ಹಾಲು ಸಂಘಗಳ ಸ್ವಂತ ಕಟ್ಟಡಕ್ಕೆ ನೆರವು- ಡಿ.ವಿ.ಹರೀಶ್ ಭರವಸೆ

ಕೋಲಾರ.ನ.೫:ತಾಲ್ಲೂಕಿನದ್ಯಾಂತ ಎಲ್ಲಾ ಸಂಘಗಳು ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಮಾಣಿಕವಾಗಿ ಶ್ರಮಿಸುತ್ತೇನೆಂದು ಹಾಲು ಒಕ್ಕೂಟದ ನಿರ್ದೇಶಕ ಡಿ.ವಿ. ಹರೀಶ್ ತಿಳಿಸಿದರು. ತಾಲ್ಲೂಕಿನ ವಕ್ಕಲೇರಿ ಹೋಬಳಿ ಬಣಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಶಿಲಾನ್ಯಾಸವನ್ನು ನೆರೆವೇರಿಸಿ ಅವರು ಮಾತನಾಡಿದರು.
ನೂತನ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ ರೂ. ೩ ಲಕ್ಷ, ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. ೧ ಲಕ್ಷ ನೀಡಲಾಗುವುದು ಎಂದು ಹೇಳಿದರು. ಒಕ್ಕೂಟದಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ಪಾದಕರ ಮತ್ತು ಸಂಘದ ಹಿತದೃಷ್ಟಿಯಿಂದ ಹಾಲು ಶೇಖರಣೆ ಮತ್ತು ಹಾಲಿನ ಗುಣಮಟ್ಟ ಉತ್ತಮ ಪಡಿಸಬೇಕೇಂದು ಕರೆ ನೀಡಿದರು.
ಮುಂದಿನ ದಿನಗಳಲ್ಲಿ ಸಂಘಕ್ಕೆ ಕಂಪ್ಯೂಟರ್ ನೀಡಲಾಗುವುದು ಎಂದು ಭರವಸೆ ನೀಡಿದರು.
ತಾಲ್ಲೂಕು ಉಪವ್ಯವಸ್ಥಾಪಕ ಡಾ|| ಎ.ಸಿ. ಶ್ರೀನಿವಾಸಗೌಡ ಮಾತನಾಡಿ, ಸಂಘದ ೨೦೧೯-೨೦ನೇ ಸಾಲಿನ ಅರ್ಥಿಕ ಪರಿಸ್ಥಿತಿ ಬಗ್ಗೆ ಉತ್ಪಾದಕರಿಗೆ ಮನವರಿಕೆ ಮಾಡಿದರು.
ಒಕ್ಕೂಟದಿಂದ ಸಿಗುವ ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ರಾಸುಗಳ ಹಾರೈಕೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸೋಮೇಗೌಡ, ವಿಸ್ತರಣಾಧಿಕಾರಿಗಳಾದ ಶ್ರೀನಿವಾಸ್, ಎಸ್.ರಾಮಾಂಜಿನಪ್ಪ, ಸಂಘದ ಕಾರ್ಯದರ್ಶಿ ದೇವೇಗೌಡ ಹಾಗೂ ಗ್ರಾಮದ ಮುಖಂಡರು ಕಾರ್ಯಕಾರಿ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.