ಇರುವುದು ಬೇಸರ ತಂದಿತ್ತು.ವಿವಿಧ ಗ್ರಾಮಗಳ ಲ್ಲಿ ಆರಂಭಿಸುವ ಗೊಂದಲದ ನಿರ್ಧಾರಕ್ಕೆ ಕಟ್ಟಡದ ಕೊರತೆಗೆ ತೆರೆ ಎಳೆದು ಶಾಸಕರ ಕಾಳಜಿಯಿಂದ ಬಡಮಕ್ಕಳಿಗಾಗಿ ಗುತ್ತಿದುರ್ಗ ದಲ್ಲಿ ಆರಂಭವಾಗಿದೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ವಸತಿನಿಲಯ ಪೂರಕವಾಗಲಿವೆ ಮಕ್ಕಳು ದೇವರು ಸಮಾನವಾಗಿ ದ್ದು ವಸತಿಗೆ ಸ್ವಂತ ಸುಸಜ್ಜಿತ ಕಟ್ಟಡಕ್ಕೆ ಶಾಸಕರು ಮನವಿಮಾಡ ಬೇಕಿದೆ ಅಲ್ಲದೆ ಗ್ರಾಮದ ದಾನಿಗಳು ದೇಣಿಗೆಗೆ ಮುಂದಾಗಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಾನಸ ನಿಂಗಪ್ಪ,ಉಪಾಧ್ಯಕ್ಷ ಅರ್ಜುನ್,ಬಿಸಿಎಂ ವಿಸ್ತರಣಾಧಿಕಾರಿ ಅಸ್ಮಬಾನು,ಪ್ರಭಾರಿ ಬಿಇಓ ಸುರೇಶ್ ರೆಡ್ಡಿ, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ.ಮಹೇಶ್ವರ ಪ್ಪ,ಎಸ್ ಡಿ ಎಂಸಿ ಅಧ್ಯಕ್ಷ ಕಲ್ಲೇಶ್ ,ಮುಖಂಡರಾದ ಸಿದ್ದಪ್ಪ, ಸಣ್ಣಸೂರಯ್ಯ,ಪ್ರಕಾಶ್ ರೆಡ್ಡಿ,ಪಲ್ಲಾಗಟ್ಟೆ ಶೇಖರಪ್ಪ, ಮಹಮ್ಮದ್ ಗೌಸ್.ಶಾಂತಪ್ಪ, ಷಂಷುದ್ದೀನ್,ರೇವಣಸಿದ್ದಪ್ಪ,ಶಿವಣ್ಣ, ರುದ್ರೇಶ್. ಮುಖ್ಯ ಶಿಕ್ಷಕಿ  ಶಿವಮ್ಮ, ನಿಲಯ ಮೇಲ್ವಿಚಾರಕ ದೇವೇಂದ್ರಪ್ಪ, ಸೇರಿದಂತೆ ಸಿಬ್ಬಂದಿಗಳು ಗ್ರಾಮಸ್ಥರು ಇದ್ದರು.