ಹಾಲು ಹಣ್ಣು ವಿತರಿಸುವ ಮೂಲಕ ಪೂಜ್ಯ ಶಿವಕುಮಾರ ಸ್ವಾಮಿಗಳ ಸ್ಮರಣೆ

ಚಿಂಚೋಳಿ,ಜ.22- ತಾಲೂಕಿನ ಹಸರಗುಂಡಗಿ ಗ್ರಾಮದ ಶಾಲೆಯಲ್ಲಿ ಆಯೋಜಿಸಿದ್ದ ತ್ರಿವಿಧ ದಾಸೋಹಿ”ನಡೆದಾಡುವ ದೇವರು” ಪದ್ಮಭೂಷಣ ಕರ್ನಾಟಕ ರತ್ನ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳ ನಾಲ್ಕನೇ ವರ್ಷದ ಪುಣ್ಯಸ್ಮರಣೆಯನ್ನು ಪ್ರಸಾದ ವಿತರಿಸುವ ಮೂಲಕ ಆಚರಿಸಲಾಯಿತು.
ದಾಸೋಹ ದಿನ ಆಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಬಾದಾಮ್ ಹಾಲು ಮತ್ತು ಹಣ್ಣುಗಳನ್ನು ಹಸರಗುಂಡಗಿ ಗ್ರಾಮ ಪಂಚಾಯತ್ ಸದಸ್ಯರಾದ ವೀರೇಶ್ ಚಿಂಚೋಳಿಕರ, ಅವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಹಸರಗುಂಡಗಿ ಗ್ರಾಮದ ಮುಖಂಡರಾದ ರಾಜಶೇಖರ್ ನಿಪ್ಪಾಣಿ, ಜಗನ್ನಾಥ್ ಹಿರಾಪುರ್, ವೀರೇಶ ಶಂಕರ್ನೂರ್, ಚಂದ್ರು ಬ್ಯಾಟರ್, ಗುರು ಸಜ್ಜನ್, ಪವನ್ ಕುಮಾರ್ ಕೋರಿ, ರಾಜಶೇಖರ್ ಹಾಬುಲ್, ಜಗು ಸ್ವಾಮಿ ಚೌಕಿಮಠ, ಮತ್ತು ಅನೇಕ ಶಾಲೆ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು