(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಜು.11:ಮೀಣ ರಸ್ತೆಗಳು ಅಭಿವೃದ್ಧಿ ಸಂಕೇತವೆಂದು ಅವುಗಳ ಸುಧಾರಣೆಯಿಂದ ಜನರ ಆರ್ಥಿಕ ಮಟ್ಟ ಸುಧಾರಿಸುತ್ತದೆ ಆದರೆ ಅವೇ ರಸ್ತೆಗಳು ಹಾಳಾದರೆ ಸಂಚಾರ ಕಷ್ಟವಾಗಿ ಸಮಸ್ಯೆ ಉದ್ಭವವಾಗುತ್ತದೆ.
ತಾಲೂಕಿನ ಗ್ರಾಮೀಣ ರಸ್ತೆಗಳು ತೀರಾ ಹದಗೆಟ್ಟಿದ್ದು. ಜನರು ಹೈರಾಣಾಗಿದ್ದಾರೆ. ಅದರಲ್ಲಂತೂ ಕಿತ್ತೂರ ತಾಲೂಕಿನ ದೇವಗಾಂವ ಹೊಸೂರ ಕೊನೆಯ ರಸ್ತೆಯಾದ ಬೆಣಚಗೇರಿಗೆ ಕೂಡುವ ರಸ್ತೆ ರಾಡಿಮಯವಾಗಿ ತಗ್ಗು-ಗುಂಡಿ ಸೃಷ್ಟಿಯಾಗಿವೆ. ಆ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ.
ಅದೇ ರಸ್ತೆಗೆ ಹೊಂದಿಕೊಂಡಿರುವ ರೈತರ ಜಮೀನುಗಳಿರುತ್ತವೆ ಮತ್ತು ಈರಪ್ಪನ ಗುಡ್ಡಕ್ಕೆ ಹೋಗುವ ಮಾರ್ಗವು ಅದೆ. ಈ ಹಿಂದೆ ಮೇಟ್ಲಿಂಗ್ ಮಾಡಿ ಬಹುದಿನ ಕಳೆದವು ಅಲ್ಲಿಂದ ಇಲ್ಲಿವರೆಗೂ ರಸ್ತೆ ದುರಸ್ಥಿ ಕಂಡಿಲ್ಲ. ಇದಕ್ಕೆ ಸಂಭಂದಪಟ್ಟ ಯಾವೊಬ್ಬ ಅಧಿಕಾರಿಯು ಗಮನಹರಿಸಿಲ್ಲ. ಈ ಬಾರಿ ಸುರಿದ ಮಳೆಯಿಂದ ಸಂಪೂರ್ಣವಾಗಿ ರಸ್ತೆ ಹಾಳಾಗಿದ್ದು. ಬೈಕ್ ಸವಾರರು, ಶಾಲಾ ಮಕ್ಕಳು, ಕೃಷಿಕರು, ಜಾನುವಾರುಗಳು, ಕಾಲ್ನಡಿಯವರು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ.
ಕತ್ತಲಿನಲ್ಲಿ ಮೈಮರೆತು ಜೋರಾಗಿ ಸವಾರಿ ಮಾಡಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಗುಂಡಿಗಳಲ್ಲಿಯ ನೀರಿನಿಂದ ಸುಗಮ ಸಂಚಾರಕ್ಕೆ ಅಡÀಚಣೆಯಾಗಿದೆ. ಅದೇ ರಸ್ತೆಗೆ ಹೊಂದಿಕೊಂಡಿರುವ ಸಾಕಷ್ಟು ಕುಟುಂಬಗಳಿವೆ. ಅನಾರೋಗ್ಯಕ್ಕೆ ಒಳಗಾದವರನ್ನು ಪಟ್ಟಣದ ಅಸ್ಪತ್ರೆಗೆ ಬೇಗ ಹೋಗಬೇಕಾದ ಸಂದರ್ಭ ಬಂದರೆ ಅವರನ್ನು ದೇವರೇ ಕಾಪಾಡಬೇಕಾದ ಸ್ಥಿತಿಯಿದೆ.
ಈ ರಸ್ತೆ ತುಂಬೆಲ್ಲಾ ಗುಂಡಿಗಳು ಬಿದ್ದು, ರಾಡಿಮಯವಾದರೂ ತ್ಯಾಪೆ ಹಚ್ಚುವ ಕೆಲಸ ಕೂಡಾ ಆಗಿಲ್ಲ. ಇದರಿಂದ ಪ್ರತಿನಿತ್ಯ ಸಾರ್ವಜನಿಕರು ಪರದಾಡುವಂತಾಗಿದೆ. ಇನ್ನಾದರೂ ಈ ರಸ್ತೆಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಸಂಬಂಧಪಟ್ಟ ಕಛೇರಿ ಎದುರುಗಡೆ ಪ್ರತಿಭಟನೆ ಮಾಡಲಾಗುವುದೆಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.