ಹಾಲುಮತ ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪುಜಾರಿ ಸಂಘವು ಕಾರ್ಯ ನಿರ್ವಹಿಸಲಿ

ವಿಜಯಪುರ:ಮೇ.22: ರಾಜ್ಯದ ನೂತನವಾಗಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಹಾಲುಮತ ಧರ್ಮದ ಹೆಮ್ಮೆಯ ಪುತ್ರ ಶ್ರೀ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ರಾಜ್ಯ ಹಾಲುಮತ ಪಟ್ಟದ ಪೂಜಾರಿ ಜಡೆ ಪೂಜಾರಿಗಳಮಹಾಸಂಘವು ಹಾಲುಮತ ಧರ್ಮಸಭೆಯಲ್ಲಿ ಸಿಹಿ ಹಂಚಿ ಅಭಿನಂದಿಸಲಾಯಿತು.
ವಿಜಯಪುರ ತಾಲೂಕಿನ ಬರಟಗಿ ಗ್ರಾಮದಲ್ಲಿ ಹಾಲುಮತ ಧರ್ಮ ಸಭೆಯ ಅಧ್ಯಕ್ಷ ವಹಿಸಿದ ಪಟ್ಟದ ಪೂಜ್ಯರಾದ ಶ್ರೀ ಶಂಕರ ಪೂಜಾರಿಗಳು ಮಾತನಾಡಿ ಸಿದ್ದರಾಮಯ್ಯನವರು ತಮ್ಮ ಹಿಂದಿನ ಅವಧಿಯಲ್ಲಿ ಬಡವರ ದೀನ-ದಲಿತರ ಮಹಿಳೆಯರ, ರೈತರ ಹಾಗೂ ಕಾರ್ಮಿಕರಿಗೆ ತಮ್ಮ ಹಲವಾರು ಭಾಗ್ಯಗಳ ಯೋಜನೆಗಳನ್ನು ನೀಡಿ ಎಲ್ಲರ ಮನೆಗೆದ್ದಿದ್ದಾರೆ ಅವರಿಗೆ ಮುಂದಿನ ಐದು ವರ್ಷಗಳ ಕಾಲ ಯಾವುದೇ ವೀಘ್ನ ಕಂಠಕ ವಿಲ್ಲದೆ 5ವರ್ಷಮುಖ್ಯಮಂತ್ರಿ ಯಾಗಿರಲೆಂದು ಹಾಲುಮತ ಪೂಜಾರಿಗಳು ಆಶೀರ್ವಾದ ನೀಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ್ ಕಂಕನವಾಡಿ ಪತ್ರಕರ್ತರು ಮಾತನಾಡಿ ಧರ್ಮಗಳಲ್ಲಿಯೇ ಹಾಲುಮತ ಧರ್ಮ ಶ್ರೇಷ್ಠ ಆದರೆ ಇಂದು ಸಮಾಜದ ಹಲವಾರು ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದು ಅಂಥವರನ್ನು ಗುರುತಿಸಿ ಶಿಕ್ಷಣ ನೀಡುವ ಕೆಲಸ ರಾಜ್ಯ ಹಾಲುಮತ ಪೂಜಾರಿಗಳ ಮಹಾಸಂಘವು ಮಾಡಬೇಕೆಂದು ವಿನಂತಿಸಿಕೊಂಡರು.
ಜಿಲ್ಲಾ ಕುರುಬರ ಸಂಘದ ನಿರ್ದೇಶಕ ದೇವಕಾಂತ್ ಬಿಜ್ಜರಗಿ ಮಾತನಾಡಿ ಪಟ್ಟದ ಪೂಜಾರಿ ಜಡೆ ಪೂಜಾರಿಗಳು ಶತ-ಶತಮಾನಗಳಿಂದ ಹಾಲುಮತ ದೇವಸ್ಥಾನಗಳ ಸ್ವಚ್ಛತೆ ಮತ್ತು ಪೂಜಾರಿಕೆ ಮಾಡುತ್ತಾ ಧಾರ್ಮಿಕ ಕಾರ್ಯ ಮಾಡುತ್ತಾ ಬಂದಿರುತ್ತಾರೆ ಆದರೆ ಸರ್ಕಾರ ಈವರೆಗೆ ಯಾವುದೇ ಮಾಶಾಸನ ಧನಸಹಾಯ ನೀಡದಿರುವುದು ಖಂಡನೀಯ. ಶೀಘ್ರದಲ್ಲಿ ನೂತನವಾಗಿ ಮುಖ್ಯಮಂತ್ರಿ ಆದಂಥ ಸಿದ್ದರಾಮಯ್ಯರನ್ನು ಹಾಲುಮತ ಪೂಜಾರಿಗಳಿಗೆ ಮಾಶಾಸ ನೀಡುವಂತೆ ನಿಯೋಗ ಒಂದು ಭೇಟಿಯಾಗಿ ಒತ್ತಾಯಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಹಾಲುಮತ ಪಟ್ಟದ ಪೂಜಾರಿ, ಜಡೆ ಪೂಜಾರಿಗಳ ಮಹಾ ಸಂಘದ ಪದಾಧಿಕಾರಿಗಳಾದ ಮಾಳಿಂಗರಾಯ ಮಾರಾಯರು ನಾಗಠಾಣ,ಶ್ರೀ ಮಲ್ಲಪ್ಪ ಪೂಜಾರಿ ರೂಗಿ, ಶ್ರೀ ಬನಸಿದ್ಧ ಮಹಾರಾಯರು ಡೊಮನಾಳ-ತಿಡಗುಂದಿ, ಸಿದ್ದು ಪುಜಾರಿ ಕಲಬಿಳಗಿ, ಬೀರಪ್ಪ ಜಮ್ಮನಾಳ,ಗೊವಿಂದ ಶಿಂಧೆ, ಅಂಬಣ್ಣ ದಳವಾಯಿ ಮಾಳಪ್ಪ ಬಡದೂರ್, ಲಕ್ಷ್ಮಣ್ ಜ್ಯೋತಿ ಗೊಂಡ, ಹನುಮಂತ ಪೂಜಾರಿ, ಬರ್ಮಣ್ಣ ಲೋಕಂಡೆ, ಅಶೋಕ್ ಪೂಜಾರಿ, ಶಿವಾಜಿ ಜೀರ್, ಕಲ್ಲಪ್ಪ ನಾಟಿಕರ್, ಬಿಳಿಯಾನಿಸಿದ್ದ ಮನಗೂಳಿ, ಭೀವಾ ಮಾನೆ, ವಸಂತ್ ಶಿಂದೆ, ಸಂತೋಷ್ ಪಾಂಡ್ರೆ, ಸಂಗೀತ ತಾಂಬೆ,ಸಂಜು ಪಾಂಡ್ರೆ, ಅಮೋಘಸಿದ್ಧ ಪುಜಾರಿ ಶಿಕ್ಷಕರು ಮುಂತಾದವರು ಉಪಸ್ಥಿತರಿದ್ದರು