ಹಾಲು ಉತ್ಪನ್ನ, ಆಹಾರ ಪದಾರ್ಥಗಳ ಮೇಲಿನ ಜಿ.ಎಸ್.ಟಿ. ಹಿಂಪಡೆಯಿರಿ

ಬೀದರ್: ಜು.20:ಕೇಂದ್ರ ಸರ್ಕಾರ ಹಾಲು ಉತ್ಪನ್ನಗಳಾದ ಹಾಲು, ಮೊಸರು ಮತ್ತು ಮಜ್ಜಿಗೆ ಸೇರಿದಂತೆ ಇತ್ಯಾದಿ ಉತ್ಪನ್ನಗಳು ಹಾಗೂ ಆಹಾರ ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ಶೇಕಡಾ 5 ರಷ್ಟು ಜಿ.ಎಸ್.ಟಿ. ಹೆಚ್ಚಿಸುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಜಾತ್ಯಾತೀತ ಜನತಾ ದಳ (ಜೆಡಿಎಸ್) ಪಕ್ಷದ ಜಿಲ್ಲಾ ಮುಖಂಡರಾದ ಅಶೋಕಕುಮಾರ ಕರಂಜಿ ಒತ್ತಾಯಿಸಿದ್ದಾರೆ.ಕೂಲಿ ಕಾರ್ಮಿಕ ಜನರು ಉಪಯೋಗಿಸುವ ಹಾಲು ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ಜಿ.ಎಸ್.ಟಿ. ಹೆಚ್ಚಿಸಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಹಾಲು ಉತ್ಪನ್ನಗಳ ಮತ್ತು ಆಹಾರ ಪದಾರ್ಥಗಳ ಮೇಲಿನ ಜಿ.ಎಸ್.ಟಿ. ರಾಜ್ಯದಲ್ಲಿ ಜಾರಿಗೆ ತರಕೊಡದು ಎಂದು ರಾಜ್ಯ ಸರ್ಕಾಕ್ಕೆ ಆಗ್ರಹಿಸಿದ್ದಾರೆ.