
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ : ಏ.11 ತಾಲೂಕಿನ ಮಾಲವಿ ಗ್ರಾಮದಲ್ಲಿ ಹಾವು ಕಚ್ಚಿ 7 ವರ್ಷದ ಮಗುವೊಂದು ಸಾವನ್ನಾಪ್ಪಿರುವ ಘಟನೆ ಭಾನುವಾರ ಮದ್ಯಾಹ್ನ ನೆಡೆದಿದೆ. ತಾಲೂಕಿನ ಮಾಲವಿ ಗ್ರಾಮದ ಬಡಿಗೇರು ಕರಿಬಸಪ್ಪ ಹಾಗೂ ಕೊಟ್ರಮ್ಮ ಎಂಬ ದಂಪತಿಗಳ ಮಗ ಆಕಾಶ್ ತಮ್ಮ ಮನೆಯಲ್ಲಿ ಟಿ ವಿ ನೋಡುವ ಸಂದರ್ಭದಲ್ಲಿ ಹಾವು ಕಚ್ಚಿದೆ.ತಕ್ಷಣವೇ ತಾಲೂಕು ಸಾರ್ವಜನಿಕ ಆಸ್ಪತ್ರೆ ಕರೆದುಕೊಂಡು ಬರಲಾಯಿತು.
ಬಳಿಕ ವೈದ್ಯರ ಸಲಹೆ ಮೇರೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಲಿಸದೇ ಮಗು ಸೋಮವಾರ ಸಾವನ್ನಾಪ್ಪಿದ ದಾರುಣ ಘಟನೆ ನೆಡೆದಿದೆ.
ಮಾಲವಿ ಗ್ರಾಮದ ಬಡಿಗೇರು ಕರಿಬಸಪ್ಪ ಕೊಟ್ರಮ್ಮ ಎಂಬ ಬಡ ಕೂಲಿ ಕಾರ್ಮಿಕ ದಂಪತಿಗಳಿಗೆ ಎರಡು ಗಂಡು ಮಕ್ಕಳಿದ್ದರು ಮೊದಲನೇಯ ಮಗ ಮನು ಎಂಬ ಮಗ 5 ನೇ ತರಗತಿ ಹಾಗೂ ಎರಡನೇ ಮಗ ಮೃತ ಆಕಾಶ್ 2 ನೇ ತರಗತಿ ಮಾಲವಿ ಸರ್ಕಾರಿ ಶಾಲೆಯಲ್ಲಿ ಓದುತಿದ್ದರು.
ಮಗನನ್ನು ಕಳೆದುಕೊಂಡ ತಂದೆತಾಯಿ ಕುಟುಂಬ ವರ್ಗದವರ ನೋವು ಆಕ್ರಂದನ ಮನಕಲಕುವಂತಿತ್ತು. ಸೋಮವಾರ ಮಾಲವಿ ಗ್ರಾಮದ ರುದ್ರಭೂಮಿಯಲ್ಲಿ ಮದ್ಯಾಹ್ನ 3.30 ಸಮಯದಲ್ಲಿ ಮಗುವಿನ ಅಂತ್ಯ ಸಂಸ್ಕಾರ ನೆರವೇರಿತು.