ಹಾಲು ಉತ್ಪಾದಕರ ಸಂಘದ ಅಕ್ರಮ ತನಿಖೆಗೆ ಒತ್ತಾಯ

ಕೋಲಾರ,ಏ.೧೭: ತಾಲೂಕಿನ ಮಣಿಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆ ನಡೆಸಿ ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮಣ್ಣಿಘಟ್ಟ ಗ್ರಾಮಸ್ಥರು ಮತ್ತು ಹಾಲು ಉತ್ಪಾದಕರು ದೂರು ನೀಡಿದ್ದಾರೆ.
ಮಣಿಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ೨೬-೩-೨೦೨೧ ರಲ್ಲಿ ಬಿ.ಎಂ.ಸಿ ಕೆಂದ್ರವನ್ನು ಪ್ರಾರಂಭಿಸಲಾಗಿದ್ದು, ೧-೪-೨೦೨೧ ರಿಂದ ೧೫-೪-೨೦೨೧ ರವರೆಗೆ ಹಾಲು ಶೇಖರಣೆಯಾಗಿದೆ, ಆದರೆ ಸುಮಾರು ೧೧ ದಿನದಲ್ಲಿ ೮೫೦ ಲೀಟರ್ ಹಾಲು ಹೆಚ್ಚಾಗಿರುವುದು ಹಾಲು ಉತ್ಪಾದಕರಲ್ಲಿ ಅನುಮಾನ ಉಂಟಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಡೈರಿ ವೀಕ್ಷಕರಾದ ಭರತ್ ರವರು ೧೩-೪-೨೦೨೧ ರಂದು ಮಾಹಿತಿ ತೆಗೆದಾಗ, ೮೫೦ ಲೀ ನಷ್ಟು ನೀರು ಹಾಲಿನ ಜೊತೆ ಶೇಖರಣೆಯಾಗಿರುವುದು ಬೆಳಕಿಗೆ ಬಂದಿದೆ ಎಂದರು.
ಈ ಪ್ರಕರಣದಲ್ಲಿ ಸಂಘದ ಅಧ್ಯಕ್ಷ ಎನ್.ಮಂಜುನಾಥಗೌಡ ಮತ್ತು ಕಾರ್ಯದರ್ಶಿ ಚಂಗಲರಾಯರೆಡ್ಡಿ ಭಾಗಿಯಾಗಿದ್ದು, ಹಾಲಿಗೆ ನೀರನ್ನು ಬೆರೆಸಿ ಪ್ರತಿ ದಿನ ಬೇರೆ ಕ್ಯಾನ್ಗೆ ಬದಲಾಯಿಸಿ ಕಳುಹಿಸುತ್ತಿದ್ದು, ಡೈರಿ ವೀಕ್ಷಕ ಭರತ್ ರವರಿಂದ ಆಗಿರುವ ಅಕ್ರಮವು ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಮುಚ್ಚಿಹಾಕಲು ತುರ್ತು ಸಭೆ ಸೇರಿ ರೆಜ್ಯೂಲ್ಯೂಷನ್ ಸಹ ಮಾಡಲು ಪ್ರಯತ್ನ ನಡೆಸಿದ್ದಾರೆ. ಇಂತಹ ಬೇಜವಾಬ್ದಾರಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಮಾಡಿರುವ ಅಕ್ರಮಗಳನ್ನು ತನಿಖೆ ನಡೆಸಿ ಇವರುಗಳನ್ನು ಕೆಲಸದಿಂದ ತೆಗದು ಮೋಸ ಮಾಡಿರುವ ಹಣವನ್ನು ಸಂಘಕ್ಕೆ ಮರುಪಾವತಿ ಮಾಡುಬೇಕೆಂದು ಮನವಿ ಮಾಡಿದ್ದಾರೆ.
ನಿಯೋಗದಲ್ಲಿ ಮಣಿಘಟ್ಟ ಗ್ರಾಮದ ಎಂ.ಶಿವಣ್ಣ, ಚಂದ್ರೇಗೌಡ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಗದ ಹಾಲಿ ನಿರ್ದೇಶಕ ವೆಂಕಟರಾಮಪ್ಪ ಉಪಸ್ಥಿತರಿದ್ದರು.