ಹಾವುಗಳ ಬಗ್ಗೆ ಭಯಬೇಡರಕ್ಷಣೆ ಮಾಡಿ: ಚಂದ್ರಶೇಖರ್ ನಾಯಕ್

module: NormalModule; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 48.0;


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,29- ಹಾವು ಎಂದ ತಕ್ಷಣ ಭಯ, ಮೂಡನಂಬಿಕೆಗಳು ಹೆಚ್ಚು ಅದಕ್ಕಾಗಿ ಅವನ್ನು ಹಿಡಿಯುವ, ರಕ್ಷಣೆ ಮಾಡುವ ಕಾರ್ಯ ಮಾಡುವವರಿಗಾಗಿ ಒಂದು ದಿನದ ಕಾರ್ಯಾಗಾರ ಇಂದು ನಗರದಲ್ಲಿನ ಅರಣ್ಯ ಇಲಾಖೆಯ ಸಭಾಂಗಣದಲ್ಲಿ ನಡೆಯಿತು.
ಅರಣ್ಯ ರಕ್ಷಣಾಧಿಕಾರಿ ಚಂದ್ರಶೇಖರ್  ನಾಯಕ ಅವರು ಕಾರ್ಯಾಗಾರ ಉದ್ಘಾಟನೆ ಮಾಡಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಮಾತನಾಡಿ, ನಮ್ಮಲ್ಲಿ ಅನೇಕರು ಹಾವು ಹಿಡಿಯುವ ಜನರು ಇದ್ದಾರೆ. ಆದರೆ ಸರ್ಕಾರದ ನಿಯಮಗಳಂತೆ ಹಾವು ಹಿಡಿದು ಬಿಡುವ ಪ್ರಕ್ರಿಯೆ ಆಗುತ್ತಿಲ್ಲದ ಕಾರಣ ಈ ಕಾರ್ಯಾಗಾರ ಹಮ್ಮಿಕೊಂಡಿದೆ. ಯಾರು ನಿಯಮಗಳ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಅವರಿಗೆ ಪ್ರಮಾಣ ಪತ್ರ ನೀಡಲಿದೆಂದರು.  ವಿಜಯನಗರ ಜಿಲ್ಲೆಯ ಉಪ  ಹರ್ಷನಾಥ ಉಪಸ್ಥಿತರಿದ್ದರು.
ಉರಗ ತಜ್ಞರಾದ ಡಾ.ಅಶೋಕ, ಆದಿತ್ಯ ವಟ್ಟಂ, ವೇಣುಗೋಪಾಲ್ ನಾಯ್ಡು, ಅಮಿತ್ ತಾಪ್ಸೆ ಅವರು ಹಾವುಗಳ ವಿಧ, ಅವುಗಳ ಗುಣದರ್ಮ, ಹೇಗೆ ವರ್ತನೆ ಮಾಡುತ್ತವೆ. ಅವುಗಳನ್ನು ಹೇಗೆ ಹಿಡಿಯಬೇಕು, ಹಿಡಿಯಲು ಬೇಕಾದ ಸಾಮಾಗ್ರಗಿಗಳು ಏನು ಮುಂತಾದ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ಪರಿಸರ ತಜ್ಞ ಸಮದ್ ಕೊಟ್ಟೂರು ಕಾರ್ಯಕ್ರಮ ನಿರ್ವಹಿಸಿದರು.