
•ಆಂತರಿಕ ಕಚ್ಚಾಟದಲ್ಲಿ ಕಾಂಗ್ರೆಸ್
•ಅಭೀವೃದ್ದಿ ಚರ್ಚೆಗೆ ಸವಾಲ್
•ಓಸಿ ಕ್ಲಬ್ ನಡೆಸುವವರು ನಮ್ಮಲ್ಲಿ ಇಲ್ಲ
•ಶ್ರೀರಾಮುಲು ಉಸ್ತುವಾರಿ ಸಚಿವರಾಗಿದ್ದು ಕಾಂಗ್ರೆಸ್ಸಿಗರಲ್ಲಿ ಭಯ
•ಶ್ರೀರಮುಲು ಹೆಸರೇಳುವಷ್ಟು ದೊಡ್ಡವರಲ್ಲ ಆಂಜಿನೇಯಲು
•ಜೂನ್ ತಿಂಗಳಲ್ಲಿ ಸ್ಲಂಗಳಲ್ಲಿ ಪಟ್ಟಾ ವಿತರಣೆ
•ಗ್ರಾಮೀಣದಿಂದ ಶ್ರೀರಾಮುಲು ಸ್ಪರ್ಧೆ ಪಕ್ಷಕ್ಕೆ ಬಿಟ್ಟಿದ್ದು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಮೇ 14 : ಸಚಿವ ಶ್ರೀರಾಮುಲು ಅವರು ಉಸ್ತುವಾರಿ ಸಚಿವರಾಗಿ ನಡೆಸಿರುವ ಅಭಿವೃದ್ದಿ ಕಾರ್ಯಗಳಿಂದ ತಲ್ಲಣಗೊಂಡಿರುವ ಕಾಂಗ್ರೆಸ್ ಮುಖಂಡರು. ಮುಂದಿನ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂಬ ಭಯದಿಂದ ಬಿಜೆಪಿ ಮೇಲೆ ಇಲ್ಲ ಸಲ್ಲದ ವಿಷಯಗಳ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರಿಂದು ನಗರದಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ. ಪಾಲಿಕೆ ಸದಸ್ಯ ಆಸೀಫ್ ಅವರು. ಶಾಸಕ ನಾಗೇಂದ್ರ ಅವರ ಸಂಬಂಧಿ ಎರ್ರಿಸ್ವಾಮಿ ಅವರ ವಿರುದ್ದ ಮೇಯರ್ ವಆಡಲು ಮೂರು ವರೆ ಕೋಟಿ ರೂ ತೆಗೆದುಕೊಂಢಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಅದು ಅವರವರ ಆಂತರಿಕ ಕಚ್ಚಾಟದಿಂದ. ಅದು ಬಿಟ್ಟು ಇದಕ್ಕೆ ಬಿಜೆಪಿಯವರು ಕುಮ್ಮಕ್ಕು ನೀಡಿದ್ದಾರೆ. ಶ್ರೀರಾಮುಲು ಬೆಂಬಲ ನೀಡಿದ್ದಾನೆಂದು ಬಾಯಿಗೆ ಬಂದತೆ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ ಮುಖಂಡ ಆಚಿಜನೇಯಲು ಅವರು, ಶ್ರೀರಾಮುಲು ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವರಲ್ಲ. ಇನ್ನು ನಗರದಲ್ಲಿ ಓಸಿ, ಕ್ಲಬ್ ಗಳನ್ನು ಬಿಜೆಪಿಯವರು ನಡೆಸುತ್ತಿದ್ದಾರೆಂಬ ಆರೋಪ ಮಾಡಿದ್ದಾರೆ. ಅಂತವರು ನಮ್ಮಲ್ಲಿ ಇಲ್ಲ. ಅಂತಹದೇನಿದ್ದರೂ ಕಾಂಗ್ರೆಸ್ ಪಕ್ಷದವರೇ ಮಾಡುತ್ತಿರಬಹುದು. ಕಾನೂನು ರೀತಿ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಇದೆ ಎಂದರು. ನಮ್ಮಕಡೆಯವರು ಇಲ್ಲವೇ ಎಂಬ ಪ್ರಶ್ನೆಗೆ ಇಲ್ಲ ಇದ್ದರೆ ಕ್ರಮ ಜರುಗಿಸಲಿ ಎಂದರು.
ಮೇಯರಿಂದಲೂ:
ಆಸಿಫ್ ಅವರಿಂದ ಇಸಿದುಕೊಂಡ ಹಣವನ್ನು ಹಿಂದುರಿಗಿಸಲು. ಹೀಗಿರುವ ಮೇಯರಿಂದಲೂ ಹಣ ಪಡೆದಿದ್ದಾರೆಂದು ಅವರ ಕಾಂಗ್ರೆಸ್ ಪಕ್ಷದವರೇ ಹೇಳುತ್ತಿದ್ದಾರೆ. ಆ ಬಗ್ಗೆ ನಮಗೇನು ಗೊತ್ತಿಲ್ಲ ಬೇಕಾದರೆ ಈ ಬಗ್ಗೆಯೂ ತನಿಖೆಯಾಗಲಿ ಎಂದರು.
ಶ್ರೀರಾಮುಲು ಭಯ:
ಸಚಿವ ಶ್ರೀರಾಮುಲು ಅವರು ಉಸ್ತುವಾರಿ ಸಚಿವರಾಗಿ ಬಂಧ ಮೇಲೆ ಕೆ.ಎಂಆರ್ಸಿ. ಡಿಎಂಎಫ್. ಕೆಕೆಆರ್ಡಿಬಿ ಮೊದಲಾದ ನಿಧೀಗಳಿಂದ ಹಣ ತಂದು ಅಭಿವೃದ್ದಿ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ. ಇದರಿಂದ ಮುಂಬರುವ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಂಕಷ್ಟ ಎದುರಾಗಲಿದೆಂಬ ಭಯದಿಂದ ವಿನಾಕಾರಣ ಆರೋಪ ಮಾಡುತ್ತಿದ್ದಾರೆಂದರು.
ಪಕ್ಷಕ್ಕೆ ಬಿಟ್ಟ ವಿಚಾರ:
ಶ್ರೀರಾಮುಲು ಅವರು ಮುಂಬರು ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಆದರೆ ಶ್ರೀರಾಮುಲು ಅವರು ಹೇಳಿಲ್ಲ. ಅವರು ರಾಜ್ಯ ಮಟ್ಟದ ನಾಯಕರು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆಂದರು.
ಅಭಿವೃದ್ದಿಗೆ ಸವಾಲು:
ಕಾಂಗ್ರೆಸ್ನವರು ಕಳೆದ ಬಾರಿ ನಗರದಲ್ಲಿ ಐದು ವರ್ಷಕಾಲ ಆಡಳಿತ ನಡೆಸಿದರು. ಅದಕ್ಕೂ ಮುನ್ನ ನಾವು ಆಡಳಿತ ನಡೆಸಿದ್ದೇವೆ. ಈಗಲೂ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದೆ ಎಂದು ತಾವು ಕೈಗೊಂಡ ಅಭಿವೃದ್ದಿ ಯೋಜನೆಗಳ ಬಗ್ಗೆ ವಿವರ ನೀಡಿದ ಶಾಸಕರು ಬೇಕಾದರೆ. ಅಭಿವೃದ್ದಿ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲು ಸವಾಲು ಹಾಕುವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬುಡಾ ಅಧ್ಯಕ್ಷ ಪಿ.ಪಾಲಣ್ಣ. ಪಕ್ಷದ ಜಿಲ್ಲಾ ಅಧ್ಯಕ್ಷ ಮುರಹರಗೌಡ, ಸಫಾಯಿ ಕರ್ಮಾಚಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ಹನುಮಂತಪ್ಪ, ಮಾಜಿ ಶಾಸಕ ಸುರೇಶ್ ಬಾಬು, ಪಾಲಿಕೆಯ ಸದಸ್ಯರುಗಳಾದ ಕೆ ಎಸ್ ಆಶೋಕ್ ಕುಮಾರ್, ಕೋನಂಕಿ ತಿಲಕ್, ಗೋವಿಂದರಾಜುಲು, ಇಬ್ರಾಹಿಂ ಬಾಬು, ಹನುಮಂತ ಕೆ. ಮುಖಂಡರಾದ ವೀರಶೇಖರ ರೆಡ್ಡಿ, ಗುತ್ತಿಗನೂರು ವಿರೂಪಾಕ್ಷಗೌಡ, ಮಾಧ್ಯಮ ವಕ್ತಾರರಾದ ಡಾ.ಬಿ.ಕೆ.ಸುಂದರ್, ರಾಜೀವ್ ತೊಗರಿ ಮೊದಲಾದವರು ಇದ್ದರು.