ಹಾಲುಮತ ಸಮಾಜದಿಂದ ತಿಪ್ಪರಾಜು ಹವಾಲ್ದಾರ್‌ಗೆ ಸನ್ಮಾನ

ರಾಯಚೂರು,ಮಾ.೨೩- ರಾಯಚೂರು ಜಿಲ್ಲಾ ಹಾಲುಮತ ಸಮಾಜದಿಂದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಅವರಿಗೆ ಕುರಿ ಉಡುಗೊರೆಯಾಗಿ ನೀಡಿ ಸನ್ಮಾನಿಸಲಾಯಿತು.
ಯುಗಾದಿ ಹಬ್ಬದಂದು ಮಾಜಿ ಶಾಸಕರು ತಮ್ಮ ನಿವಾಸದಲ್ಲಿ ಹಾಲುಮತ ಸಮಾಜದ ಪ್ರಮುಖರಿಗೆ ಹಬ್ಬದೂಟಕ್ಕೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯುಗಾದಿ ಶುಭಾಷಯ ಕೋರಿ ಮಾಜಿ ಶಾಸಕರಿಗೆ ಸನ್ಮಾನಿಸಿ ಅಭಿನಂದಿಸಿದರು.
ಜಿಲ್ಲಾಧ್ಯಕ್ಷ ಕೆ. ಬಸವಂತಪ್ಪ, ತಾಲೂಕಾ ಅಧ್ಯಕ್ಷ ವಕೀಲ, ಮುಖಂಡರಾದ ಹನುಮಂತ ಮಾಸದೊಡ್ಡಿ, ನರಸಿಂಹಲು, ಬಾಲರಾಜು ಕೊರ್ವಿಹಾಳ, ಎಪಿಎಂಸಿ ನಿರ್ದೇಶಕ ರಾಮಣ್ಣ ಮಟಮಾರಿ, ಹೆಂಬೆರಾಳ ಶಿವಶರಣ ಸೇರಿದಂತೆ ಹಾಲುಮತ ಸಮಾಜದ ಪದಾಧಿಕಾರಿಗಳು, ಹಿರಿಯ ಮುಖಂಡರುಗಳಿದ್ದರು.