ಹಾಲಿವುಡ್ ಹಾಸ್ಯ ಕಲಾವಿದೆ ಡುಕಾಕಿಸ್ ನಿಧನ

ಲಾಸ್‌ಏಂಜಲೀಸ್,ಮೇ.೨- ತನ್ನ ಅದ್ಬುತ ನಟನೆಗಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದ ಹಾಲಿವುಡ್ ಹಾಸ್ಯ ಕಲಾವಿದೆ ಅಮೇರಿಕಾದ ನಟಿ ಒಲಂಪಿಯಾ ಡುಕಾಕಿಸ್ ನಿಧನರಾಗಿದ್ದಾರೆ.
ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಹಿರಿಯ ನಟಿ ಅಗಲಿಕೆ ವಿಷಯವನ್ನು ಆಕೆಯ ಕುಟುಂಬದ ಸದಸ್ಯರು ಖಚಿತ ಪಡಿಸಿದ್ದಾರೆ. ಡುಕಾಕಿಸ್ ಅವರು ದೀರ್ಘ ಕಾಲ ಬಣ್ಣದ ಬದುಕಿನಲ್ಲಿ ಸೇವೆ ಸಲ್ಲಿಸಿದ್ದರು.
ರಂಗಭೂಮಿ, ಸಿನಿಮಾದಲ್ಲಿ ನಟಿಯಾಗಿ ನಿರ್ದೇಶಕಿಯಾಗಿ ತಮ್ಮ ನಟನೆ ಮತ್ತು ಕೆಲಸ ಮೂಲಕ ಎಲ್ಲರ ಗಮನ ಸಳೆದಿದ್ದರು. ಡುಕಾಕಿಸ್ ಅವರ ನಿಧನದಿಂಧ ವಿಶ್ವ ಚಿತ್ರರಂಗದ ಅದರಲ್ಲಿಯೂ ಹಾಲಿವುಡ್ ಅತ್ಯುತ್ತಮ ಹಾಸ್ಯ ಕಲಾವಿದೆಯನ್ನು ಕಳೆದುಕೊಂಡಿದೆ.
೫೦ನೇ ವಯಸ್ಸಿನಲ್ಲಿ ಕಾಮಿಡಿ ನಟನೆಯ ಕಡೆಗೆ ವಾಲಿದ ಅವರು, ಅನೇಕ ಯಶಸ್ಚಿ ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು. ಅದರಲ್ಲಿ ಪ್ರಮುಖವಾಗಿ ಮೂನ್ ಸ್ಟ್ರಕ್ ಮತ್ತು ಸ್ಟೀಲ್ ಮಂಗೋಲಿಯಾಸ್ ಪ್ರಮುಖವಾದವುಗಳು.
ಡುಕಾಕಿಸ್ ನಿಧನ ವಿಷಯವನ್ನು ಅವರ ಕುಟುಂಬದ ಸದಸ್ಯರಾದ ಅಪೊಲೋ ಡುಕಾಕಿಸ್ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಗ್ರೀಕ್ ನಿಂದ ವಲಸೆ ಬಂದು ಅಮೇರಿಕಾದ ಮೆಸ್ಸಂಚರ್ಸ್‌ನಲ್ಲಿ ವಾಸ ಮಾಡುತ್ತಿದ್ದರು. ಜಾರ್ಜ್ ಡಬ್ಯೂ ಭೂಷ್ ಅವರು ಅಮೇರಿಕಾದ ಅಧ್ಯಕ್ಷ ಸ್ಥಾನದಕ್ಕೆ ಸ್ಪರ್ಧಿಸಿದ್ದ ವೇಳೆ ಇವರ ಪ್ರತಿಸ್ಪರ್ಧಿಯಾಗಿ ಖನದಲ್ಲಿದ್ದು ಪರಾಭವಗೊಂಡ ಮೈಕೆಲ್ ನಟಿಯ ಸೋಧರ ಸಂಬಂಧಿಯಾಗಿದ್ದಾರೆ.
ಸಂತಾಪ:
ಡುಕಾಕಿಸ್ ಅವರ ನಿಧನಕ್ಕೆ ಹಾಲಿವುಡ್‌ನ ಹಲವು ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.