ಹಾಲು ವ್ಯರ್ಥ ಮಾಡದೆ ಮಕ್ಕಳಿಗೆ ವಿತರಿಸಿ ಅಪೌಷ್ಠಿಕತೆ ಮುಕ್ತಗೊಳಿಸಿ ; ಕೆ.ಪಿ.ಪಾಲಯ್ಯ ಕರೆ.

 ಸಂಜೆವಾಣಿ ವಾರ್ತೆ

ಜಗಳೂರು.ಆ.೨೨ :- ಮಣ್ಣಿನ ಹುತ್ತಕ್ಕೆ ಹಾಲೆರೆದು ವ್ಯರ್ಥಮಾಡದೆ ಮಕ್ಕಳಿಗೆ ಹಾಲುನೀಡಿ ಅಪೌಷ್ಠಿಕತೆ ಮುಕ್ತಗೊಳಿ ಸೋಣ ಎಂದು ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಹಾಗೂ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಕೆ.ಪಿ.ಪಾಲಯ್ಯ ಕರೆ ನೀಡಿದರು.ಪಟ್ಟಣದ ಲಕ್ಷ್ಮಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಹಮ್ಮಿಕೊಂಡಿದ್ದ ಬಸವಪಂಚಮಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ವಿತರಿಸಿ  ಮಾತನಾಡಿದರು.ನಾಗರಹಾವು ವೈಜ್ಞಾನಿಕವಾಗಿ ಹಾಲನ್ನು ಸೇವಿಸುವುದಿಲ್ಲ.ದೇಶ ದಲ್ಲಿ ವರ್ಷಕ್ಕೆ 40 ಸಾವಿರ ಮಕ್ಕಳು ಅಪೌಷ್ಠಿಕತೆಗೆ ತುತ್ತಾಗಿ ಸಾವನ್ನಪ್ಪುತ್ತಿ ದ್ದಾರೆ.ಆದರೂ ಜನಜಾಗೃತಿಯಿಲ್ಲದೆ ನಾಗಪಂಚಮಿ ಹಬ್ಬದಲ್ಲಿ ಹಾವಿಗೆ ಹಾಲೆರೆದು ಮೌಢ್ಯತೆ ಮೆರೆಯುವುದು ಆತಂಕ ಕಾರಿ ಬೆಳವಣಿಗೆ ಎಂದರು.ಪ್ರತಿಯೊಬ್ಬರೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನ ಬದ್ದ ಹಕ್ಕುಗಳನ್ನು ಪಡೆಯಬೇಕು.ಮಕ್ಕಳ ಉಜ್ವಲ ಭವಿಷ್ಯ ರೂಪಿ ಸಿ ಮಕ್ಕಳನ್ನೇ ಆಸ್ತಿಯನ್ನಾಗಿಸಿಕೊಂಡರೆ ಆರ್ಥಿಕ ಸಂಕಷ್ಟದಿಂದ ದೂರವಾಗಬಹುದು ಎಂದು ಕಿವಿಮಾತು ಹೇಳಿದರು.ಮಾಜಿ ತಾ.ಪಂ‌.ಸದಸ್ಯ ಹಾಗೂ ವಕೀಲ ಬಸವರಾಜ್ ಮಾತನಾಡಿ, ಮಾನವ ಬಂಧುತ್ವ ವೇದಿಕೆಯ ವೈಚಾರಿಕತೆ,ವೈಜ್ಞಾನಿಕತೆ ದೃಷ್ಠಿ ಕೋನದ ಪ್ರಚಾರ ನಿಜಕ್ಕೂ ಶ್ಲಾಘನೀಯ.ಶೋಷಿತ ಸಮುದಾಯ ಗಳು ದೇವರು ಧರ್ಮದ ಹೆಸರಿನಡಿ ಮೂಢನಂಬಿಕೆ,ಕಂದಾಚಾರ, ಗಳ ಕೂಪದಲ್ಲಿ ಬೀಳುತ್ತಿರುವುದನ್ನು ತಪ್ಪಿಸಲು ಪ್ರತಿಯೊಬ್ಬರೂ ಮಾನವ ಬಂಧುತ್ವ ವೇದಿಕೆ‌ ಜನಜಾಗೃತಿ ಆಂದೋಲನಕ್ಕೆ ಕೈ ಜೋಡಿಸಬೇಕು ಎಂದರು.ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಎಚ್. ಎಂ.ಹೊಳೆ ಧನ್ಯಕುಮಾರ್, ಮರೇನಹಳ್ಳಿ ನಜೀರ್ ಅಹಮದ್. ಮುಖಂಡರಾದ  ವಕೀಲ‌ ತಿಪ್ಪೇಸ್ವಾಮಿ, ಕಲ್ಲದೇವರಪುರ ಬಡಯ್ಯ,ಕಾಟಪ್ಪ,ತಿಪ್ಪೇಸ್ವಾಮಿ,ಮಹಾಲಿಂಗ ಪ್ಪ, ಸತೀಶ್ ಮಲೆಮಾಚಿಕೆರೆ,ಮಾದಿಹಳ್ಳಿ ಮಂಜಪ್ಪ,ರಾಜಪ್ಪ ವ್ಯಾಸ ಗೊಂಡನಹಳ್ಳಿ,ವಕೀಲ ನಾಗೇಶ್,ನಿವೃತ್ತ ಕೆಪಿಟಿಸಿಎಲ್ ಸಿಬ್ಬಂದಿ ಮಹಬೂಬ್ ಸಾಬ್ , ದಾದಾಪೀರ್. ಓಬಳೇಶ್. ಸೇರಿದಂತೆ ಭಾಗವಹಿಸಿದ್ದರು.