ಹಾಲಿನ ಪೌಡರ್ ಸರಬರಾಜು ಇಲ್ಲದೇ ಅಪೌಷ್ಠಿಕ ಹೋಗಲಾಡಿಸಲು ಹೇಗೆ ಸಾಧ್ಯ ?


ಸಂಜೆವಾಣಿ ವಾರ್ತೆ
ಸಂಡೂರು :ಜೂ:2: ಸುಮಾರು 6 ತಿಂಗಳಿನಿಂದ ಹಾಲಿನ ಪೌಡರು ಸರಬರಾಜು ಕೊರತೆ ಇದ್ದು, ಪರ್ಯಾಯವಾಗಿ ಬೇರೆ ಆಹಾರ ಸಾಮಾಗ್ರಿ ನಿಡಿರುವುದಿಲ್ಲ. ನಿರ್ದೇಶಕರು ಬೇರೆ ಆಹಾರ ಕೊಡಲು ತಿಳಿಸಿದರೂ, ಕೊಟ್ಟಿರುವುದಿಲ್ಲ. ಫಲಾನುಭವಿಗಳಿಗೆ ಅಪೌಷ್ಠಿಕ ಹೋಗಲಾಡಿಸಲು ಹೇಘೆ ಸಾಧ್ಯ ? ಇದನ್ನು ಕೂಡಲೇ ಸರಿಪಡಿಸುವುದರ ಜೊತೆಗೆ ಮೊಟ್ಟೆಗಳು ಕೂಡಾ ಸರಿಯಾದ ಸಮಯಕ್ಕೆ ಬರುವುದಿಲ್ಲ. ತುಂಬಾ ಕಳಪೆ ಮಟ್ಟದಿಂದ ಕೂಡಿರುತ್ತದೆ. ಹಾಳಾಗಿರುವ ಮೊಟ್ಟೆ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ವಿತರಿಸಲು ತೊಂದರೆಯಾಗುತ್ತಿದೆ. ಮತ್ತು ಮನೆ ಮಾಲೀಕರಿಗೆ ಬಾಡಿಗೆ ಹಣ 5 ತಿಂಗಳಿನಿಂದ ಕೊಟ್ಟಿರುವುದಿಲ್ಲ. ಮತ್ತು ಸಂಸ್ಥೆಯಿಂದ ಬಂದಿರುವುದಿಲ್ಲ. ಮಾಲೀಕರು ಮನೆ ಖಾಲಿ ಮಾಡಲು ಒತ್ತಾಯ ಮಾಡುತ್ತಿದ್ದಾರೆ. ಕೂಡಲೇ ಬಾಡಿಗೆ ಹಣ ಪಾವತಿಸಬೇಕು. ಇಲ್ಲವಾದರೆ ಕೇಂದ್ರಗಳು ಬಿದಿಗೆ ಬರುವುದು ಖಚಿತವಾಗಿದೆ. ಮೇಲಾಧಿಕರಿಗಳು ಈ ಎಲ್ಲಾ ತೊಂದರೆಗಳನ್ನ ಗಮನಿಸಿ ಬಾಲ ವಿಕಾಸ ಸಲಹಾ ಸಮಿತಿಯ ಖಾತಗೆ ಹಣ ಹಾಕಬೇಕು. ಈ ಎಲ್ಲಾ ತೊಂದರೆಗಳನ್ನು ಮೇಲಾಧಿಕಾರಿಗಳು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಎಲ್ಲಾ ಬೇಡಿಕೆಗಳನ್ನು ತುರ್ತಾಗಿ ಬಗೆಹರಿಸಲು ಸಂಘಟನಾ ಸಮಿತಿಯಿಂದ ಮನವಿ ಮಾಡುತ್ತಿದ್ದೇವೆ. ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯುವುದು ಖಚಿತವಾಗಿದೆ ಎಂದು ಅಂಗನವಾಡಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಟಿ. ಕವಿತಾರವರು ಶಿಶು ಅಭಿವೃದ್ದಿ ಯೋಜನಾಧಿಕಾರಿ ಎಳೆ ನಾಗಪ್ಪನವರಿಗೆ ಅಂಗನವಾಡಿ ಸಹಾಯಕಿ ಫೆಡರೇಶನ್ ಅಧ್ಯಕ್ಷೆ ಜಿ. ನಾಗರಾತ್ನಮ್ಮ ಎಂ. ಶಶಿಕಲಾ ಎ.ಎಂ. ಮಲ್ಲಮ್ಮ ಮಮತಾ, ಸುರೇಕಾ, ಲಕ್ಷಮೀ, ಮಹಾಲಕ್ಷ್ಮೀ ಎಂ. ಪಾಟಿಲ್ ಎ.ಎಂ. ಪ್ರೇಮಾ, ತಾಯಕ್ಕ ಪಿ. ವೆಂಕಟ ಲಕ್ಷ್ಮೀ, ಎಚ್. ಶಾರದಾ ಶಿಂಧೆ, ನೇತ್ರಾವತಿ ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ದಿ ಇಲಾಖೆಯಲ್ಲಿ ಮನವಿಯನ್ನ ಸಲ್ಲಿಸಿದರು.