ಹಾಲುಮತ ಸಂಸ್ಕೃತಿಯ ವೈಭವದ ಫೋಸ್ಟರ್ ಬಿಡುಗಡೆ

ದೇವದುರ್ಗ.ರಿ.೦೪-ಸಮೀಪದ ತಿಂಥಣಿ ಬ್ರಿಡ್ಜ್ ಶ್ರೀಕನಕಗುರುಪೀಠದಲ್ಲಿ ಜ.೧೨ರಿಂದ ೧೪ರವರೆಗೆ ಮೂರು ದಿನಗಳ ಕಾಲ ಜರುಗುವ ಹಾಲುಮತ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಆಮಂತ್ರಣ ಮತ್ತು ಕರಪತ್ರ ಶ್ರೀಮಠದಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.
ಕಲಬುರ್ಗಿ ವಿಭಾಗೀಯ ಶ್ರೀಕನಕಗುರು ಪೀಠಾಧೀಶರಾದ ಶ್ರೀಸಿದ್ದಾರಾಮಾನಂದ ಸ್ವಾಮೀಜಿ ಮಾತನಾಡಿ, ಮೂರು ದಿನಗಳ ನಡೆಯುವ ಕಾರ್ಯಕ್ರಮಕ್ಕೆ ಅನೇಕ ಮಠಾಧೀಶರು, ರಾಜಕಾರಣಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯವಾಗಿ ನೂರೆಂಟು ಪೂಜಾರಿಗಳು, ನೂರೆಂಟು ಗೊರವರು, ನೂರೆಂಟು ಈರಾಕಾರರು, ನೂರೆಂಟು ವಾರುಗಳು, ನೂರೆಂಟು ಡೊಳ್ಳು, ಪಲ್ಲಕ್ಕಿಯನ್ನು ಕೃಷ್ಣಾನದಿಯಲ್ಲಿ ಪೂಜೆಯೊಂದಿಗೆ ಮೆರೆವಣಿಗೆ ಮೂಲಕ ಶ್ರೀ ಬೀರದೇವರಿಗೆ ಅರ್ಪಿಸಲಾಗುವುದು ಎಂದರು
ಅಲ್ಲದೆ ಸಮಾಜದ ಮುಖ್ಯವಾಹಿನಿಯಿಂದ ವಂಚಿತವಾಗಿರುವ ಸುಡುಗಾಡು ಸಿದ್ದರು, ಟಗರು ಜೋಗಿಗಳು ಮತ್ತು ಎಳವರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ಬೀರದೇವರು ಶ್ರೀ ಬೊಮ್ಮ ಬಂಡೇಶ್ವರ ಮತ್ತು ಸಿದ್ದರಾಮೇಶ್ವರ ಉತ್ಸವ ಜರುಗಲಿದೆ. ಈ ವೇಳೆ ವಿವಧ ಕ್ಷೇತ್ರದಲ್ಲಿ ಸಾದನೆಗೈದ ಮಹಾನೀಯರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು, ಕಾರ್ಯಕ್ರಮಕ್ಕೆ ವಿವಧ ಜಿಲ್ಲೆಯ ಭಕ್ತರು ಸೇರಿ ಅಂತರ್ಜಾಲ ಜಿಲ್ಲೆಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ ಮುಖಂಡರಾದ ಶಿವಣ್ಣ ವಕೀಲ, ಶರಣಪ್ಪ ರೂಡಿಗಿ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಶರಣಯ್ಯ ಒಡೆಯರ್ ಇತರರು ಇದ್ದರು.

೦೪ಡಿ.ವಿ.ಡಿ-೧