ಹಾವು ಕಚ್ಚಿ ಮಹಿಳೆ ಸಾವು

ಚಿಂಚೋಳಿ,ಸೆ.16-ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಚಿಂಚೋಳಿ ತಾಲ್ಲೂಕಿನ ಸೋಮಲಿಂಗದಳ್ಳಿಯಲ್ಲಿ ನಡೆದಿದೆ.
ನಾಗಮ್ಮ ಗಂಡ ಬಾಲಪ್ಪ ಜನ್ಮುಲ್ (49) ಮೃತಪಟ್ಟವರು.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಮೃತಪಟ್ಟಿದ್ದು, ಮೃತ ಮಹಿಳೆಗೆ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ ಎಂದು ತಿಳಿದುಬಂದಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.