ಭಾಲ್ಕಿ: ಮಾ.25:69ನೇ ದಿನದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮವು ನಾಗಮ್ಮ ವೈಜಿನಾಥ ದಾಬಶೆಟ್ಟಿ ಚನ್ನಬಸವ ಆಶ್ರಮ ಎದುರಿಗೆ ಗಂಜ ಭಾಲ್ಕಿ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೆವರು ಹಾಗೂ ಪೂಜ್ಯಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರು ವಹಿಸಿದ್ದರು. ದಾಬಷೆಟ್ಟೆ ಪರಿವಾರದವರು ಬಸವಗುರು ಪೂಜೆ ಸಲ್ಲಿಸಿದರು. ಜೈರಾಜ ದಾಬಶಟ್ಟೆ ಸ್ವಾಗತಿಸಿದರು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭವಾನಿ ದಾಬಶೆಟ್ಟೆ ವಚನ ಗಾಯನ ಮಾಡಿದರು. ಶಿವರುದ್ರಯ್ಯ ಸ್ವಾಮಿ ಭಾಲ್ಕಿ ಅವರು ಮಾದಕ ವಸ್ತುಗಳು ಸೇವಿಸದಂತೆ ಶರಣರು ಕೊಟ್ಟ ಮಾರ್ಗದರ್ಶನದ ಕುರಿತು ಅನುಭಾವ ಹೇಳಿದರು. ಮಾದಕವಸ್ತು ಸೇವನೆಯಿಂದ ಜೀವನ ನಾಶವಾಗುತ್ತದೆ. ಇಂದು ಯುವಕರು ದುಶ್ಚಟಕ್ಕೆ ಒಳಗಾಗಿ ಸಮಾಜಕ್ಕೆ ಮಾರಕವಾಗಿದ್ದಾರೆ. ಇದನ್ನು ಬಿಟ್ಟು ಬದುಕುವುದು ತುಂಬಾ ಅವಶ್ಯಕವಾದ ವಿಷಯವಾಗಿದೆ. ಇಂದಿನ ಯುವ ಪೀಳಿಗೆ ತಂಬಾಕು ಸಿಗರೇಟ್, ಮದ್ಯಪಾನ ಅನೇಕ ಮಾದಕವಸ್ತುಗಳ ಬಲೆಗೆ ಬಿದ್ದು ಏಷ್ಟೋ ಮನೆಯ ನೆಮ್ಮದಿ ಹಾಳು ಮಾಡಿದೆ. ತಂಬಾಕು ತಮ್ ಬಾಕು ಅಂದರೆ ತನ್ನ ಚಾಕು. ಇದರ ಸೇವನೆ ಒಂದು ತರಹದ ಆತ್ಮಹತ್ಯ ಹೇಗೆಂದರೆ ಸಾವು ಸಂಭವಿಸುವುದು ಎಂದು ತಿಳಿದು ಸಹ ಇದನ್ನು ತಿನ್ನುವರು. ತಂಬಾಕು, ಸಾರಾಯಿ, ಸಿಂಧಿ ಗಾಂಜಾ ಸೇವನೆಯಿಂದ ಹೃದಯ ಸಂಭದಿತ ರೋಗಗಳು, ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಹೇಳುವರು. ಜಗತ್ತಿನಲ್ಲಿ ಅತಿ ದಡ್ಡ ಪ್ರಾಣಿ ಎಂದು ಕರೆಯಿಸಿಕೊಳ್ಳುವ ಕತ್ತೆ ಸಹ ತಂಬಾಕಿನ ಎಲೆ ತಿನ್ನುವುದಿಲ್ಲ, ಎಲ್ಲಾ ಪ್ರಾಣಿಗಳಲ್ಲಿ ಹೊಲಸಿನಲ್ಲಿ ಇರುವ ಹಂದಿಯು ಸಹ ಇದನ್ನು ತಿನ್ನುವುದಿಲ್ಲ, ಆದರೆ ಅತ್ಯಂತ ಶಕ್ತಿಶಾಲಿ ಬುದ್ಧಿಶಾಲಿ ಮನುಷ್ಯ ಇದನ್ನು ತಿನ್ನುತ್ತಿರುವದು ತುಂಬಾ ದುರದೃಷ್ಟಕರ. ಇದರ ಅಡ್ಡ ಪರಿಣಾಮದ ಅರಿವಿದ್ದರೂ ಸಹ ಅದನ್ನು ತಿನ್ನುವುದು ಮೂರ್ಖತನ. ಬಸವ ಪ್ರಾರ್ಥನೆಯನ್ನು ಶ್ರೀದೇವಿ ಶಾಂತಯ್ಯ ಸ್ವಾಮಿ ಭಾಲ್ಕಿ ನೆರವೇರಿಸಿದರು. ಪ್ರೇಮಲತಾ ಶಿವರುದ್ರಯ್ಯ ಸ್ವಾಮಿ ಭಾಲ್ಕಿ ನಿರೂಪಿಸಿದರು. ಧನರಾಜ್ ಬಂಬುಳಗೆ, ಜಯಪ್ರಕಾಶ್ ಕುಂಬಾರ, ಸಂಗಮೇಶ ಬಿರಾದಾರ, ಕುಶಾಲ್ ಸಾವಳೆ ಹಾಗೂ ಅನೇಕ ಶರಣ ಶರಣೆಯರು ಭಕ್ತರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ದತ್ತು ಕಾಟ್ಕರ್, ಬಸವರಾಜ ಮರೆ, ಚನ್ನಬಸವ ಶಿವರುದ್ರಯ್ಯ ಸ್ವಾಮಿ, ಮಲ್ಲಮ್ಮ ನಾಗನಕೆರೆ, ಶ್ರೀದೇವಿ ಶಾಂತಯ್ಯ ಸ್ವಾಮಿ, ರಾಜಶೇಖರ್ ಮಠಪತಿ ಅವರನ್ನು ಗೌರವ ಸನ್ಮಾನ ಮಾಡಲಾಯಿತು. ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.