ಹಾಸಿಗೆ ಮೀಸಲಿಡಲು ಸಚಿವ ಬೈರತಿ ಸೂಚನೆ

ಕೆಆರ್ ಪುರ,ಏ.೨೭-ಮಹದೇವಪುರ ವಲಯದ ಖಾಸಗಿ ಆಸ್ಪತ್ರೆಗಳಿಗೆ ಭೇಟಿನೀಡಿದ ಸಚಿವ ಬೈರತಿ ಬಸವರಾಜ ಅವರು ಕರೋನ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಶೇಕಡಾ ೭೫ ರಷ್ಟು ಬೇಡ್ ನೀಡುವಂತೆ ತಾಕೀತು ಮಾಡಿದರು.
ಕೆ.ಆರ್.ಪುರ, ಮಹದೇವಪುರ ಹಾಗೂ ಹೊಸಕೋಟೆಯ ರೈನ್ ಬೋ, ಸಕ್ರಾ, ವೈದೇಹಿ, ಮಣಿಪಾಲ್ ಆಸ್ಪತ್ರೆ ಭೇಟಿ ನೀಡಿದ ಸಚಿವರು ಸಂಕಷ್ಟದ ಸಮಯದಲ್ಲಿ ಸರ್ಕಾರದ ನಿರ್ದೇಶನದಂತೆ ಶೇಕಡಾ ೭೫ ರಷ್ಟು ಬೇಡ್ ನೀಡುವಂತೆ ತಿಳಿಸಿದರು.
ಶೇಕಡಾ ೭೫ರಷ್ಟು ಬೇಡ್ ಗಳನ್ನು ವೈದೇಹಿ ಆಸ್ಪತ್ರೆ ಹಾಗೂ ಮಣಿಪಾಲ್ ನೀಡಲು ನಿರಾಕರಿಸಿದಾಗ ಆಕ್ರೋಶ ವ್ಯಕ್ತಪಡಿಸಿದ ಸಚಿವರು ಜನತೆ ಸಂಕಷ್ಟದ ಸಮಯದಲ್ಲಿದ್ದಾಗ ಸಹಾಯಕ್ಕೆ ಬರದೇ, ಸಬೂಬು ಹೇಳುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವರು ೭೫ರಷ್ಟು ನೀಡಲೆಬೇಕೆಂದುವವ ಪಟ್ಟು ಹಿಡಿದರು.
ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಹಾಸಿಗೆ ನೀಡಲು ಮನವೋಲಿಸಿದ ಸಚಿವರು ಶೇಕಡಾ ೭೫ ಬೆಡ್ ಗಳನ್ನು ಇಂದಿನಿಂದಲೆ ನೀಡುವಂತೆ ಒಪ್ಪಿಗೆ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಆರೋಗ್ಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಆಸ್ಪತ್ರೆಗಳು ಸರ್ಕಾರದೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು.
ಕೆಲವು ಆಸ್ಪತ್ರೆಗಳು ಸರ್ಕಾರದ ನಿರ್ದೇಶನದ ವಿರುದ್ಧ ನಡೆದರೆ ಅಂತಹ ಆಸ್ಪತ್ರೆಗಳ ವಿರುದ್ಧ ಆಸ್ಪತ್ರೆ ಒಪಿಡಿ, ನೀರು, ವಿದ್ಯುತ್ ಮೂಲಭೂತ ಸೌಕರ್ಯ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಮಂಜುನಾಥ್, ಜಿಲ್ಲಾವೈದ್ಯಾಧಿಕಾರಿ ಶ್ರೀನಿವಾಸ್, ಮಹದೇವಪುರ ವಲಯ ಕೊವಿಡ್ ನಿಯಂತ್ರಣಾಧಿಕಾರಿ ಮಂಜುಳಾ,ತಹಶಿಲ್ದಾರ್ ಅಜಿತ್ ಕುಮಾರ್ ರೈ, ಜಂಟಿಆಯುಕ್ತ ವೆಂಕಟಚಲಪತಿ,ಟಿಎಚ್ ಓ ಚಂದ್ರಶೇಖರ್,ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್, ಕಿತ್ತಗನೂರು ಪಂಚಾಯತಿ ಉಪಾಧ್ಯಕ್ಷ ಕೆ.ವಿ.ನಾಗರಾಜ್ ಇದ್ದರು.