ಹಾವು ಕಚ್ಚಿ ಓರ್ವನ ಸಾವು

ಕಲಬುರಗಿ,ನ.04: ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದ್ದರಿಂದ ಓರ್ವ ಅಸುನೀಗಿದ ಘಟನೆ ತಾಲ್ಲೂಕಿನ ಬಸನಾಳ್ ಗ್ರಾಮದಲ್ಲಿ ವರದಿಯಾಗಿದೆ. ಮೃತನಿಗೆ ಮಹಾಂತಪ್ಪ ಎಂದು ಗುರುತಿಸಲಾಗಿದೆ.
ಕಳೆದ 2ರಂದು ಹೊಲದಲ್ಲಿ ಕೆಲಸ ಮಾಡುವಾಗ ಸಂಜೆ ಹಾವು ಕಚ್ಚಿದೆ. ಅಸ್ವಸ್ಥಗೊಂಡ ಅವರಿಗೆ ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಸಹ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ.