ಹಾಳಾಗಿಹೋದ ಕೋವಿಡ್-19 ಆಹಾರ ಕಿಟ್: ಕ್ರಮಕ್ಕೆ ಆಗ್ರಹ

ಚಿಂಚೋಳಿ,ಮಾ.27- ತಾಲೂಕು ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಕಾರ್ಯಾಲಯದಲ್ಲಿ ಇರುವ ಕೋವಿಡ್ 19 ಆಹಾರ ಕಿಟ್ ವಿತರಣೆಯಾಗದೇ ಸಂಪೂರ್ಣ ಹಾಲಾಗಿ ಹೋಗಿದೆ ಎಂದು ಡಿಎಸ್‍ಎಸ್ ಸಂಘಟನೆ ಆರೋಪಿಸಿದೆ.
ಕೋವಿಡ್-19 ಸಂಕಷ್ಟದ ಪರಿಸ್ಥಿತಿಯಲ್ಲಿ ಸರಕಾರದಿಂದ ವಿತರಿಸಲು ಸಿದ್ದಪಡಿಸಿದ್ದ ಆಹಾರ ಕೀಟಗಳನ್ನು ತಾಲೂಕಿನ ಜನರಿಗೆ ಸಮರ್ಪಕವಾಗಿ ಹಂಚಿಕೆಯಾಗದೇ ಇರುವುದರಿಂದ ಈ ಕಿಟ್‍ಗಳು ನುಸಿಗಳು ಬಿದ್ದು ಹಾಳಾಗಿ ಹೋಗಿವೆ ಎಂದು ಡಿಎಸ್‍ಎಸ್ ಮುಖಂಡ ಪಾಂಡುರಂಗ ಲೋಡನೂರು ಅವರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ. ಆಹಾರ ಕಿಟ್‍ಗಳು ಹಂಚಿಕೆ ಮಾಡದೆ ಹಾಳು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.