ಹಾಲುಮತ ಸಮಾಜದವರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ- ಮಲ್ಲಿಕಾರ್ಜುನ


ಸಂಜೆವಾಣಿ ವಾರ್ತೆ
ಕುರುಗೋಡು.ಜು.15:  ಆರ್ಥಿಕ, ಸಮಾಜಿಕ, ಶೈಕ್ಷಣಿಕ, ಮತ್ತು ರಾಜಕೀಯವಾಗಿ ಹಾಲುಮತ ಸಮಾಜ ಅಭಿವೃದ್ದಿಹೊಂದಬೇಕಾದರೆ ಹಾಲುಮತ ಸಮಾಜದ ತಂದೆ-ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕೆಂದು  ಕಾಂಗ್ರೆಸ್‍ನ ಹಿಂದುಳಿದ ವರ್ಗಗಳ ವಿಭಾಗದ ಬಳ್ಳಾರಿ ಗ್ರಾಮೀಣ ಜಿಲ್ಲಾದ್ಯಕ್ಷ ಕೆ.ಮಲ್ಲಿಕಾರ್ಜುನ ಹೇಳಿದರು.
ಅವರು ಪಟ್ಟಣದಲ್ಲಿ  ಹಾಲುಮತ ಮಹಾಸಭಾಕ್ಕೆ ಕುರುಗೋಡು ತಾಲೂಕು ಅದ್ಯಕ್ಷ, ಹಾಗು ತಾಲೂಕು ಗೌರವಾದ್ಯಕ್ಷರ ಅಯ್ಜೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತನಾಡಿದ ಅವರು, ಹಾಲುಮತ ಸಮಾಜದವರು ಕನಕಗುರುಪೀಠದ ಅಡಿ ಸಂಘಟಿತರಾದರೆ ಎಸ್ಟಿ ಮೀಸಲಾತಿಯನ್ನು ಸುಲಭವಾಗಿ ಪಡೆಯಬಹುದು ಎಂದು ನುಡಿದರು. ಮಾತ್ರವಲ್ಲದೆ ಕುರುಬ ಸಮಾಜದವರು ಒಗ್ಗಟ್ಟಿನಿಂದ ಶಿಕ್ಷಣ ಸಂಸ್ಥೆ, ವಸತಿ ಶಾಲೆಗಳನ್ನು ಆರಂಭಿಸಿ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಇತರೆ ಸರ್ಕಾರ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುತ್ತಿದೆ ಎಂದು ನುಡಿದರು. ಸಮಾಜದ ಬಂದುಗಳು ಯುವಕರ ಕೈಗೆ ಅಧಿಕಾರ ಕೊಟ್ಟು, ಹಿರಿಯರು ಅವರ ಬೆನ್ನೆಲುಬಾಗಿರುವುದು ಉತ್ತಮ ಬೆಳೆವಣಿಗೆ ಎಂದರು.
ಹಾಲುಮತ ಮಹಾಸಭಾ ಕುರುಗೋಡು ತಾಲೂಕು ಘಟಕದ ನೂತನ ಗೌರವಾದ್ಯಕ್ಷ ಸಮಿತಿಗೇರಿನಾಗಪ್ಪ ಪ್ರಸ್ತಾವಿಕವಾಗಿ ಮಾತನಾಡಿ,  ಹಾಲುಮತ ಮಹಾಸಭಾ ರಾಜ್ಯ ಘಟಕದ ಅದ್ಯಕ್ಷರು, ಜಿಲ್ಲಾ ಘಟಕದ ಅದ್ಯಕ್ಷರು ನೀಡಿದ ಸಲಹೆ-ಸೂಚನೆಯಂತೆ ಹಾಲುಮತ ಮಹಾಸಭಾದ ಸಂಘಟನೆಯನ್ನು ಬಲಪಡಿಸಲುವಾಗಿ ಭರವಸೆ ನೀಡಿದರು. ಹಾಲುಮತ ಮಹಾಸಭಾ ಕುರುಗೋಡು ತಾಲೂಕು ಘಟಕದ ಅದ್ಯಕ್ಷ ಮುರುಣ್ಣೆವೀರೇಶ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೆ.ಮಂಜುನಾಥ, ಎಪಿಎಂಸಿ ಮಾಜಿ ನಿರ್ದೆಶಕ ಕೆ.ವಿರುಪಾಕ್ಷಗೌಡ,  ಬಟ್ಟೆಕಲ್ಲುಶಂಕ್ರಪ್ಪ, ಮೂರುಣ್ಣೆಶೇಷಪ್ಪ, ಸಿಂದುವಾಳಗುರುಸಿದ್ದಪ್ಪ, ಗುಬ್ಬಜ್ಜಿಮಲ್ಲಿಕಾರ್ಜುನ, ಗೆಣಿಕೆಹಾಳುಸಿದ್ದಯ್ಯ,ಕೊರಚರ ಅಂಜಿನಪ್ಪ, ಮದಿರೆಪ್ರಭಾಕರ್‍ಗೌಡ, ತಳವಾರುನಾಗರಾಜ, ಮುಂಡ್ರಿಗಿನಾಗರಾಜ, ಕಲ್ಲೇಶಿ, ಗಿರೀಗೌಡ, ಮದಿರೆಪ್ರಭಾಕರಗೌಡ, ಆಗಲೂರಪ್ಪ, ಪೂಜಾರಿಕಲ್ಗುಡೆಪ್ಪ, ಹೊನ್ನೇಶಿ, ಪಲ್ಲೆಮಂಜುನಾಥ್, ಮುಂಡರಿಗಿ ಟ್ರಾಕ್ಸ್‍ಬಸವ, ಬಟಾರ್‍ಆಗಲೂರಪ್ಪ, ಸಿಂದುವಾಳಕಲ್ಗುಡೆಪ್ಪ, ಸೇರಿದಂತೆ ಇತರೆ ಹಾಲುಮತ ಸಮಾಜದ ಬಂದುಗಳು, ಯುವಕರು ಇದ್ದರು. ಕೊನೆಯಲ್ಲಿ ಅದ್ಯಕ್ಷ ಹಾಗು ಗೌರವಾದ್ಯಕ್ಷರನ್ನಾಗಿ ನೂತನವಾಗಿ ಆಯ್ಕೆ ಯಾಗಿದ್ದರಿಂದ ಸಮಾಜದ ಯುವಕರು ಪಟಾಕಿಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು.