ಹಾವೇರಿ ನಗರ ಸಭೆಯಲ್ಲಿ ಎಗ್ಗಿಲ್ಲದೆ ಸಾಗಿದ ಮಧ್ಯವರ್ತಿಗಳ ದಂಧೆ

ಹಾವೇರಿ,ಜ18: ನಗರ ಸಭೆಯಲ್ಲಿ ಜನಸಾಮಾನ್ಯರು ಸಣ್ಣ ಪುಟ್ಟ ಕೆಲಸಗಳಿಗೆ ಪರೆದಾಡುವ ಪರಿಸ್ಥಿತಿ ಇದೆ. ಈ ಸ್ವತ್ತು, ಕಟ್ಟಡ ಪರವಾನಗಿ, ಕಂದಾಯ ಬಾಕಿ ಕಟ್ಟುವುದು, ಜನನ ಮರಣ ದಾಖಲಾತಿಗಳು, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ರಾಜಕೀಯ ನಾಯಕರ ಚಮಚಾಗಳ ಇಲ್ಲ, ಮಧ್ಯವರ್ತಿಗಳ ಹಿಂಬಾಲು ಬಿಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಧ್ಯವರ್ತಿಗಳು ನಗರ ಸಭೆಯಲ್ಲಿ ಕೆಲಸಮಾಡುವ ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡಿಕೊಡಲು ಮುಂಜಾನೆ ಉಪಹಾರದಿಂದ ಸಂಜೆಯ ನೈವೇದ್ಯ ಮಾಡಿಸಿ ಅವರು ತಮ್ಮ ಜೇಬಿನಲ್ಲಿ ಇದ್ದಾರೆ ಎಂದು ಬಿಂಬಿಸುತ್ತಿದ್ದಾರೆ. ಸಾರ್ವಜನಿಕರಿಗೆ ಸತಾಯಿಸುವ ಅಧಿಕಾರಿಗಳು ಮಧ್ಯವರ್ತಿಗಳ ಬಂದ ತಕ್ಷಣ ಅವರ ಕೆಲಸವನ್ನು ಮಾಡಿಕೊಡುತ್ತಿದ್ದಾರೆ ಎಂದು ಜನರ ದೂರುತ್ತಾ ಇದ್ದಾರೆ. ಜನಸಾಮಾನ್ಯರಿಗೆ ಏನು ಗೊತ್ತು ಅಧಿಕಾರಿಗಳು ಮಧ್ಯವರ್ತಿಗಳ ಕೆಲಸಮಾಡಲು ಮಾತು ಕೇಳಲು ಪ್ರಭಾವವಿದೆ ಎಂದು ಕೆಲಸವನ್ನು ಅರಸಿಕೊಂಡು ಕಛೇರಿಗೆ ಅಧಿಕಾರಿಗಳನ್ನು ಭೇಟಿಯಾಗಲು ಬರುವ ಜನರಿಗೆ ಸರ್ ಸ್ಥಳ ಪರಿಶೀಲನೆಗೆ ಹೋಗಿದ್ದಾರೆ, ತೆರಿಗೆ ವಸುಲಿಗೆ ಹೊಗಿದ್ದಾರೆ, ಜಿ.ಪಿ.ಎಸ್ ಮಾಡಲು ಹೊಗಿದ್ದಾರೆ, ಡಿಸಿ ಆಫಿಸಗೆ ಮೀಟಿಂಗ್ ಹೋಗಿದ್ದಾರೆ ಎಂದು ಹೇಳಿ ಕಳಿಸುವ ಕಂಪ್ಯೂಟರ್ ಆಪರೇಟರಗಳು ಅಧಿಕಾರಿಗಳನ್ನು ಭೇಟಿಯಾಗುವುದು ಕರಕಷ್ಟವಾಗಿದೆ.
ಪೆÇೀನ್ ಮಾಡಿದರೆ ಪೆÇನ್ ಸ್ವೀಕರಿಸುವುದಿಲ್ಲ. ಜನಸಾಮಾನ್ಯರ ಕೆಲಸ ಮಾಡದೆ ಸುಳ್ಳು ಹೇಳಿ, ಮನೆಯಲ್ಲಯೋ, ಹೋಟೆಲನಲ್ಲಿಯೋ, ಐಬಿಯಲ್ಲಿಯೋ ಕಾಲ ಕಳೆದು ಸರ್ಕಾರದ ಸಂಬಳ ಪಡೆದು ಜನಸಾಮಾನ್ಯರಿಗೆ ಮೊಸಮಾಡುವ ಅಧಿಕಾರಿಗಳನ್ನು ಹಿಡಿದು ಕೇಳುವವರು ಯಾರು? ಅಧಿಕಾರಿಗಳ ಭೇಟಿಯಾಗದೆ ಸುತ್ತಾಡಿ ಸುತ್ತಾಡಿ ಬೇಸತ್ತು ನಿಂತ ಜನರಿಗೆ ಇಸ್ತ್ರಿ ಇರುವ ಶೈನ್ ಬಟ್ಟೆ ತೊಟ್ಟ ಮಧ್ಯವರ್ತಿಗಳು ದೆವರಂತೆ ಪ್ರತ್ಯಕ್ಷವಾಗಿ ” ಯಾಕ್ ಇಷ್ಟು ತೊಂದರೆ ಪಡುತ್ತಿರಾ ನನಗೆ ಒಂದು ಎರಡು ದಿನ ಟೈಮ್ ಕೊಡ್ರಿ, ನಿಮ್ಮ ಕೆಲಸಾ ಪಟಾಪಟ್ಟ ಮುಗಿಸಿಕೊಡುತ್ತೇನೆ , ಆದರೆ ಆ ಅಧಿಕಾರಿಗಳು ನಿಮ್ಮ ಕೆಲಸ ಮಾಡಿ ಕೊಡಲು ಬಾಳ ದುಡ್ಡು ಕೇಳುತ್ತಾರೆ ನಾನು ಕಡಿಮೆ ಮಾಡಿಸುತ್ತೇನೆ” ಎಂದು ಹೇಳಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಾ ಇದ್ದಾರೆ. ಅಧಿಕಾರಿಗಳ ಜೊತೆಗೆ ಒಳ ಒಪ್ಪಂದಗಳ ಮಾಡಿಕೊಳ್ಳುವ ಮೂಲಕ ಮಧ್ಯವರ್ತಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಭೂ ಮಾಲಿಕರನ್ನು ಅದಲು ಬದಲು ಮಾಡಿದ ಉದಾಹರಣೆಗಳು ಸಾಕಷ್ಟು ಇದ್ದಾವೆ. ಜನರು ತಮ್ಮ ಸ್ವಂತ ದಾಖಲೆಗಳನ್ನು ಪಡೆಯಲು ಹಣ ಕಳೆದುಕೊಳ್ಳುವ ಪರಿಸ್ಥಿತಿ ನಗರ ಸಭೆಯಲ್ಲಿ ನಿರ್ಮಾಣವಾಗಿದೆ.
ಜಿಲ್ಲಾಡಳಿತವು ನಗರ ಸಭೆಯಲ್ಲಿ ನಡೆಯುತ್ತಿರು ಮಧ್ಯವರ್ತಿಗಳ ಹಾವಳಿಯನ್ನು ನಿಲ್ಲಿಸಿ, ಜನಸಾಮಾನ್ಯರಿಗೆ ಆಗುತ್ತಿರುವ ಅನ್ಯಾಯವನ್ನು ಮತ್ತು ಅನ್ಯಮಾರ್ಗದಿಂದ ಅಧಿಕಾರಿಗಳ ಜೇಬು ಸೇರುತ್ತಿರುವ ಅಮಾಯಕರ ಹಣನ್ನು ತಡೆದು ಸೂಕ್ತ ಕ್ರಮ ಜರುಗಿಸಬೇಕಾಗಿದೆ.

ಬಾಕ್ಸ
ಪೌರಾಯುಕ್ತರನ್ನು ಕೇಳಿದರೆ ನಗರ ಸಭೆಗೆ ಜನಸಾಮಾನ್ಯರು ಬಂದಾಗ ಬೇಗ ಬೇಗನೆ ಕೆಲಸ್ಸಾ ಮಾಡಿಕೊಟ್ಟರೆ ಯಾವ ಮಧ್ಯವರ್ತಿಗಳು ಹುಟ್ಟಿಕೊಳ್ಳುವುದಿಲ್ಲ ಹಾಗೂ ಯಾವುದೇ ಮಧ್ಯವರ್ತಿಗಳು ಬರದಂತೆ ನೋಡಿಕೊಳ್ಳುವಂತೆ ಆಗುತ್ತದೆ ಎಂದು ಮೌಖಿಕವಾಗಿ ಹೇಳಿದ್ದೇವೆ ಎಂದು ಹಾರಿಕೆಯ ಉತ್ತರವನ್ನು ನೀಡುತ್ತಾರೆ.