ಹಾಲುಮತ ಉತ್ಸವ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ

ಲಿಂಗಸುಗೂರು.ಜ.೧೦-ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ ತಿಂಥಣಿ ಬ್ರಿಜ್‌ನಲ್ಲಿ ಜ.೧೨ರಿಂದ ಆರಂಭವಾಗುವ ಹಾಲುಮತ ಸಾಂಸ್ಕೃತಿಕ ವೈಭವ-೨೦೨೧ ಸಮಾರಂಭದ ಉದ್ಘಾಟನೆಗೆ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆಗಮಿಸಲಿದ್ದಾರೆ ಸಮಾಜ ಬಾಂಧವರು, ಅಭಿಮಾನಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ರಾಯಚೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಾದ್ಯಕ್ಷ ಕೆ.ಕರಿಯಪ್ಪ ಕರೆ ನೀಡಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನಡೆಯುವ ಹಾಲುಮತ ಸಾಂಸ್ಕೃತಿ ಉತ್ಸವ ಸಮಾರಂಭ ಜ.೧೨ ರಿಂದ ೧೪ರ ವರೆಗೆ ಮೂರು ದಿನಗಳ ಕಾಲ ಜರುಗಲಿದೆ. ಪೀಠಾಧ್ಯಕ್ಷ ಸಿದ್ಧರಮಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಲಿರುವ ಸಮಾರಂಭದಲ್ಲಿ ಮೂರು ದಿನಗಳ ಕಾಲ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಜರುಗಲಿವೆ.
ಗೋವಾ ರಾಜ್ಯದ ಉಪಮುಖ್ಯಮಂತ್ರಿ ಚಂದ್ರಕಾಂತ ಕವಳೇರ್, ರಾಜ್ಯದ ಸಚಿವರು, ಸಂಸದರು, ಶಾಸಕರುಗಳು ಸೇರಿ ಅನ್ಯರಾಜ್ಯದ ಗಣ್ಯರೂ ಸಮಾರಂಭಕ್ಕೆ ಆಗಮಿಸಲಿದ್ದಾರೆ. ರಾಯಚೂರು ಜಿಲ್ಲೆ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗದ ಸಮುದಾಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಸಮಾವೇಶದಲ್ಲಿ ಅಂದಾಜು ೨೦ ಸಾವಿರ ಜನಸಂಖ್ಯೆ ಸೇರುವ ನಿರೀಕ್ಷೆ ಇದ್ದು, ಕೊರೊನಾ ಸಂಕಷ್ಟ ಕಾಲ ಇನ್ನೂ ಸಂಪೂರ್ಣವಾಗಿ ಮರೆಯಾಗದ ಕಾರಣ ಸಮಾವೇಶಕ್ಕೆ ಬರುವ ಸಮುದಾಯದ ಬಂಧುಗಳು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಮಾಜದ ಧಾರ್ಮಿಕ, ರಾಜಕೀಯ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮುಖಂಡ ಹನುಮಂತಪ್ಪ ಕಂದಗಲ್ ಹೇಳಿದರು.
ಸಮಾಜದ ಮುಖಂಡರಾದ ಸಂಗಣ್ಣ ಬಯ್ಯಾಪೂರ, ಮುದುಕಪ್ಪ ವಕೀಲರು, ಮಂಜುನಾಥ ಆನೆಹೊಸೂರು, ಬೀರಪ್ಪ ನಿಲೋಗಲ್, ಪರಸಪ್ಪ ಹುನಕುಂಟಿ, ಭೀಮಣ್ಣ ಹುನಕುಂಟಿ, ಕುಪ್ಪಣ್ಣ ಕಸಬಾಲಿಂಗಸುಗೂರು, ಗದ್ದೆನಗೌಡ ಜಾಗೀರನಂದಿಹಾಳ, ವಿಜಯಕುಮಾರ ಸೇರಿ ಇತರರು ಇದ್ದರು.