ಹಾವು ಕಚ್ಚಿ ಡಿಗ್ರಿ ವಿದ್ಯಾರ್ಥಿ ಸಾವು

ಸೇಡಂ, ನ,10: ಸೇಡಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಮ್. ಓದುತ್ತಿರುವ ವಿದ್ಯಾರ್ಥಿ ತಾಲೂಕಿನ ಸಂಗಾವಿ ಎಮ್ ಗ್ರಾಮದ ಯುವಕ ಬಸವರಾಜ ತಂದೆ ಭೀಮರಾವ್ ಪೂಜಾರಿ ಅವರು ನಿನ್ನೆ ಮನೆಯಲ್ಲಿರುವ ಕುರಿ ಕಾಯಲು ಬೇಣೆತೊರೆ ನದಿ ಕಡೆ ತೆರಳಿದಾಗ ಮಧ್ಯಾಹ್ನ ಹಾವು ಕಚ್ಚಿ ಸಾವು ಸಂಭವಿಸಿದೆ ಎನ್ನಲಾಗಿದೆ.