
ಮಾಲೂರು.ಆ೩೦:ಚೊಕ್ಕಂಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕ ಎ.ನಾರಾಯಣಪ್ಪ ಬಂಡಿ ಗೌಡ ಎಳು ಮತಗಳು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೂ ನಿರ್ದೇಶಕಿ ರತ್ನಮ್ಮ ಅವರು ೭ಮತಗಳು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು
ತಾಲೂಕಿನ ಚೊಕ್ಕಂಡಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾರಾಯಣಪ್ಪ ಬಂಡಿ ಗೌಡ ಹಾಗೂ ಸಿವಿ ರಾಜಣ್ಣ ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದರು. ನಂತರ ನಡೆದ ಚುನಾವಣೆಯಲ್ಲಿ ಸಿ.ವಿ.ರಾಜಣ್ಣ ೬ ಮತಗಳು ಪಡೆದು ಪರೋಭವ ಗೊಂಡರೆ, ನಾರಾಯಣಪ್ಪ ಬಂಡಿಗೌಡ ಅವರು ೭ ಮತಗಳ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ವಿ ನಾರಾಯಣಪ್ಪ ಹಾಗೂ ರತ್ನಮ್ಮ ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದು ನಂತರ ನಡೆದ ಚುನಾವಣೆಯಲ್ಲಿ ವಿ ನಾರಾಯಣಪ್ಪ ೬ ಮತಗಳು ಪಡೆದು ಪರೋಭವ ಗೊಂಡರೆ ರತ್ನಮ್ಮ ೭ ಮತಗಳು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಎನಾರಾಯಣಪ್ಪ ಬಂಡಿ ಗೌಡ ಅವರು ಮಾತನಾಡಿ ಇಲ್ಲಿನ ಚೊಕ್ಕಂಡಹಳ್ಳಿ ಮಡಿವಾಳ ಹಾಗೂ ಹನುಮನಾಯಕನಹಳ್ಳಿ ಗ್ರಾಮಗಳಿಗೆ ಸೇರಿದ ಹಾಲು ಉತ್ಪಾದಕರ ಸಹಕಾರ ಸಂಘವು ಲಾಬುದಾಯಕವಾಗಿದ್ದು ಬಿಎಂಸಿ ಕೇಂದ್ರವನ್ನು ಸಹ ಹೊಂದಿದೆ ಹಾಲು ಉತ್ಪಾದಕರಿಗೆ ಸಕಾಲಕ್ಕೆ ಬಟವಾಡೆ ಹಾಗೂ ಒಕ್ಕೂಟದಿಂದ ಹಾಲು ಉತ್ಪಾದನೆಗೆ ಬರುವ ಸವಲತ್ತುಗಳನ್ನು ಸಮರ್ಪಕವಾಗಿ ಹಾಲು ಉತ್ಪಾದಕರಿಗೆ ವಿತರಿಸುವ ಮೂಲಕ ಹಾಲಿನ ಗುಣಮಟ್ಟ ಕಾಪಾಡಿಕೊಂಡು ಹಾಲು ಉತ್ಪಾದಕರು ಹೆಚ್ಚಿನ ದರವನ್ನು ಹಾಗೂ ಬೋನಸ್ ಪಡೆಯುವಂತೆ ಹೇಳಿದರು
ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಹಾಗೂ ಆಡಳಿತ ಮಂಡಳಿಯ ಅವರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು
ಎಪಿಎಂಸಿ ಮಾಜಿ ಸದಸ್ಯ ಎಂ.ಪಿ.ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್, ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕರುಗಳಾದ ಎ ಅಶೋಕ್, ಮಂಜುನಾಥ್, ನಾರಾಯಣಪ್ಪ, ಮುಖಂಡರುಗಳಾದ ಶಾಂತ ಮೂರ್ತಿ, ನಂದಕುಮಾರ್, ಮುರುಳಿ, ಸಿಬಿ ರಾಜು, ನವೀನ್ ಸಿಂಗ್, ಎಂ ಆರ್ ನಾಗೇಶ್, ವಿ ನಾರಾಯಣಸ್ವಾಮಿ, ಸಂಘದ ಕಾರ್ಯದರ್ಶಿ ಗಜೇಂದ್ರ,ಸಹಾಯಕ ವಿನಯ್ ಕುಮಾರ್ ಹಾಜರಿದ್ದರು.