ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪದವಿ ವಿದ್ಯಾರ್ಥಿ ,ಪ್ರಕರಣ ದಾಖಲು.

ಸಿಂಧನೂರು.ಅ.೦೨- ನಗರದ ಪಿಡಬ್ಲೂಡಿ ಕ್ಯಾಂಪ್ ಬಿ.ಸಿ.ಎಮ್. ವಸತಿ ನಿಲಯ ದಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದ ಓರ್ವ ವಿದ್ಯಾರ್ಥಿ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಗೌಡನಬಾವಿ ಗ್ರಾಮದ ಬಸವ ಕುಮಾರ ತಂ ಕಲ್ಲಪ್ಪ ಎಂಬ ವಿದ್ಯಾರ್ಥಿ ನಗರದ ಅನಿಕೇತನ ಕಾಲೇಜಿನಲ್ಲಿ ಬಿ.ಎ ಓದುತ್ತಿದ್ದು, ಹಾಸ್ಟೆಲ್ ನಲ್ಲಿನ ತಾನಿರುವ ಕೊಠಡಿಯಲ್ಲಿ ಮೂರು ವಿದ್ಯಾರ್ಥಿಗಳು ಉಳಿದಿಕೊಂಡಿದ್ದು, ಅದರಲ್ಲಿ ಇಬ್ಬರು ವಿದ್ಯಾರ್ಥಿಗಳು ಊರಿಗೆ ಹೋಗಿದ್ದು, ಒಬ್ಬನೇ ಉಳಿದುಕೊಂಡಿದ್ದಾನೆ ಏನಾಗಿದೊ ಗೊತ್ತಿಲ್ಲ, ತನ್ನ ಕೊಠಡಿ ಯಲ್ಲಿನ ಪ್ಯಾನ್‌ಗೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಯಾರು ಜೊತೆಗೆ ಬೆರೆಯದೇ ತನ್ನ ಪಾಡಿಗೆ ತಾನು ಇರುತ್ತಿದ್ದ ಎಂದು ತಿಳಿದುಬಂದಿದೆ. ರವಿವಾರ ಬೆಳಿಗ್ಗೆ ೧೦-೩೦ ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಗೊತ್ತಾಗುತ್ತಿದ್ದಂತೆ ಇಲಾಖೆಯ ಅಧಿಕಾರಿಗಳು ವಿಷಯ ತಿಳಿದು ಪಾಲಕರಿಗೆ ಗಮನಕ್ಕೆ ತಂದು ಮೃತ ಶವವನ್ನು ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆನ್ನಲಾಗಿದೆ ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಂದು ತಿಳಿದುಬಂದಿದೆ.