ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಭಾ ಗೋನಾಳವರಿಂದ ಸಂಗೀತ ಕಾರ್ಯಕ್ರಮ

ರಾಯಚೂರು,ಜ.೦೯- ೮೬ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಜರುಗಿತು. ಇದರ ಹಿನ್ನೆಲೆಯಲ್ಲಿ ಸಾಯಂಕಾಲ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಎರಡನೆಯ ದಿನದ ಎರಡನೇ ವೇದಿಕೆಯ ಕಾರ್ಯಕ್ರಮದಲ್ಲಿ ರಾಯಚೂರಿನ ಖ್ಯಾತ ಗಾಯಕಿ ದೂರದರ್ಶನ ಮತ್ತು ಆಕಾಶವಾಣಿ ಕಲಾವಿದೆ ಪ್ರತಿಭಾ ಗೋನಾಳ ರಾಯಚೂರು ಅವರು ಭಾವ ಮತ್ತು ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮವನ್ನು ನೀಡಿ, ಸಭಿಕರ ಮತ್ತು ಸಾಹಿತ್ಯ ಆಸಕ್ತರ ಸಂಗೀತ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದರು.
ಅತ್ಯಂತ ಮಧುರವಾಗಿ ಅರ್ಥಗರ್ಭಿತವಾದ ಗೀತೆಗಳನ್ನು ಪ್ರಸ್ತುತಪಡಿಸುವುದರ ಮೂಲಕ ಸಭಿಕರಿಂದ ಚಪ್ಪಾಳೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಪ್ರತಿಭಾ ಗೋನಾಳರವರು ಯಶಸ್ವಿಯಾದರು. ನಂತರ ಇವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾವೇರಿಯ ಅಧ್ಯಕ್ಷರಾದಂತ ಲಿಂಗಯ್ಯ ಹಾಗೂ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಂಗಣ್ಣ ಪಾಟೀಲ್ ಹಾಗೂ ಸಹ ಕಾರ್ಯದರ್ಶಿ ಮತ್ತು ಸಮ್ಮೇಳನದ ವಿಶೇಷ ಆಹ್ವಾನಿತರಾದ ಡಾ. ದಂಡಪ್ಪ ಬಿರಾದಾರ್ ಹಾವೇರಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದಂತ ಸಂಜು ಕುಮಾರ್ ಹಾಗೂ ಹಾವೇರಿ ತಾಲೂಕಿನ ಘಟಕದ ಪದಾಧಿಕಾರಿಗಳು ಇವರಿಗೆ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದರು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ತಿನ ವಿಭಾಗಿ ಸಂಚಾಲಕರಾದ ಡಾ. ಶರಣಪ್ಪ ಗೋನಾಳ್ ಮತ್ತು ರಾಯಚೂರು ಹಲವಾರು ಸಾಹಿತ್ಯ ಆಸಕ್ತರು ಉಪಸ್ಥಿತರಿದ್ದರು.