ಹಾಲು ಉತ್ಪಾದನೆಯ ಮೇಲೆ ಫ್ಲೋರೈಡ್‌ನ ಪ್ರಭಾವ

ಕೋಲಾರ,ಮಾ.೧೫- ಜಾನುವಾರುಗಳ ಸಾಕಾಣಿಕೆ ಮತ್ತು ಹಾಲು ಉತ್ಪಾದನೆಯಲ್ಲಿ ಕೋಲಾರ ಜಿಲ್ಲೆಯು ಮುಂಚೂಣಿಯಲ್ಲಿದೆ. ಫ್ಲೋರೈಡ್ ಅಂಂಶವು ಕಲ್ಲುಬಂಡೆಗಳಲ್ಲಿ ಹಾಗೂನೀರಿನಲ್ಲಿ ಕಂಡುಬರುತ್ತದೆ. ಕೋಲಾರ ಜಿಲ್ಲೆಯ ಹಳ್ಳಿಗಳಲ್ಲಿ ಪ್ರಮುಖವಾಗಿ, ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಹಾ ಗೂ
ಕುಕ್ಕುಟ ಸಾಕಾಣಿಕೆ ಕಂಡುಬರುತ್ತದೆ. ಕೋಲಾರ ಜಿಲ್ಲೆಯು ಹಾಲು ಹಾಗೂ ರೇಷ್ಮೆ ಉತ್ಪಾದನೆಯಲ್ಲಿ ಬಹುಮುಖ್ಯಪಾತ್ರ ವಹಿಸುತ್ತದೆ.
ಮಾನವ ದೇಹದಲ್ಲಿಫ್ಲೋರೈಡ್ ಎರಡು ಅಂಚಿನ ಕತ್ತಿಯಂತೆ ಕಾರ್ಯನಿರ್ವಹಿಸುತ್ತದೆ. ಫ್ಲೋರೈಡ್ ಒಂದು ಬದಿಯಲ್ಲಿ, ಹಲ್ಲಿನ ಕ್ಷಯವನ್ನು ತಡೆಗಟ್ಟುವಂತೆ ಅದರ ಪ್ರಯೋಜನಕಾರಿ ಪರಿಣಾಮಗಳನ್ನು ನೀಡಿದರೆ, ಮತ್ತೊಂದೆಡೆಯಲ್ಲಿ ಫ್ಲೋರೈಡ್ದಂತ ಮತ್ತು ಮೂಳೆಗಳ ಫ್ಲೋರೋಸಿಸ್‌ನಂತಹ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಈಧ್ಪರಿಣಾಮಗಳು ಮನುಷ್ಯ ಒಡಂಬಡಿಕೆಯ ಅನ್ಯಜೀವಿಗಳಲ್ಲಿಯೂ ಸಹ ಕಂಡು ಬರುತ್ತದೆಂದು ದೃಢಪಟ್ಟಿರುತ್ತದೆ.
ಫ್ಲೋರೈಡ್ ಅಂಶ ಹೆಚ್ಚಾಗಿರುವ ನೀರು ಮತ್ತು ಅದರಿಂದ ಬೆಳೆದಿರುವ ಮೇವು ಸೇವಿಸುವುದರಿಂದ ಕೋಲಾರದಂತಹ ಫ್ಲೋರೈಡ್ಪೀಡಿತ ಪ್ರದೇಶದಲ್ಲಿರುವ ಜಾನುವಾರುಗಳ ದೇಹದಲ್ಲಿ ಮತ್ತು ಅವುಗಳಿಂದ ಉತ್ಪತ್ತಿಯಾಗುವ ಹಾಲಿನಲ್ಲಿ ಫ್ಲೋರೈಡ್ ಅಂಶವು ಪ್ರಾಮಾಣಿಸಲಾಗಿದೆ. ಫ್ಲೋರೈಡ್ ಸಾಂದ್ರತೆಯು ಇಲ್ಲಿಯವರೆಗೆ ೦.೦೨-೦.೮ ಪಿಪಿಎಂ ದಾಖಲೆಯಾಗಿದೆ. ಹಾಲಿನಲ್ಲಿ ಕ್ಯಾಲಿಸಿಯಂ, ಫ್ಲೋರೈಡ್ ಅಂಶವಿರುವುದರಿಂದ, ಬೆಳೆಯುವ ಮಕ್ಕಳಿಗೆ ಹೆಚ್ಚಾಗಿ ಕುಡಿಸುತ್ತೆವೆ, ಆದರೆ ಕ್ಯಾಲ್ಸಿಯಂ, ಫಾಸ್ಫಟ ಹಾಗೂ ಮೆಗ್ನಿಶಿಯಂ ಜೋತೆಯಲ್ಲಿ ಫ್ಲೋರೈಡ್ ಸಹ ಒಳಹೊಕ್ಕುವುದರಿಂದ ಪ್ರಮುಖ ಖನಿಜಗಳನ್ನು ತಡೆಯಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು. ಇದರಿಂದ ನಮ್ಮ ದೇಹದಲ್ಲಿನ ಕಿಣ್ವಗಳನ್ನು ಅಸಮರ್ಥಗೊಳಿಸಬಹುದು.
ಶ್ರೀದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯ, ಜೀವರಸಾಯನಶಾಸ್ತ್ರವಿಭಾಗವು ಫ್ಲೋರೋಸಿಸ್ ಸಂಶೋಧನೆ ಮತ್ತು ಪ್ರಾಯೋಗಿಕ ಪ್ರಯೋಗಾಲಯವನ್ನು ನಿರ್ಮಿಸಿದೆ. ಈ ತಂಡದ ಸದಸ್ಯರಾದ ಡಾ.ಶಶಿಧರ್ ಕೆ.ಎನ್, ಡಾ.ಆರ್.ಸಾಯಿದೀಪಿಕಾ, ಡಾ.ಹರೀಶ್, ಕುಮಾರಿ ಇಂದುಮತಿ ಎ.ಎನ್ ಅವರು ಫ್ಲೋರೋಸಿಸ್ ಬಗ್ಗೆ ಅನೇಕ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ, ಶಾಲೆಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗನ್ನು ಆಯೋಜಿಸಿ ಇದರ ಬಗ್ಗೆ ತಿಳುವಳಿಕೆ ನೀಡುತ್ತಿರುತ್ತಾರೆ. ಫ್ಲೋರೋಸಿಸ್ ಸಂಶೋಧನೆ ಮತ್ತು ಪ್ರಾಯೋಗಿಕ ಪ್ರಯೋಗಾಲಯ ಸಮಾಜದಲ್ಲಿ ಜಾಗೃತಿ ಮೂಡಿಸಿ, ಈ ಅಸ್ವಸ್ಥತೆಯನ್ನು ಪೂರ್ಣವಾಗಿ ನಿರ್ಮೂಲನೆ ಮಾಡುವುದರಲ್ಲಿ ಶ್ರಮಿಸುತ್ತಿದೆ.
ನೀರಿನಲ್ಲಿ,ಹಾಲಿನಲ್ಲಿ, ಆಹಾರಪದಾರ್ಥಗಳಲ್ಲಿ ಹಾಗೂ ಇತರೆ ಜೈವಿಕ ಮಾದರಿಗಳಲ್ಲಿ ಫ್ಲೋರೈಡ್ ಅಂಶವನ್ನು ಕಂಡುಹಿಡಿಯುವುದು ಮತ್ತು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಂಶೋಧನೆಗಳನ್ನು ನಡೆಸುತಿದ್ದಾರೆ. ಈ ಮಾದರಿಗಳಲ್ಲಿ ಫ್ಲೋರೈಡ್ ಅಂಶವನ್ನು ತಿಳಿದುಕೊಳ್ಳಲು ಹಾಗೂ ಜಾಗೃತರಾಗಲು ಬಯಸುವವರು ಈಚರ ದೂರವಾಣಿ ೯೮೪೫೨೪೮೭೪೨ ಸಂಖ್ಯೆಯನ್ನು ಸಂಪರ್ಕಿಸಿ ಹಾಗು ಇದರ ಬಗ್ಗೆಯೇ ಪ್ರಬಂಧಗಳನ್ನು ಯೂಟ್ಯೂಬ್ಚಾನೆಲ್ ಫ್ಲೋರೋಸಿಸ್ರಿಸರ್ಚ್ಮತ್ತುರೆಫರಲ್ಲ್ಯಾಬೊರೇಟರಿನಲ್ಲಿವೀಕ್ಷಿಸಿ ತಿಳಿಯಬಹುದು. ಅಥವಾ Email Id: frrlsduaher@gmail.com frrlsduaher@gmail.com ಮುಖೇನವ್ಯವಹರಿಸಬಹುದು.