ಹಾಲು ಸರಬರಾಜಿಗೆ ಪೊಲೀಸ್ ದಂಡ!

ದೇವದುರ್ಗ.ಜೂ.೭-ಲಾಕ್‌ಡೌನ್ ಸಂದರ್ಭದಲ್ಲಿ ಹಾಲು ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದರು ದೇವದುರ್ಗದಲ್ಲಿ ಪೊಲೀಸರು ಹಾಲು ಸರಬರಾಜಿಗೆ ವಿರೋಧಿಸಿ ದಂಡ ಹಾಕುತ್ತಿರುವದು ಅಚ್ಚರಿ ಮೂಡಿಸಿದೆ.
ಜೀವನೋಪಯಾ ಅಗತ್ಯ ವಸ್ತುಗಳಲ್ಲಿ ಹಾಲು ಬಹುಮುಖ್ಯ ವಸ್ತು ಆಗಿದೆ. ಮಕ್ಕಳಿಂದ ವೃದ್ಧರಿಗೂ ಹಾಲಿನ ಅಗತ್ಯವಿದೆ. ಹಲವಾರು ಔಷದಿಗಳು ಹಾಲಿನಲ್ಲಿ ಸೇವಿಸಲು ವೈದ್ಯರ ತಿಳಿಸಿರುತ್ತಾರೆ. ಇದಲ್ಲದೆ ಕೇಲ ತಾಯಿಯಂದಿರಿಗೆ ಎದೆ ಹಾಲಿನ ಸಮಸ್ಯೆ ಇರುತ್ತದೆ. ಶಿಶು ಮಕ್ಕಳಿಗೆ ಹಾಲಿನ ಅತ್ಯಗತ್ಯವಿರುತ್ತದೆ ಇದನೆಲ್ಲ ಅರೆತುಕೊಂಡೇ ಸರಕಾರ ಹಾಲು ಮಾರಾಟಕ್ಕೆ ಮುಕ್ತ ಅವಕಾಶ ನೀಡಿದೆ. ಇದರೊಂದಿಗೆ ಜಿಲ್ಲಾಧಿಕಾರಿಗಳು ಹಾಲು ಮಾರಾಟಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಆದರೂ ದೇವದುರ್ಗದಲ್ಲಿ ಸಂಚಾರಿ ಠಾಣೆ ಪೊಲೀಸರು ಹಾಲು ಮಾರಾಟ ವಾಹನಗಳನ್ನು ತಡೆದು ದಂಡ ವಿಧಿಸುತ್ತಿರವುದು ಜಿಲ್ಲಾಡಳಿತ ನಿಯಮ ಉಲ್ಲಂಘನೆ ಎಂದು ಹಾಲು ಮಾರಾಟಗಾರರು ಆರೋಪಿಸಿದ್ದಾರೆ.
ದಂಡದಲ್ಲಿ ಗೊಂದಲ:ದೇವದುರ್ಗ ಸಂಚಾರಿ ಪೊಲೀಸರು ಹಾಕುತ್ತಿರುವ ದಂಡದ ಚೀಟಿಯಲ್ಲಿ ಸ್ಪಷ್ಟನೆ ಇಲ್ಲ. ದಂಡ ಹಾಕಿರುವ ರಸೀದಿಯಲ್ಲಿ ಕೇವಲ ಹೆಸರು ಹೊರತು ಪಡೆಸಿದರೆ ಯಾವ ನಿಯಮ ಉಲ್ಲಂಘಿಸಿದ್ದಾರೆ. ಯಾವ ಕಾರಣಕ್ಕೆ ದಂಡ ವಿಧಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ದಾಖಲಿಸುತ್ತಿಲ್ಲ. ವಾಹನ ಸವಾರರೋ ಅಥವಾ ನಡೆದುಕೊಂಡು ಹೊದವರ ಮೇಲೂ ಸುಖಾಸುಮ್ಮನೆ ದಂಡ ಹಾಕಬಹುದಾ? ವಾಹನ ಸವಾರರಾದರೆ ವಾಹನ ಸಂಖ್ಯೆ, ಅಥವಾ ಇನ್ನಿತರ ದಂಡ ವಿಧಿಸಿದ ಕಾರಣ ರಸೀದಿಯಲ್ಲಿ ದಾಖಲಿಸಸಬೇಕು ಆದರೆ ಇದ್ಯಾವದು ದಾಖಲಿಸದಿರುವದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

ಕೋಟ್

ಅಗತ್ಯ ವಸ್ತುಗಳಲ್ಲಿ ಹಾಲು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತದ ನಿಯಮದಂತೆ ಹಾಲು ಮಾರಾಟ ಮಾಡಬಹುದು. ಹನುಮಂತ ಸಣ್ಣಮನಿ ಸಿಪಿಐ ದೇವದುರ್ಗ

ಕೋಟ್

ಸುಮಾರು ಹತ್ತಾರೂ ಹಳ್ಳಿಗಳು ಸುತ್ತಿ ನಂದಿನಿ ಹಾಲು ಮಾರಾಟ ಮಾಡುತ್ತಿದ್ದೇವೆ. ಹಾಲಿನ ವಾಹನ ಎಂದು ಎಷ್ಟೇ ಬೇಡಿಕೊಂಡರು ಪೊಲೀಸರು ಬಿಡಲ್ಲ. ಹತ್ತಾರೂ ಹಳ್ಳಿ ಸುತ್ತಿ ಹಾಲು ಮಾರಾಟ ಮಾಡಿದರೆ ಉಳಿಯುವದು ನಾಲ್ಕರಿಂದ ಐದು ನೂರು ಇದರಲ್ಲಿ ಪೆಟ್ರೋಲ್, ವಾಹನ ಕಟ್ಟಬೇಕು. ಮೊದಲೇ ಜೀವನ ಕಷ್ಟದಲ್ಲಿ ಪೊಲೀಸ್ರ ದಂಡ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳಬೇಕು. ಪರುಶುರಾಮ ಹಾಲು ಮಾರಾಟಗಾರ.