ಹಾವುಗಳ ವಿಷ ಕಳ್ಳ ಸಾಗಾಟ: ಆರು ಸೆರೆ

ಭುವನೇಶ್ವರ, ಮಾ.೨೯- ಹಾವುಗಳ ವಿಷ ಕಳ್ಳ ಸಾಗಾಟ ಮಾಡುವ ಜಾಲವನ್ನು ಭುವನೇಶ್ವರ ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ ಹಾಗೂ ಮಹಿಳೆ ಸೇರಿದಂತೆ ೬ ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ೧ ಲೀಟರ್ ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್‌ಒ) ಅಶೋಕ್ ಮಿಶ್ರಾ ಹೇಳಿದ್ದಾರೆ. ನಾವು ಬಾರ್‌ಗಢದಿಂದ ೧ ಲೀಟರ್ ಹಾವಿನ ವಿಷ ಹಾಗೂ ತಲಾ ಐದು ಮಿಲಿ ಲೀಟರ್‌ನ ಐದು ಸೀಸೆಗಳನ್ನು ವಶಪಡಿಸಿಕೊಂಡಿದ್ದೇವೆ. ಬಾಲಸೂರಿನ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದೇವೆ. ಈ ವಿಷಕ್ಕೆ ಮಾರುಕಟ್ಟೆಯಲ್ಲಿ ೧ ಕೋಟಿ ರೂಪಾಯಿ ಮೌಲ್ಯವಿದೆ ಎಂದು ಅವರು ತಿಳಿದ್ದಾರೆ. ಈ ಒಂದು ಲೀಟರ್ ವಿಷವನ್ನು ೨೦೦ ನಾಗರ ಹಾವುಗಳಿಂದ ಸಂಗ್ರಹಿಸಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ.