ಹಾಲುಮತ ಸಂಸ್ಕೃತಿ ವೈಭವ 12 ರಿಂದ

ಕಲಬುರಗಿ,ಜ.5-ರಾಯಚೂರ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವೀರಗೋಟ ತಿಂಥಣಿ ಬ್ರಿಡ್ಜ್ ನ ಹತ್ತಿರವಿರುವ ಕನಗುರು ಪೀಠದಲ್ಲಿ ಜ.12,13 ಮತ್ತು 14 ರಂದು ಮೂರುದಿನಗಳ ಕಾಲ “ಹಾಲುಮತ ಸಂಸ್ಕೃತಿ ವೈಭವ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೊಂಡ-ಕುರುಬ ಎಸ್.ಟಿ.ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಎಸ್.ಕೌಲಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಂಥಣಿಯ ಕಾಗಿನೆಲೆ ಮಹಾ ಸಂಸ್ಥಾನ ಕನಕಗುರುಪೀಠದ ಸಿದ್ಧರಾಮಾನಂದ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿರುವ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜ.12 ರಂದು ಬೆಳಿಗ್ಗೆ 10.30ಕ್ಕೆ ಬೀರದೇವರ ಉತ್ಸವ ನಡೆಯಲಿದ್ದು, 108 ಪಟ್ಟದ ಪೂಜಾರಿಗಳು, 108 ಗೊರವರು, 108 ಈರಕಾರರು, 108 ವಾರುಗಳು ಮತ್ತು 108 ಡೊಳ್ಳುಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯುವುದು. ಬೆಳಿಗ್ಗೆ 9.30ಕ್ಕೆ ಕೃಷ್ಣಾ ನದಿಯಲ್ಲಿ ಗಂಗಾಪೂಜೆಯೊಂದಿಗೆ ತಿಂಥಣಿ ಬ್ರಿಡ್ಜ್ ನಿಂದ ಮೆರವಣಿಗೆ ಹೊರಟು ಬೀರದೇವರಿಗೆ ಬಾವನ್ನ ಬಿರುದಾವಳಿಗಳನ್ನು ಅರ್ಪಿಸಲಾಗುವುದು ಎಂದು ತಿಳಿಸಿದರು.
@12bc = ಟಗರು ಕಾಳಗ
ಅದೇ ದಿನ ಮಧ್ಯಾಹ್ನ 2-30ಕ್ಕೆ ಟಗರು ಕಾಳಗ ಆಯೋಜಿಸಲಾಗಿದ್ದು, ಟಗರು ಕಾಳಗದಲ್ಲಿ ಗೆದ್ದವರಿಗೆ ಮೊದಲ ಬಹುಮಾನವಾಗಿ 50 ಸಾವಿರ, ಎರಡನೇ ಬಹುಮಾನವಾಗಿ 25 ಸಾವಿರ ರೂ.ನಗದು ನೀಡಲಾಗುವದು ಎಂದು ತಿಳಿಸಿದರು.
13 ರಂದು ಬೆಳಿಗ್ಗೆ 11 ಗಂಟೆಗೆ ಸುಡಗಾಡ ಸಿದ್ದರು-ಟಗರು ಜೋಗಿಗಳು, ಹೆಳವರ ಸಮಾವೇಶ ನಡೆಯಲಿದೆ. ಅದೇ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ ನಡೆಯಲಿದೆ ಎಂದು ತಿಳಿಸಿದರು.
14 ರಂದು ಬೆಳಿಗ್ಗೆ 11 ಗಂಟೆಗೆ ಮಹಾತ್ಮಾ ಬೊಮ್ಮಗೊಂಡೇಶ್ವರ-ಸಿದ್ಧರಾಮೇಶ್ವರ ಉತ್ಸಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ರೂ.50 ಸಾವಿರ ಮೊತ್ತದ ಕನಕಶ್ರೀ, ಹಾಲುಮತಭಾಸ್ಕರ, ಸಿದ್ದಶ್ರೀ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರದಾನ ಮಾಡಲಾಗುವುದು. ಅದೇ ದಿನ ಮಧ್ಯಾಹ್ನ 2-30ಕ್ಕೆ ಎತ್ತುಗಳ ಭಾರ ಎಳೆಯುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಮೂರುದಿನಗ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು ಸೇರಿದಂತೆ ಸುಮಾರು 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಪಟ್ಟದ ಪೂಜಾರಿಗಳು, ಈರಕಾರರು, ಗೊರವರು, ಒಗ್ಗೇರು, ವಾರುಗಳು ತಮ್ಮ ಹೆಸರು ನೋಂದಾಯಿಸಲು ಮೊ.ನಂ.9449615600, 9945570505, 7338440687, 9448568330 ಗೆ ಸಂಪರ್ಕಿಸಲು ಕೋರಿದರು.
ತಿಂಥಣಿ ಬ್ರಿಡ್ಜ್ ನ ಲಿಂಗಬೀರುದೇವ ಶರಣರು, ಮುಖಂಡರಾದ ನಿಂಗಪ್ಪಾ ಹೇರೂರ, ಶಿವಣ್ಣ ಕಮಠಾಣ, ಮಲ್ಲಿಕಾರ್ಜುನ ಪೂಜಾರಿ, ಡಾ.ವಿ.ಜಿ.ಪಾಟೀಲ, ಡಿ.ಸಿ.ಹೊಸಮನಿ, ಹಯ್ಯಾಳಪ್ಪ ಪೂಜಾರಿ, ಕಾಳಪ್ಪಾ ತೆಗನೂರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.