ಹಾಸನ ಟಿಕೆಟ್ ದೇವೇಗೌಡರಿಂದ ಫೈನಲ್

ಹಾಸನ,ಏ.೧೧-ಹಾಸನದ ವಿಧಾನಸಭೆ ಚುನಾವಣೆ ಟಿಕೆಟ್ ವಿಚಾರವಾಗಿ ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆಯಮ್ಮ ಗ್ರಾಮದಲ್ಲಿ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಎಲ್ಲವನ್ನು ಚರ್ಚಿಸುತ್ತೇವೆ, ಅಂತಿಮ ತೀರ್ಮಾನವನ್ನು ದೇವೇಗೌಡರ ಕೈಗೊಳ್ಳುತ್ತಾರೆ. ಹೆಚ್,ಡಿ. ದೇವೇಗೌಡರ ನಿರ್ಧಾರಕ್ಕೆ ನಾವೆಲ್ಲರೂ ಬದ್ದರಾಗಿದ್ದೇವೆ. ಸಾಮಾನ್ಯ ಕಾರ್ಯಕರ್ತ ಯಾರು ಅಂತ ದೇವೇಗೌಡರಿಗೆ ಗೊತ್ತಿದೆ. ರಾಜಕೀಯದಲ್ಲಿ ದೇವೇಗೌಡರಿಗೆ ೬೦ ವರ್ಷದ ಅನುಭವಿದೆ. ಹಾಸನದ ಜೆಡಿಎಸ್ ಟಿಕೆಟ್‌ನ್ನು ಮಾಜಿ ಸಚಿವ ದೇವೇಗೌಡರು ಫೈನಲ್ ಮಾಡುತ್ತಾರೆ. ನಾನು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೆಚ್‌ಡಿಕೆ ಟಾಂಗ್ ನೀಡಿದ್ದಾರೆ.