ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪುವ ಸುಳಿವು: ಸಾರ್ವಜನಿಕರಲ್ಲಿ ಚರ್ಚೆ

ದುರುಗಪ ಹೊಸಮನಿ
ಲಿಂಗಸುಗೂರು,ಮಾ.೦೨- ತಾಲೂಕಿನಲ್ಲಿ ಹಾಲಿ ಕಾಂಗ್ರೆಸ್ ಪಕ್ಷದ ಶಾಸಕರಾಗಿರುವ ಡಿ.ಎಸ್.ಹುಲಗೇರಿ ಇವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೈ ತಪ್ಪುವ ಸುಳಿವು ಸಾರ್ವಜನಿಕ ವಲಯದಲ್ಲಿ ಬಹು ಚರ್ಚಿತ ವಿಷಯವಾಗಿದೆ. ಹಾಲಿ ಶಾಸಕರು ಕಮಲ ಪಾಳಯ ದತ್ತ ಮುಖ ಮಾಡಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ ಎಂಬ ಶಂಕೆ ಇದೆ.
ಲಿಂಗಸುಗೂರು ಕ್ಷೇತ್ರದಲ್ಲಿ ಬಹುತೇಕ ಚುನಾಯಿತರಾದ ಜನಪ್ರತಿನಿಧಿಗಳು ಸ್ಥಳೀಯರು ಆಯ್ಕೆಯಾಗಿರುವ ಮೂಲಕ ರಾಜಕೀಯ ಅಧಿಕಾರ ಹಿಡಿಯವಷ್ಟರಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಿತ್ತಾರೆ ಎಂಬುದು ಈ ಕ್ಷೇತ್ರದ ಜನರೆ ಸಾಕ್ಷಿಯಾಗಿದ್ದಾರೆ.
ಈ ಕ್ಷೇತ್ರದಲ್ಲಿ ೨೦೧೩ರಿಂದ ೨೦೧೮ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ಡಿ.ಎಸ್ ಹೂಲಗೇರಿ ಇವರು ಸ್ಪರ್ಧೆ ಗೆ ಇಳಿದು ೨೦೧೩ರ ಚುನಾವಣೆಯಲ್ಲಿ ಪರಾಜಯಗೊಂಡಿದ್ದು, ಈಗ ಇತಿಹಾಸ ಆದರೆ ೨೦೧೮ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಮತ್ತೊಂದು ಸಲ ಸ್ಪರ್ಧಿಸಿ ಕೇವಲ ಕೆಲವೇ ಕೆಲವು ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿ ವಿಧಾನಸೌಧ ಒಳಗೆ ಪ್ರವೇಶ ಮಾಡಲು ಅವಕಾಶ ಮಾಡಿದ್ದು, ಈ ಕ್ಷೇತ್ರದ ಜನರು
ಶಾಸಕರ ರಿಪೋರ್ಟ್ ಕಾರ್ಡ್ ನಲ್ಲಿ ಅಸಮಾಧಾನ ಹೊಗೆ ಹರಿದಾಡುತ್ತಿದೆ. ಇದರಿಂದ ವರದಿ ಪ್ರಕಾರ ಹೈಕಮಾಂಡ್‌ಗೆ
ಸಲ್ಲಿಸಿರುವ ವರದಿಯು ಇವರಿಗೆ ಟಿಕೆಟ್ ನೀಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂಬುದು ಈಗಾಗಲೇ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಕಾರ್ಯಕರ್ತರು ಮಾತನಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷವು ನನಗೆ ಟಿಕೆಟ್ ನೀಡದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಬೇರೆ ಪಕ್ಷದತ್ತ ಮುಖ ಮಾಡಲು ಮುಂದಾಗುತ್ತದೆ ಎಂದು ರಾಯದುರ್ಗ ಗ್ರಾಮದ ಜೊಗೇರ ದೊಡ್ಡಿಯಲ್ಲಿ ಸ್ವತಃ ಶಾಸಕ ಡಿ.ಎಸ್ ಹೂಲಗೇರಿ ಇವರು ಹೇಳಿದ ಮಾತು ಸತ್ಯವಾಗಿದೆ. ಏಕೆಂದರೆ ಇಲ್ಲಿರುವ ತಾಲೂಕಿನ ಬಹುತೇಕ ಅಸ್ಪುಶ್ಯರಿಗೆ ಜನಸಂಖ್ಯೆ ಆಧಾರದ ಮೇಲೆ ಸಾಮಾಜಿಕ ಪರಿಕಲ್ಪನೆ ಅಡಿಯಲ್ಲಿ ಶೋಷಣೆಗೊಳಗಾದ ಜನರಾದ ಎಡಗೈ ಸಮುದಾಯಕ್ಕೆ ಸೇರಿದ ಎಚ್.ಬಿ ಮುರಾರಿ ಇವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಮೇಲೆ ಒತ್ತಡ ಹಾಕಲಾಗುತ್ತಿದೆ ಎನ್ನಲಾಗುತ್ತಿದೆ. ಇದರಿಂದ ಶಾಸಕರಿಗೆ ಟಿಕೆಟ್ ಕಟ್ಟಾಗುತ್ತದೆ ಎಂದು ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಮಾದಿಗರ ಜನಶಕ್ತಿ ತೋರಿಸಲು ಮುಂದಿನ ಚುನಾವಣೆಯಲ್ಲಿ ಅಸ್ಪುಶ್ಯರಿಗೆ ಪ್ರಾತಿನಿದ್ಯ ನೀಡಬೇಕು ಎಂಬುದು ಸಮುದಾಯದ ಮುಖಂಡರ ಆಶಯವಾಗಿದೆ. ರಾಯಚೂರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರದಲ್ಲಿ ಮಾದಿಗ ಸಮುದಾಯ ಟಿಕೆಟ್ ಹಂಚಿಕೆ ಮಾಡಬೇಕು ಎಂಬುದು ಮಾದಿಗರ ಕೂಗು. ಎಚ್.ಬಿ ಮುರಾರಿ ಇವರು ರಾಜಕೀಯವನ್ನು ಉಸಿರಾಗಿಸಿಕೊಂಡಿರುವ ನಾಯಕರಾಗಿ ಹೊರಹೊಮ್ಮಿತ್ತಾರೆ ಎಂಬುದು ಹೈಕಮಾಂಡ್‌ಗೆ ಗೊತ್ತಾಗಿರುತ್ತದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಹೈಕಮಾಂಡ್ ರಾಜ್ಯದ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹಾಕಲಾಗಿದೆ ಎನ್ನಲಾಗುತ್ತಿದೆ.
ಅದಕ್ಕಾಗಿಯೇ ಶಾಸಕ ಡಿ ಎಸ್ ಹೂಲಗೇರಿ ಇವರಿಗೆ ಬಹುತೇಕವಾಗಿ ಹಾಲಿ ಶಾಸಕರಿಗೆ ಟಿಕೆಟ್ ಕಟ್ಟಾಗುತ್ತದೆ ಎಂದರೆ ತಪ್ಪಾಗಲಾರದು ರಾಜ್ಯ ಹೈಕಮಾಂಡ್ ವರದಿಯ ಪ್ರಕಾರ ಶಾಸಕರ ಪಕ್ಷ ಸಂಘಟನೆ ದಿನ ದಿಂದ ದಿನಕ್ಕೆ ಕುಸಿಯುತ್ತಿದೆ ಎಂಬುದು ಸಾಬೀತಾಗಿದೆ ಅದಕ್ಕಾಗಿ ಹೈಕಮಾಂಡ್ ಹೊಸ ಮುಖಗಳಿಗೆ ಮಣಿ ಹಾಕಲು ಚಿಂತನೆ ನಡೆಸಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವಲಯದಲ್ಲಿ ಕೇಳಿ ಬರುತ್ತಿವೆ.
ನಿಷ್ಕ್ರಿಯ ಗೊಂಡ ಶಾಸಕರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಅಸಮಾಧಾನವಿದೆ. ಜನಪ್ರಿಯತೆ ಕಳೆದುಕೊಂಡ ಶಾಸಕರಿಗೆ ಟಿಕೆಟ್ ಕೊಕ್ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್ ಬರಲಾಗಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಒಂದು ವೇಳೆ ಕಾಂಗ್ರೆಸ್ ಪಕ್ಷ ಹಾಲಿ ಶಾಸಕರಿಗೆ ಕೈ ಟಿಕೆಟ್ ನೀಡದಿದ್ದರೆ ಯಾವ ಪಕ್ಷವೂ ಎನ್ನುವುದು ಸಾರ್ವಜನಿಕರ ವಲಯದಲ್ಲಿ ಹಾಗೂ ಮತದಾರರಿಗೆ ಭಾರಿ ಕೂತೂಹಲ ಮೂಡಿಸಿದೆ.