ಹಾವಿನಹಾಳು ಗ್ರಾಮದಲ್ಲಿ ರೇಣುಕಾ ಮಹಾತ್ಮೆ ಬಯಲಾಟ ಪ್ರದರ್ಶನ ”


ಸಂಜೆವಾಣಿ ವಾರ್ತೆ
ಸಿರಿಗೇರಿ ಸೆ16. ಸಮೀಪದ ಹಾವಿನಹಾಳು ಗ್ರಾಮದಲ್ಲಿ ಅ.14 ರಂದು ಶನಿವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಸಹಯೋಜಕತ್ವದಲ್ಲಿ, ಸಿದ್ದಲಿಂಗ ಶಿವಾಚಾರ್ಯ ಕಲಾ ಟ್ರಸ್ಟ್ ವತಿಯಿಂದ ರೇಣುಕಾ ಮಹತ್ಮೆ ಎಂಬ ಪೌರಾಣಿಕ ಬಯಲಾಟವನ್ನು ಪ್ರದರ್ಶಿಸಲಾಯಿತು. ಎಂ.ಬಸವರಾಜ ಕಲಾತಂಡದವರು ಬಯಲಾಟವನ್ನು ಪ್ರಸ್ತುತಪಡಿಸಿದರು. ಪ್ರಾರಂಭದಲ್ಲಿ ಗ್ರಾಮದ ಶಿವಶಂಕರಗೌಡ ಮತ್ತು ಮುಖಂಡರಾದ ಟಿ.ಬೀಮನಾಯಕ, ಹೊಸೂರು ಹನುಮನಾಯ್ಕ, ಮಳ್ಳೆಬುಶಪ್ಪ, ಮೆಟ್ರಿ ಚಂದ್ರಪ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. ರೇಣುಕಾ ಪಾತ್ರದಲ್ಲಿ ಜಿ.ಜ್ಯೋತಿ ಕೂಡ್ಲೀಗಿ, ಜಮದಗ್ನಿಯಾಗಿ ಭುವನೇಶ್ವರಸ್ವಾಮಿ, ರೇಣುಕರಾಜನಾಗಿ ಸೋಮನಾಯ್ಕ, ಕಾರ್ತವೀರನಾಗಿ ಬಸವರಾಜಗೌಡ, ಪರಶುರಾಮನಾಗಿ ವೀರೇಶನಾಯ್ಕ, ಮೇನಕೆ ಮತ್ತು ಸುದತಿ ಪಾತ್ರದಲ್ಲಿ ಬಿ.ಸುಮ ಇವರು ಉತ್ತಮ ಅಭಿನಯ ನೀಡಿದರು. ಹೆಚ್.ಸಿವರುದ್ರಪ್ಪ ಇವರ ಸಂಗೀತದಲ್ಲಿ, ಸಿರಿಗೇರಿ ಭೀಮೇಶ ಮದ್ದಲೆ ನುಡಿಸಿದರು. ಸಾರಥಿಯಾಗಿ ಹೆಚ್.ನಾಗರಾಜ ಮುದ್ದಟನೂರು ಇವರು ನಿರ್ವಹಿಸಿದರು. ಹಾವಿನಹಾಳು ಮತ್ತು ಪಕ್ಕದ ಗ್ರಾಮಗಳ ಬಯಲಾಟ ಪ್ರಿಯರು ನಾಟಕ ನೋಡಿ ಖುಷಿಪಟ್ಟರು ಎಂದು ಬಯಲಾಟ ಅಕಾಡೆಮಿ ಸದಸ್ಯರಾದ ತಿಪ್ಪೆಸ್ವಾಮಿ ಮಾಹಿತಿ ನೀಡಿದರು.