ಹಾವಿಗೆ ನಮ್ಮ ಧರ್ಮದಲ್ಲಿ ವಿಶೇಷ ಸ್ಥಾನಮಾನ

ವಿಜಯಪುರ :ಆ.3: ನಾಗಗಳನ್ನು ಆರಾಧಿಸುವ ನಾಗರ ಪಂಚಮಿ ಹಬ್ಬದಂದು ನಾಗರ ಹಾವಿಗೆ ನಮ್ಮ ಧರ್ಮದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಸಕಲ ಚರಾಚರ ಜೀವಿಗಳಲ್ಲಿಯೂ ಭಗವಂತನಿದ್ದಾನೆ ಎಂದು ನಂಬಲಾಗಿದೆ. ಅಲ್ಲದೇ ಪಶುಪಕ್ಷಿ ಪ್ರಾಣಿಗಳನ್ನು ದೇವರೆಂದು ಪೂಜಿಸುವ ಪರಿವಾರ ನಮ್ಮ ಸಂಸ್ಕøತಿಯಲ್ಲಿದೆ.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬವಾದ ಇಂದು ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣದ ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಶ್ರೀಮತಿ ಭಾರತಿ ಟಂಕಸಾಲಿ ಹಾಗೂ ಪದಾಧಿಕಾರಿಗಳು ಬಾಗಲಕೋಟ ರಸ್ತೆಯಲ್ಲಿರುವ ಶ್ರೀ ವಜ್ರಹನುಮಾನ ದೇವಸ್ಥಾನದಲ್ಲಿ ನಾಗಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು.