ಹಾವು ಕಡಿದು ರೈತನ ಸಾವು

ಭಾಲ್ಕಿ:ಮೇ.30: ತಾಲೂಕಿನ ಬ್ಯಾಲಹಳ್ಳಿ(ಕೆ) ಗ್ರಾಮದ ಯುವ ರೈತ ಚಂದ್ರಕಾಂತ ಚನ್ನಬಸಪ್ಪಾ ನರಸಗೊಂಡ (45) ರವಿವಾರ ಹೊಲದಲ್ಲಿ ಕೆಸಲ ಮಾಡುತ್ತಿರುವಾಗ ಹಾವು ಕಡಿದು ಮೃತ ಪಟ್ಟಿದ್ದಾನೆ. ಮೃತರು ಹೆಂಡತಿ ಸವಿತಾ, ಒಬ್ಬ ಹೆಣ್ಣು ಮಗಳು ಮತ್ತು ಒಬ್ಬ ಗಂಡು ಮಗ ಸೇರಿದಂತೆ ಅಪಾರ ಬಂಧು ಬಳಗವನ್ನಗಲಿದ್ದಾರೆ. ಮೃತ ರೈತರಿಗೆ ತಾಲೂಕಿನ ವಿವಿಧ ಬ್ಯಾಂಕ್ ಗಳಲ್ಲಿ 8 ಲಕ್ಷಗಳವರೆಗೆ ಸಾಲವಿದೆ. ಈ ಕುರಿತು ದನ್ನೂರ(ಹೆಚ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.