ಹಾಲ್ವಿ ಶ್ರೀ ಮಹಾಂತ ಶಿವಯೋಗಿಗಳ ರಥೋತ್ಸವ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.28: ತಾಲೂಕಿನ ಗಡಿ ಭಾಗದ ಸೀಮಾಂದ್ರಾದ ಹಾಲ್ವಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಹಾಲ್ವಿ ಮಹಾಂತ ಶಿವಯೋಗಿಗಳ ಮಠದಲ್ಲಿ ಹಾಲ್ವಿ ಮಹಂತಶ್ರೀಗಳ ಮೊದಲ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ಜರುಗಿತು.
ಜಾತ್ರಾ ಮಹೋತ್ಸವ ನಿಮಿತ್ತ ಬೆಳಗಿನ ಜಾವ ಶ್ರೀ ಮಹಾಂತ ಶ್ರೀಗಳ ಹಾಗೂ ರುದ್ರಮುನಿಶ್ವರ ಶ್ರೀಗಳ  ಗದ್ದುಗೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ರುದ್ರಭಿಷೇಕ ಸಹಸ್ರನಾಮಾವಳಿ ಸಹಸ್ರ ಬಿಲ್ವಾರ್ಚ್ನ ಇತರೆ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪೂಜೆಯನ್ನು ವಿಶೇಷವಾಗಿ ಕೈಗೊಳ್ಳಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ಅಭಿನವ ಮಹಾಂತ ಮಹಾಸ್ವಾಮಿಗಳ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.
ನಂತರ ಸಂಜೆ ನಡೆದ ಮಹಾ ರಥೋತ್ಸವಕ್ಕೆ ಒಳಬಳ್ಳಾರಿಯ ಸುವರ್ಣ ಗಿರಿ ವಿರಕ್ತ ಮಠದ ಪರಮಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಾನ ಮಠಗಳ ಪರ್ವ ಪೂಜ್ಯರು ಭಾಗವಹಿಸಿದ್ದರು.