ಹಾವು ಕಡಿದು ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ನೆರವು

ಬೀದರ,ಆ.20: ಭಾರತೀಯ ಜನತಾ ಪಾರ್ಟಿಯ ಕಲಬುರಗಿಯ ಸಂಘಟನಾ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ ಅವರು ಬೀದರ ತಾಲೂಕಿನ ಅಲಿಯಂಬರ (ಹಳೆಂಬರ) ಗ್ರಾಮದ ರೈತ ಮಹಿಳೆ ಮಹಾದೇವಿ ವಿಶ್ವನಾಥ ಮರಕಲೆ ಅವರು ದಿನಾಂಕ: 15-08-2023ರಂದು ಹಾವು ಕಡಿದು ಮೃತಪಟ್ಟಿರುತ್ತಾರೆ. ಮೃತ ಮಹಿಳೆಯ ಕುಟುಂಬಕ್ಕೆ ಇಂದು ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಆರ್ಥಿಕ ನೆರವು ನೀಡಿ, ಪರಿವಾರದ ಸದಸ್ಯರಿಗೆ ಸರ್ಕಾರದಿಂದ ಉಚಿತ ಆರ್ಥಿಕ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾದ ಉಪಾಧ್ಯಕ್ಷರಾದ ದೀಪಕ ಗಾದಗಿ, ಕರಬಸಪ್ಪ ಉಪ್ಪೆ, ನಾಗಶೆಟ್ಟಿ ಬಾಬಶೆಟ್ಟಿ, ಬಾಬುರಾವ ಮದನಾಪೂರೆ, ಶಿವಕುಮಾರ ಮಡಿವಾಳ, ಸಂಜುಕುಮಾರ ಡೊಣೆ, ನಾಗೇಶ ಬಾಬಶೆಟ್ಟಿ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.