ಹಾವೇರಿ: ಉಲ್ಬಣಿಸಿದ ನೀರಿನ ಸಮಸ್ಯೆ


ಹಾವೇರಿ,ಮೇ.19: ಹಾವೇರಿಯಲ್ಲಿ ಅಕ್ಷರಶಃ ಭೂಮಿ ಕಾದ ಕಾವಲಿಯಂತಾಗಿದೆ. ಬಿಸಿಲಿನ ಧಗೆಗೆ ಅಂತರ್ಜಲಮಟ್ಟ ತೀವೃವಾಗಿ ಕುಸಿದಿದ್ದು ಹಾವೇರಿನಗರದ ಜನತೆಯ ನೀರಿನ ದಾಹ ತಣಿಸುವ ಬಹುತೇಕ ಕೊಳವೆಬಾವಿಗಳಲ್ಲಿ ನೀರಿನಮಟ್ಟ ತೀವೃವಾಗಿ ಕುಸಿದಿದ್ದು,
ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಕುಸಿದ ಕಾರಣಕ್ಕೆ ಕೊಳವೆಬಾವಿಗಳು ಹಿಡಿದು ಬಿಟ್ಟು ನೀರು ಹೊರಹಾಕುತ್ತಿವೆ. ನಗರದ
ಕೆಲವೊಂದ ಓಣಿಗಳಲ್ಲಿ, ಬಡಾವಣೆಗಳಲ್ಲಿ ನೀರು ಲಭ್ಯವಾಗದೇ ತೀವೃವಾಗಿ ನೀರಿನ ಹಾಹಾಕಾರ ಉಂಟಾಗಿದೆ. ಜನತೆ ಸಮಸ್ಯೆಗೆ ಸ್ಪಂದಿಸಬೇಕಾದಸ್ಥಳೀಯ ನಗರಸಭೆಯ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದಾರೆ. ಇನ್ನು ನಗರಸಭೆಯ ಆಡಳಿತ ಮಂಡಳಿಯವರಂತು ನೀರಿನ ಸಮಸ್ಯೆಗೂ ತಮಗು ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿರುವುದು ನಗರದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಹಾವೇರಿ ನಗರಕ್ಕೂ ನೀರಿನ ಸಮಸ್ಯೆಗೆ ಬಿಡಿಸಲಾರದ
ನಂಟಿದೆ. ಅದು ಮಳೆಗಾಲ ಇರಲಿ, ಚಳಿಗಾಲ ಇರಲಿ, ಬೇಸಿಗೆಯ ಕಾಲ ಬರಲಿ ಯಾವಾಗ ನೋಡಿದರೂ ನಗರಕ್ಕೆ ನೀರಿನ ಸಮಸ್ಯೆ ಕಾಡುತ್ತಲೇ ಇರುತ್ತದೆ. ಬೇಸಿಗೆ ಈ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಮನೆಗಳಲ್ಲಿ ಬಟ್ಟೆ ತೊಳೆಯಲು, ಪಾತ್ರೆ ತೊಳೆಯಲು
ನೀರಿಲ್ಲ. ಇನ್ನು ಶೌಚಾಲಯಗಳ ಸ್ಥಿತಿಯಂತೂ ಹೇಳವುದೇ ಬೇಡ. ನಗರದಲ್ಲಿ ಕುಡಿಯುವ ನೀರಿಗೆ ಪರದಾಡು ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣ ನಗರದಲ್ಲಿನ ಬಹುತೇಕ ಬಡಾವಣೆಗಳಲ್ಲಿ ನಗರಸಭೆಯ ಕೊಳವೆಬಾವಿಗಳು ನೀರು ಪೂರೈಸುತ್ತವೆ. ಬೇಸಿಗೆಯ ದಿನಗಳಲ್ಲಿ ಅಂತರ್ಜಲಮಟ್ಟ ಪಾಥಾಳಕ್ಕೆ ಕುಸಿದಿರುವ ಕಾರಣಕ್ಕೆ ಕೆಲವು ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಇನ್ನು ಕೆಲವು ಕೊಳವೆಬಾವಿಗಳು ದುರಸ್ತಿಗೆ ಬಂದಿದ್ದು, ಯಂತ್ರಗಳು ಕೆಟ್ಟಿರುವ ಕಾರಣಕ್ಕೆ ನಗರದ ಕೆಲವ ಬಡಾವಣೆಗಳಲ್ಲಿ ನೀರು ಸಿಗುತ್ತಿಲ್ಲ. ಜನತೆ ನಗರಸಭೆಯ ಅಧಿಕಾರಿಗಳ ಗಮನಕ್ಕೆ ಹಾಗೂ ಆಡಳಿತ ಮಂಡಿಯಯವರ ಗಮನಕ್ಕೆ ತಂದರ ಯಾವುದೇ ಪ್ರಯೋಜನವಾಗುತ್ತಿಲ್ಲ. ವಯಸ್ಸಾದವರು, ಅನಾರೋಗ್ಯ ಪೀಡಿತರು ನೀರು ತರಲು ಪರದಾಡುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು ಈಬಗ್ಗೆ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಚುನಾವಣೆಯ ನೀತಿ ಸಂಹಿತೇ ಮುಕ್ತಾಯವಾಗಿದೆ. ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಜರುಗಿಸದೇ ಜನರನ್ನು ಕಷ್ಟಕ್ಕೆ ನೂಕಿದ್ದಾರೆ. ನಗರಸಭೆಯ ಅಧಿಕಾರಿಗಳು
ಹಾಗೂ ಸದಸ್ಯರುಗಳಿಗೆ ಹಿಡೀ ಶಾಪ ಹಾಕುತ್ತಿದ್ದಾರೆ. ಜನರ ಆಕ್ರೋಶದ ಕಟ್ಟೆ ಒಡೆಯುವ ಮನ್ನ ಅಧಿಕಾರಿಗಳು, ಜನ ಪ್ರತಿನಿಧಿಗಳು ಕುಂಭಕರ್ಣ
ನಿದ್ದೆಯಿಂದ ಎಚ್ಚೆತ್ತುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಬೇಕು ಎಂಬುದು ಜನತೆಯ ಆಗ್ರಹವಾಗಿದೆ.