ಹಾಲುಮತ ಸಮಾಜದಿಂದ ವಿಶೇಷ ಪೂಜೆ


ಬೈಲಹೊಂಗಲ,ಮೇ.20: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದಕ್ಕೆ ಹಾಗೂ ಶಾಸಕ ಮಹಾಂತೇಶ ಕೌಜಲಗಿ ಅವರು ಪುನರ್ ಆಯ್ಕೆಯಾದ ಹಿನ್ನೆಲೆ ಹಾಲುಮತ ಸಮಾಜದ ಬಾಂಧವರು ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಂಭ್ರಮಾಚರಣೆ ಮಾಡಿದರು.
ಪಟ್ಟಣದ ಕೊತಂಬ್ರಿ ಗಲ್ಲಿಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ಸಂಭ್ರಮಾಚರಣೆ
ಕಾರ್ಯಕ್ರಮದಲ್ಲಿ ಬೀರಲಿಂಗೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ, ತೆಂಗಿನಕಾಯಿ ಗಳನ್ನು ಒಡೆದು, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಹಾಲುಮತ ಸಮಾಜದ ಮುಖಂಡ ಲಕ್ಷ್ಮಣ್ ಸೋಮನಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಬಾಬು ಕುಡಿಸೋಮನ್ನವರ, ಕಾಂಗ್ರೆಸ್ ದುರೀಣ ಮಹಾಂತೇಶ ತುರಮರಿ, ಮಲ್ಲೇಶ ಹೊಸಮನಿ, ಗಿರೀಶ್ ಗಡತರನವರ , ವಿಠಲ ಅಜ್ಜನಕಟ್ಟಿ, ಈಶ್ವರ ಕರ್ಕಿ , ಶೇಖಯ್ಯ ರುದ್ರಾಕ್ಷಿಮಠ , ಮಹೇಶ ಬೆಲ್ಲದ, ಸುನೀಲ ಪಟಾತ, ಮಲ್ಲಮ್ಮ ಬುಡರಕಟ್ಟಿ , ಸಿದ್ದಪ್ಪ ಗೋವನಕೊಪ್ಪ , ಮಂಜು ಗೋವನಕೊಪ್ಪ, ಯಲ್ಲಪ್ಪ ಗೋವನಕೊಪ್ಪ , ನಾಗಪ್ಪ ಸೋಮನಟ್ಟಿ, ಚಂದ್ರುಅಜ್ಜನಕಟ್ಟಿ,ಸಂತೋಷ ಗೋವನಕೊಪ್ಪ, ಸೇರಿದಂತೆ ಹಾಲುಮತ ಸಮಾಜದ ಗಣ್ಯರು ಯುವಕರು ಪಾಲ್ಗೊಂಡಿದ್ದರು.