ಹಾಳಾದ ರಸ್ತೆ: ಜನ ಹೈರಾಣ!

??????

ವಾಡಿ; ನ.14:ಸಮೀಪದ ಬಳಿರಾಮಚೌಕ್‍ದಿಂದ ಕಮರವಾಡಿ, ಸೂಲಹಳ್ಳಿ, ಆಲೂರು ಗ್ರಾಮದವರೆಗಿನ ಸಂಪರ್ಕ ಕಲ್ಪಿಸುವ ಡಾಂಬಾರೀಕರಣ ರಸ್ತೆ ಸಂಪೂರ್ಣ ಹಾಳಾಗಿ ನಿಂತಿದೆ. ದಿನನಿತ್ಯ ಸಂಚರಿಸುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಳಿರಾಮಚೌಕ್‍ದಿಂದ ಬಸವನಖಣಿ, ಕಮರವಾಡಿ, ಸೂಲಹಳ್ಳಿ, ಬೊಮನಹಳ್ಳಿ, ಕರದಾಳ, ಚಿತ್ತಾಪುರ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಬಳಿರಾಮಚೌಕ್‍ದಿಂದ ಆಲೂರು ಕ್ರಾಸ್‍ವರೆಗೆ ಹೆಜ್ಜೆ ಹೆಜ್ಜೆಗೂ ತಗ್ಗುಗಳ ಬಿದಿದ್ದು, ಮಳೆ ನೀರಿಗೆ ಹಾಕಲಾದ ಡಾಂಬೀರಕಣ ಸಂಪೂರ್ಣ ಕಿತ್ತುಕೊಂಡು ಹೊಗಿದೆ. ರಸ್ತೆಯ ತುಂಬಾ ಜಲ್ಲಿಕಲ್ಲುಗಳು ಎದ್ದು ನಿಂತ್ತಿದ್ದು, ತಗ್ಗುಗುಂಡಿಗಳು ಮೇಲೆ ತೇಲಿ ನಿಂತ್ತಿದ್ದು, ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ.

ಈ ರಸ್ತೆಯ ಪಕ್ಕದಲ್ಲಿ ಕಲ್ಲುಗಣಿ ಇರುವದ್ದರಿಂದ ಕಲ್ಲಗಣಿಯ ನೀರು ರಸ್ತೆಗೆ ಬಿಟ್ಟಿರುವುದ್ದರಿಂದ, ರಸ್ತೆ ಹದಗೆಡಲು ಪ್ರಮುಖ ಕಾರಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸದಿರುವದರಿಂದ ಈ ರಸ್ತೆ ಹಾಳಾಗಲು ಪ್ರಮುಖ ಕಾರಣ ಎನ್ನುತ್ತಾರೆ ವಾಹನ ಸವಾರರು.

ವಾಡಿ, ಚಿತ್ತಾಪುರ, ಕಲಬುರ್ಗಿ, ಯಾದಗಿರಿ ನಗರಗಳಿಗೆ ತೆರಳಲು ಪ್ರಮುಖ ರಸ್ತೆ ಇದಾಗಿದೆ. ಪ್ರದಾನ ಮಂತ್ರಿ ಗ್ರಾಮ ಸಡಕ ಯೋಜನೆಯಲ್ಲಿ ಹಾಕಲಾದ ಡಾಂಬೀರಕಣ, ಕೆಲವೇ ದಿನಗಳಲ್ಲಿ ಕಿತ್ತುಕೊಂಡು ಹೊಗಿದೆ. ಹೆಸರಿಗೆ ಮಾತ್ರ ಡಾಂಬಾರಿಕರಣ ಕಾಮಗಾರಿ ನಡೆಸಿದ ಗುತ್ತಿಗೇದಾರ, ಕಾಮಗಾರಿ ಕಳಪೆ ನಡೆಸಿ ಕೈತೊಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶಾಲಾ ಮಕ್ಕಳನ್ನು ಒತ್ತು ಬರುವ ಸಾರಿಗೆ ಬಸ್, ದಿನದಲ್ಲಿ ಒಂದೇ ಬಾರಿ ಗ್ರಾಮದತ್ತ ಹೆಜ್ಜೆ ಹಾಕುತ್ತದೆ. ರಸ್ತೆ ಗುಣಮಟ್ಟವಿದ್ದರೆ ಬಸ್ ಸಂಚಾರ ಕೂಡ ಹೆಚ್ಚಲಿದೆ. ಸಾರಿಗೆ ಬಸ್ ಸೌಲಭ್ಯ ಇಲ್ಲದ್ದರಿಂದ ದ್ವಿಚಕ್ರ ವಾಹನ ಇಲ್ಲವೆ, ಖಾಸಗಿ ವಾಹನಗಳ ಮೊರೆ ಹೋಗಬೇಕು. ಹದಗೆಟ್ಟಿರುವ ರಸ್ತೆಯನ್ನು ಸುಧಾರಿಸಲು, ಸಂಭಂದಪಟ್ಟ ಅಧಿಕಾರಿಗಳು ಮುಂದಾಗಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ.