ಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕರ ಅಗೌರವ ಪದಬಳಕೆ ಸಲ್ಲ

ಜಗಳೂರು.ಜು.25; ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪದೇ ಪದೇ ನಮ್ಮ ಬಿಜೆಪಿ ಪಕ್ಷದ ಶಾಸಕ ಎಸ್. ವಿ ರಾಮಚಂದ್ರ ಅವರನ್ನು ಪ್ರಚಾರಪ್ರಿಯ, ಸುಳ್ಳುಗಾರ, ಮೋಜುಗಾರ ಎಂಬ ಪದ ಬಳಸುವ ಮೂಲಕ ಟೀಕಿಸುವುದು ಸಮಂಜಸವಲ್ಲ ಎಂದು ಬಿಜೆಪಿ ಜಿಲ್ಲಾ ಎಸ್‍.ಟಿ ಮೋರ್ಚಾದ ಕಾರ್ಯದರ್ಶಿ ಬಿದರಕೆರೆ ರವಿ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಂದ ಆಯ್ಕೆಯಾದ ಒಬ್ಬ ಜನ ಪ್ರತಿನಿಧಿಗೆ ಅಗೌರವ ಸೂಚಿಸುವುದು ಸರಿಯಲ್ಲ. ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಶಾಸಕರು ಕಾರ್ಯಕ್ರಮದಲ್ಲಿ 57 ಕೆರೆಗೆ ತುಂಬಿಸುವ ಯೋಜನೆ ತಂದಿದ್ದು ನಮ್ಮ ಸರಕಾರ. ನಾನೇ ರುವಾರಿ ಎಂದು ಫ್ಲಕ್ಸ್, ಬ್ಯಾನರ್ ಗಳಲ್ಲಿ ಹಾಕಿಕೊಂಡು ಸುಳ್ಳು ಹೇಳಿದ್ದಾರೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದಾಗ ಬಜೆಟ್‍ನಲ್ಲಿ 42 ಕೆರೆ ತುಂಬಿಸಲು 250 ಕೋಟಿ ಮೀಸಲಿಟ್ಟರು. ಆದರೆ ಆರ್ ಡಿ ಪಿ ಆರ್ ಕೇವಲ 15 ಕೋಟಿರೂ ಅಷ್ಟೇ ಮೀಸಲಿಟ್ಟರು ನಂತರ ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಒಟ್ಟು 57 ಕೆರೆಗಳನ್ನು ಪಟ್ಟಿಯಲ್ಲಿ ಸೇರಿಸಿ ಒಟ್ಟಾರೆ 665 ಕೋಟಿ ಹಣ ಮಂಜೂರು ಮಾಡಿದರು.ಭದ್ರಾಮೇಲ್ದಂಡೆ ಯೋಜನೆಗೆ ಕರ್ನಾಟಕ ಸರ್ಕಾರದ ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಳೆದ ತಿಂಗಳುಗಳ ಹಿಂದೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ ಮಾಜಿ ಶಾಸಕರು ನಮ್ಮ ಸರಕಾರದ ಯೋಜನೆ ಎಂದು ಹೇಳುತ್ತಿದ್ದಾರೆ. ಈ ಯೋಜನೆಗೆ ಮೂರು ಜನ ಮುಖ್ಯಮಂತ್ರಿಗಳ ಕೊಡುಗೆ ಇದೆ ಎಂದರು.ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಗಂಗಾಕಲ್ಯಾಣ ಯೋಜನೆ ಅಡಿ ಕ್ಷೇತ್ರದಲ್ಲಿ 400 ಬೋರ್‍ವೆಲ್ ಮಂಜೂರಾಗಿದೆ, ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ  ಅಧ್ಯಕ್ಷರಾದ ಎಸ್.ವಿ.ರಾಮಚಂದ್ರ 15.93 ಕೋಟಿ ಹಣ ಬಿಡುಗಡೆ ಮಾಡಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮಾಜಿ ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಏನು ಎಂಬುದು ಪಟ್ಟಿಯನ್ನು ತಂದು ಸಾಬೀತುಪಡಿಸಲಿ ನಮ್ಮ ಸರಕಾರದ ಅಭಿವೃದ್ಧಿಗಳನ್ನು ನಾವು ಜನರ ಮುಂದೆಡುತ್ತೇವೆ. ಪದೇ ಪದೇ ಹಾಲಿ ಶಾಸಕರ ವಿರುದ್ಧ ಅಸವಿಧಾನಿಕ ಪದ ಬಳಸುವುದು ಶೋಭೆ ತರುವಂತದ್ದಲ್ಲ ಎಂದು ಎಚ್ಚರಿಕೆ ನೀಡಿದರು 
ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊಕ್ಕೆ ನಾಗರಾಜ್ ಮಾತನಾಡಿ, ಪಕ್ಕದ ಕ್ಷೇತ್ರಕ್ಕೆ ನಮ್ಮ ಜಗಳೂರು ತಾಲೂಕಿನಿಂದ ತುಂಗಭದ್ರಾ ಡ್ಯಾಂ ಹಿನ್ನೀರು ಹರಿಸುವ ಕುಡಿಯುವ ನೀರಿನ ಪೈಪ್‍ಲೈನ್ ಯೋಜನೆ ನಮ್ಮ ಕ್ಷೇತ್ರದ ಕೋಗಳತೆ ದೂರದಲ್ಲೇ ಹಾದುಹೋಗಿದೆ ಆಗ ಶಾಸಕರಾಗಿದ್ದ ಎಚ್.ಪಿ.ರಾಜೇಶ್ ಅವರು ನಮ್ಮ ಕ್ಷೇತ್ರಕ್ಕೆ ಏಕೆ ಯೋಜನೆ ಸೇರಿಸಲಿಲ್ಲ ನಮ್ಮ ತಾಲೂಕಿಗೆ ಮಾಜಿ ಶಾಸಕರು ಯೋಜನೆಯಲ್ಲಿ ಬಹಳ ಅನ್ಯಾಯ ಮಾಡಿದ್ದಾರೆ  ಎಂದು ಪ್ರಶ್ನಿಸಿದರು.ಜಗಳೂರು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್ ಮಾತನಾಡಿ, ವೈಯಕ್ತಿಕವಾಗಿ ಯಾರೂ ಯಾರನ್ನೂ ದೂಷಣೆಮಾಡಬಾರದು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲು ಸಲಹೆ ಸಲಹೆ ಕೊಡಬೇಕು ವಿನಹ ನಮ್ಮ ಬಿಜೆಪಿ ಪಕ್ಷದ ಹಾಲಿ ಶಾಸಕ ಎಸ್. ವಿ ರಾಮಚಂದ್ರಪ್ಪ ಅವರ ವಿರುದ್ಧ ಪದೇ ಪದೇ ಸಭೆ-ಸಮಾರಂಭಗಳಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಟೀಕಿಸುವುದು ಸರಿಯಲ್ಲ ರಾಜಕೀಯವಾಗಿ ಟೀಕೆ ಮಾಡಲಿ ಅದನ್ನು ಬಿಟ್ಟು ವೈಯಕ್ತಿಯ ತೇಜೋವಧೆ ಮಾಡಬಾರದು ಎಂದರು. ಈ ವೇಳೆ ಬಿಜೆಪಿ ಮುಖಂಡರಾದಎಸ್.ಕೆ.ಮಂಜುನಾಥ್.ಡಿ.ವಿ ನಾಗಪ್ಪ,ಶಿವಕುಮಾರ್ ಸ್ವಾಮಿ, ನಿಜಲಿಂಗಪ್ಪ,ವಕೀಲರಾದ ತಿಪ್ಪೇಸ್ವಾಮಿ.ಪ.ಪಂ ಅಧ್ಯಕ್ಷ ಸಿದ್ದಪ್ಪ, ಕಾನನಕಟ್ಟೆ ಪ್ರಭು. ಬಿಸ್ತುವಳ್ಳಿ ಬಾಬು.ಕಸ್ತೂರಿಪುರ ಶಿವಣ್ಣ, ಕಾನನಕಟ್ಟೆ ಪ್ರಭು. ಬಗರ್ ಹುಕುಂ ಸಮಿತಿ ಸದಸ್ಯ ತಿಪ್ಪೇಸ್ವಾಮಿ, ಓಬಳೇಶ್, ಪಲ್ಲಾಗಟ್ಟೆ ಚನ್ನಪ್ಪ, ಪ.ಪಂ ಸದಸ್ಯರಾದ ಆರ್ ತಿಪ್ಪೇಸ್ವಾಮಿ.ದೇವರಾಜ್, ಪಾಪಲಿಂಗ. ನವೀನ್ ಕುಮಾರ್. ಹಾಲೇಕಲ್ಲು ಮಾಜಿ ಗ್ರಾಮ ಪಂಚಾಯಿತಿ ರಾಜೇಶ್.ಕಲ್ಲೇದೇವರಪುರ ಮಹೇಶ್, ಬಸವನಕೋಟೆ ನಾಗೇಂದ್ರಪ್ಪ, ರಂಗಾಪುರ ಹನುಮಂತಪ್ಪ.ಮರೇನಹಳ್ಳಿ ನಾಗರಾಜ್.ಲೋಕೇಶ್. ಓಬಳೇಶ್. ವಿಜಯಕುಮಾರ್.ಅಂಜಿನಪ್ಪ.ರಮೇಶ್.ಸೇರಿದಂತೆ ಅನೇಕ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.