ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟ ಅಪ್ಪರ್ ಹುಸೇನ

ರಾಯಚೂರು, ಏ.೨೭- ಹಾವುಗಳನ್ನು ಮರಳಿ ಕಾಡಿಗೆ ಸುರಕ್ಷಿತವಾಗಿ ಬಿಡುಗಡೆ ಮಾಡುವ ಕಾರ್ಯಕ್ರಮ ಫ್ರೆಂಡ್ಸ್ ವೈಲ್ಡ್ ಲೈಫ್ ಸೋಸೈಟಿ ವತಿಯಿಂದ ಹಮ್ಮಿಕೊಂಡಿದ್ದರು.
ಸುಮಾರು ೩೨ ಹಾವುಗಳನ್ನು ನಗರದ ವಿಭಿನ್ನ ಪ್ರದೇಶಗಳಿಂದ ರಕ್ಷಿಸಿ , ಸುರಕ್ಷಿತವಾಗಿ ಅವುಗಳನ್ನು ಮರಳಿ ಕಾಡಿಗೆ ಬಿಡಲಾಯಿತು.
ಮುಂದಿನ ದಿನಗಳಲ್ಲಿ ರಾಯಚೂರು ನಗರದಲ್ಲಿ ಹಾವಿನ ಉದ್ಯಾನವನ ನಡೆಸುವುದು ನಮ್ಮ ಉದ್ದೇಶ . ಆದ್ದರಿಂದ ಜನರಿಗೆ ವಿಷೇಶವಾಗಿ ಮಕ್ಕಳಿಗೆ ಶಿಕ್ಷಣ ನೀಡಲು ಸಹಾಯ ಮಾಡುತ್ತದೆ.ಈ ಸಂದರ್ಭದಲ್ಲಿ ಎಲ್ಲಾ ರಾಜಕಾರಿಣಿಗಳು ಮತ್ತು ಸಾಮಾಜಿಕ ಮುಖಂಡರು ನಮಗೆ ಸಹಾಯ ಮಾಡಬೇಕೆಂದು ವಿನಂತಿಸಿದರು. . ಹಾವುಗಳು ಕಂಡರೆ ಈ ನಂ ಕರೆ ಮಾಡಿ ೯೯೦೦೧೨೭೮೬೧ ಪ್ರಾಣಿಗಳನ್ನು ಸಂರಕ್ಷಿಸಲು ಮುಂದಾಗಿ.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ
ನೇತಾಜಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಬಸವರಾಜ ನಾಯಕ
ಮುದುಗಲ್ ಪೊಲೀಸ್ ಠಾಣೆಯ ಪಿ.ಎಸ್.ಐ ಅವಿನಾಶ ಕಾಂಭೆ, ಎ.ಇ.ಇ. ರವೀಶ್ ಕುಮಾರ್. ಹರೀಶನ್ ಬಡಿಗೇರಾ, ಮಹದೇವ ನಾಯಕ ,ರಂಗನಾಥ ನಾಯಕ ,ನಾಗರಾಜ ಉಪ್ಪಾರ್, ಹರಿ ನಾಯಕ ರಹೀಮ, ಸೊಹೇಲ್ , ಆಶರ್ ಹುಸೇನ್ , ಉದಯ್ , ಮುಕ್ತಿಯಾರ್ , ಖಾಜಾ,ಇದ್ದರು.