ಹಾಲಿ ಮಾಜಿ ಶಾಸಕರ ಪೈಪೋಟಿ ಕೋವಿಡ್ ಕೇಂದ್ರಕ್ಕೆ ಹರಿದು ಬಂದ ಧೆಣಿಗೆ

ಎಮ್ಮಿಗನೂರು, ಜೂ.03 : ಗ್ರಾಮದಲ್ಲಿ ಜನತೆ ಮತ್ತು ಸ್ಥಳೀಐ ಜನಪ್ರತಿನಿಧೀಗಳು ಒಂದುಗೂಡಿ ಜಿಲ್ಲೆಯಲ್ಲಿಯೇ ಕೋವಿಡ್ ರೋಗೊಗಳ ಆರೈಗಾಗಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಿತ್ತು,
ಇದರ ನಿರ್ವಃಣೆಗೆ ಸ್ಥಳೀಐ ವ್ಯಾಪಾರಸ್ರು ಸೇರಿಂದತೆ ಅನೇಖ ಜನ ದೇಣಿಗೆ ನೀಡಿದ್ದರು. ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿದ್ದ ಮಾಜಿ ಶಾಸಕ ಸುರೇರ್ಶ ಬಾಬು ಒಂದು ಲಕ್ಷ ರೂ ದೇಣಿಗೆ ನೀಡಿದ್ದರಿಂದ. ತಾನೇಣು ಕಡಿಮೆ ಎನ್ನಯವಂತೆ ಹಾಲಿ ಶಾಕ ಗಣೇರ್ಶ ಸಹ ಬಂದು ಒಂದು ಲಕ್ಷದ ಹತ್ತು ಸಾವಿರ ರೂಗಳ ದೇಣಿಗೆ ನೀಡಿದ್ದಾರೆ.
ಇಂದು ಬೆಳಿಗ್ಗೆ ಈ ಕೇಂದ್ರಕ್ಕೆ ಬಂದ ಶಾಸಕ ಹಣೇಶ್ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಜತೆಗೆ ಆರೋಗ್ಯ ಕೇಂದ್ರಕ್ಕೆ 101000 ರೂ.ಗಳನ್ನು ದೇಣಿಗೆ ನೀಡಿದರು.
ನಂತರ ಮಾತನಾಡಿ, ರಾಜ್ಯ ಸರ್ಕಾರ ಶಾಸಕರಿಗೆ 50 ಲಕ್ಷ ರೂ ಅನುದಾನ ಬಿಡುಗಡೆಗೊಳಿಸಿದೆ. ಇದರಲ್ಲಿ ಅಂದಾಜು 16 ಲಕ್ಷ ವೆಚ್ಚದ ಆಕ್ಸಿಜನ್ ಆಂಬುಲೆನ್ಸ್ ಅನ್ನು ಎಮ್ಮಿಗನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲಾಗುವುದು. ಇಲ್ಲಿನ ಜನರ ಸಹಕಾರದೊಂದಿಗೆ ಜನರನ್ನು ಕೋವಿಡ್ ಮುಕ್ತಕ್ಕೆ ಗ್ರಾಮ ಪಂಚಾಯ್ತಿ ಶ್ರಮಿಸುತ್ತಿದೆ.. ಈಗಾಗಲೇ ಈ ಕೇಂದ್ರದಲ್ಲಿ ಕೋವಿಡ್ನಿಂದ 37 ಜನ ಗುಣಮುಖರಾಗಿದ್ದಾರೆ. ಮತ್ತಷ್ಟು ಉತ್ಸಹಾದಿಂದ ಕೆಲಸ ಮಾಡಿ ಕೇಂದ್ರಕ್ಕೆ ಬರುವ ರೋಗಿಗಳಿಗೆ ಹಾರೈಕೆ ಮಾಡಿ ಗುಣಮುಖರಾಘಿ ಮಾಡಲು ತಾಔಉ ಒಂದು ಲಕ್ಷದ ಒಂದು ಸಾವಿರ ದೇಣಿಗೆ ನೀಡಲಾಯಿತು. ಜನರು ಕೋವಿಡ್ ನಿಯಮಗಳ ಪರಿಪಾಲನೆಯೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಅಂಜಿನಮ್ಮ, ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ಮುಖಂಡರಾದ ಕರಿಬಸವನಗೌಡ, ಕೇಶವರೆಡ್ಡಿ, ರಾಮನಾಯ್ಡು, ಸದಾಶಿವಪ್ಪ, ಮುಖಂಡರು ಪಾಲ್ಗೊಂಡಿದ್ದರು.