
(ಸಂಜೆವಾಣಿ ವಾರ್ತೆ)
ವಿಜಯಪುರ :ಜು.11: ವಿಜಯಪುರ ತಾಲೂಕಿನ ಸುಕ್ಷೇತ್ರ ಅಲಿಯಾಬಾದ್ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಪಟ್ಟದ ಪೂಜಾರಿಗಳ ಹಾಗೂ ಜಡೆತಲೆ ಪೂಜಾರಿಗಳ ಏಳನೆಯ ಧರ್ಮಸಭೆಯನ್ನು ನಡೆಸಲಾಯಿತು. ಧರ್ಮಸಭೆಯ ಸಾನಿಧ್ಯವನ್ನು ನಿಂಗಪ್ಪ ಪೂಜಾರಿ ವಹಿಸಿಕೊಂಡರು ನಾಗಠಾಣ ಮೀಸಲು ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕಧೋಂಡ ಧರ್ಮಸಭೆಯನ್ನು ಉದ್ಘಾಟಿಸಿ ಕರ್ನಾಟಕ ರಾಜ್ಯದಲ್ಲಿ ಪಟ್ಟದ ಪೂಜಾರಿಗಳು ಹಾಗೂ ಜಡೆತಲೆ ಪೂಜಾರಿಗಳು ತಲೆತಲಾಂತರದಿಂದ ಧಾರ್ಮಿಕ ಕಾರ್ಯಗಳ ಕಾರ್ಯಕ್ರಮಗಳನ್ನು ಮಾಡುತ್ತಾ ಜಾತಿ ಭೇದವಿಲ್ಲದೆ ಅನೇಕ ಭಕ್ತರನ್ನು ಉದ್ದರಿಸಿದ್ದಾರೆ ಅಲ್ಲವೇ ಅವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಧಾರ್ಮಿಕ ಕಾರ್ಯದೊಂದಿಗೆ ತಮ್ಮ ಉದ್ಯೋಗವನ್ನು ನಡೆಸದೆ ತಮ್ಮ ದಿನ ನಿತ್ಯದ ಸಂಸಾರದ ನಡೆಸುವುದು ಕಷ್ಟವಾಗಿ ಕಷ್ಟವಾಗಿದೆ ಅಲ್ಲದೆ ತಮ್ಮ ಮಕ್ಕಳು ಶಿಕ್ಷಣವಂತರಾಗಲು ಕೂಡ ಸಮಸ್ಯೆಯಾಗಿದೆ ಆದ್ದರಿಂದ ನಾನು ತಮ್ಮ ಯೋಗದೊಂದಿಗೆ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರ ಭೇಟಿ ಮಾಡಿ ನಿಮ್ಮ ಸಮಸ್ಯೆಯನ್ನು ಅವರ ಗಮನಕ್ಕೆ ತಂದು ಎಲ್ಲರಿಗೂ ಬೇಗನೆ ಗೌರವ ಧನವನ್ನು ಒದಗಿಸಿಕೊಡಲು ಶ್ರಮಿಸುತ್ತೇನೆ ಎಂದರು.
ಅತಿಥಿ ಭಾಷಣವನ್ನು ಮಾಡಿದ ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಬೀರಪ್ಪ ಜುಮನಾಳ , ಕಾಗಿನೆಲೆಯ ಪ್ರಥಮ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮೀಜಿಗಳ ಪುಣ್ಯಾರಾಧನೆಯನ್ನು ಧರ್ಮಸಭೆಯಲ್ಲಿ ನೆರವೇರಿಸಿ ಎಲ್ಲ ಪಟ್ಟದ ಪೂಜಾರಿಗಳ ಹಾಗೂ ಜಡಚಲಿ ಪೂಜಾರಿಗಳೊಂದಿಗೆ ಪುಷ್ಪಾರ್ಚನೆಯನ್ನು ನೆರವೇರಿಸಿ ಸಮಾಜಕ್ಕೆ ಹಾಗೂ ರಾಜ್ಯದಲ್ಲಿ ಹೊಸದಾಗಿ ಕನಕ ಗುರು ಪೀಠದ ಪೀಠಾಧ್ಯಕ್ಷರಾಗಿ ಸಮಾಜದ ಶೈಕ್ಷಣಿಕ ಧಾರ್ಮಿಕ ಉದ್ಯೋಗಿಕರಣ ಮುಂತಾದ ಸಮಾಜ ಗೆಲುವಂತ ಸಮಾಸ ಸಮಸ್ಯೆಗಳನ್ನು ಶ್ರೀಗಳು ತಮ್ಮ ಜೀವಿತಕಾಲದಲ್ಲಿ ಬಗೆಹರಿಸಿಕೊಂಡು ಬಂದಿರುವ ಅಂತ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದರು ಅಲ್ಲವೇ ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಟ್ಟಿಗೆ ಹೋಗಲು ಎಲ್ಲ ಜಡೆತಲ್ಲಿ ಪೂಜಾರಿಗಳು ಪಟ್ಟದ ಪೂಜಾರಿಗಳು ಬೇಗನೆ ಸಂಬಂಧಪಟ್ಟ ಸಂಘಟನೆಗೆ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು ಹಾಗೂ ನಮ್ಮ ಹಟ್ಟಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಶಾಸಕರಲ್ಲಿ ವಿನಂತಿಸಿಕೊಳ್ಳಲಾಯಿತು.
ತಿಡುಗುಂದಿಯ ಶ್ರೀ ಬನಸಿದ್ದ ಮಹಾರಾಜರು ಮಾತನಾಡಿ ಸಮಾಜದಲ್ಲಿ ಧರ್ಮ ಸಭೆಯಲ್ಲಿ ನಾನೊಬ್ಬ ನನ್ನಿಂದಲೇ ಧರ್ಮಸಭೆ ನಡೆಯುತ್ತದೆ ಎನ್ನುವುದು ತಪ್ಪು ಎಲ್ಲ ಪೂಜ್ಯರು ಸಮಾನತೆಯಿಂದ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಿ ಸರಿದಾರಿಗೆ ತರುವಂತ ಕೆಲಸವನ್ನು ಮಾಡಬೇಕೆಂದರು ಬರುವ ಶ್ರಾವಣ ಮಾಸದಲ್ಲಿ ಎಲ್ಲ ಗ್ರಾಮಗಳಲ್ಲಿ ಸಿದ್ದರ ಪುರಾಣ-ಪ್ರವಚನ ನಡೆಸಬೇಕೆಂದರು. ಸುಕ್ಷೇತ್ರ ರೋಗಿ ಜಟ್ಟಿಂಗೇಶ್ವರ ಪೂಜ್ಯರು ಮಲ್ಲಪ್ಪ ಮಾರಾಯರು ಶಿವಾಯ್ಮಾರಾಯರು ಭರಟಿಗೆ ಶಂಕರ ಮಾರಾಯರು, ಕರ್ನಾಟಕ ರಾಜ್ಯ ಪಟ್ಟದ ಹಾಗೂ ಜಡೆತಲೆ ಪೂಜಾರಿಗಳ ಸಂಘದ ಅಧ್ಯಕ್ಷರಾದ ಶ್ರೀ ಮಾಳಿಂಗರಾಯ ಮಾರಾಯರು ವೇದಿಕೆ ಮೇಲೆ ಇದ್ದರು.
ಹಿರಿಯರಾದ ದುಂಡಪ್ಪ ಕುಮಟಗಿ ಧರ್ಮಸಭೆಯ ಧರ್ಮಸಭೆಯ ನೇತೃತ್ವವಹಿಸಿ ಎಲ್ಲ ಪೂಜಾರಿಗಳಿಗೆ ಬಂಡಾರ ಸೇವೆಯನ್ನು ಮಾಡಿಸಿ ಅನ್ನ ಸಂತರ್ಪಣೆಯನ್ನು ನೆರವೇರಿಸಿದರು ಕಲ್ಲಪ್ಪ ನಾಟಿಕಾರ್ ಅಮೀನಪ್ಪ ಜುಮನಾಳ ಮಲ್ಲಪ್ಪ ಬಡ್ಡೂರ್ ನಾಗಪ್ಪ ಪೂಜಾರಿ ಮಾದೇವ್ ಚಿಕಾಟೆ ಎಲ್ಲಪ್ಪ ಕನಾಳ ಅಶೋಕ್ ಕಳ್ಳಿಗುಡ್ಡಿ ಮಲ್ಲಪ್ಪ ಬಡ್ದುರ ಕಾಲೆಬಾಗ್ ಅನಿಲ್ ಪೂಜಾರಿ ಸಂಕನಾಳ ಕಲಬಳಗಿ ಅಮೋಗಿ ಪೂಜಾರಿ ಬೀವ ಮಾನೆ ಮಾರಾಯರು ಬೀರಪ್ಪ ಕಣಿಮಣಿ ಎಲ್ಲಪ್ಪ ಪೂಜಾರಿ ಜೊತೆಪ್ಪ ಪೂಜಾರಿ ಇಂಡಿ ಸಿಂದಗಿ ತಾಲೂಕಿನ ಹಾಗೂ ವಿಜಯಪುರ ತಾಲೂಕಿನ ಎರಡು ನೂರಕ್ಕೂ ಹೆಚ್ಚು ಪೂಜಾರಿಗಳು ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದರು.
ಪೆÇ್ರಫೆಸರ್ ಕೊಳಮಲ್ಲಿ ಸತೀಶ್ ಅಡವಿ ಸ್ವಾಗತಿಸಿದರು. ಅಮೋಘಸಿದ್ದ ಪೂಜಾರಿ ಕಾಮಣ್ಣ ಗಂಗನಹಳ್ಳಿ ರಾಜು ಕಂಕನವಾಡಿ ನಿರೂಪಿಸಿದರು. ದೇವಕಾಂತ್ ಬಿಜ್ಜರಗಿ ಪ್ರಾಸ್ತಾವಿಕ ಮಾತನಾಡಿದರು ಮಹಾದೇವ ಚಿಕಾಟೆ ವಂದಿಸಿದರು.