ಹಾಲಿನ ದರ ಹೆಚ್ಚಿಸಲು ಸರ್ಕಾರ ಮೀನಾಮೇಶ-ರಾಮೇಗೌಡ ಅಕ್ರೋಶ

ಬಂಗಾರಪೇಟೆ.ಸ,೯: ರೈತರಿಂದ ಹಾಲು ಖರೀದಿ ಮಾಡುವ ಮೂಲಕ ರೈತರಿಗೆ ವಂಚಿಸಿ ಹಾಲು ಮಾರಾಟ ಮಾಡುವಗ್ರಾಹಕರಿಗೆ ವಂಚಿಸಿ ಆಡಳಿತ ಮಂಡಳಿಗಳು ಬದಲಾಗಿ ಸರ್ಕಾರಗಳು ಬದಲಾಗಿ ಹೋದರು ,ಅಧಿಕಾರಕ್ಕೆ ಬಂದವರು ತಮ್ಮತಮ್ಮ ಜೇಬುಭರ್ತಿ ಮಾಡಿಕೊಳ್ಳುತ್ತ ಹಾಲಿನ ದರವನ್ನು ಹೆಚ್ಚು ಮಾಡಲು ವರ್ಷಗಳೇ ಕಳೆದರೂ ಮೀನಾಮೇಷ ಎಣಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸಾರ್ವಜನಿಕಆಸ್ಪತ್ರೆ ವೃತ್ತದಲ್ಲಿ ಅವರು ಮಾತನಾಡಿ ಪಶು ಆಹಾರದ ಬೆಲೆಯನ್ನು ಟನ್‌ಗೆ ೩೫೦೦ ಸಾವಿರಗಳಷ್ಟು ಹೆಚ್ಚಿಗೆ ಮಾಡಿ ರೈತರಿಗೆ ದ್ರೋಹ ಎಸಗಿದೆ.ಕೆಲ ಡೈರಿ ಸಂಸ್ಥೆಗಳು ತಾವೇ ೨ ರೂ. ಹಾಳಿನ ದರವನ್ನು ಹೆಚ್ಚು ಮಾಡಿದರೆ ಈಗ ಸರ್ಕಾರ ಹಾಲಿನ ದರವನ್ನು ನ್ಯಾಯೂಚಿತವಾಗಿ ಯೋಗ್ಯ ಬೆಲೆಯನ್ನು ನೀಡಬೇಕಾಗಿದೆ ಎಂದು ಆಗ್ರಹ ಪಡೆಸಿದರು,
ಆಗ ಸುಮಾರು ೪೦ರೂ ಗಳನ್ನು ನೀq ಬೇಕಾಗುತ್ತದೆ.ಈಗ ೨೭ರೂ ರೈತರಿಗೆ ನೀಡುತ್ತಿದ್ದು, ಗ್ರಾಹಕರಿಗೆ ೪೩ರೂ.ಮಾರಾಟ ಮಾಡುತ್ತಿದೆ.ಗ್ರಾಹಕರಿಗೆ ದುಬಾರಿ ಆದರೆ ಸರ್ಕಾರ ಅವರಿಗೆ ಸಬ್ಸಿಡಿಯ ಮೂಲಕ ಹಾಲನ್ನು ನೀಡಿ ನೀವು ರೈತರಿಗೆ ಕೊಡ ಬೇಕಾದ ಹಾಲಿನ ದರವನ್ನು ನ್ಯಾಯಬದ್ದವಾಗಿ ನೀಡಬೇಕು. ಸರ್ಕಾರಗಳು ನಿಮಗೊಂದು ನೀತಿ ರೈತರಿಗೆ ಮತ್ತೊಂದು ಗ್ರಾಹಕರಿಗೆ ಮಗದೊಂದು ನೀತಿ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತ ಪಡೆಸಿದರು,
ಹಾಗಾಗಿ ಇಂದು ಪಶು ಆಹಾರಉತ್ಪಾದನಾಘಟಕ, ರಾಜನಕುಂಟೆ, ದೊಡ್ಡಬಳ್ಳಾಪುರ ರಸ್ತೆಯಲ್ಲಿ ಹಾಲಿನ ದರ ಏರಿಸಿ, ಪಶು ಆಹಾg ದರ ಇಳಿಸುವ ಸಲುವಾಗಿ ಅನಿರ್ಧಿಷ್ಠಾವಧಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದ್ದು, ಅಲ್ಲಿಗೆ ಜಿಲ್ಲಾ ವ್ಯಾಪ್ತಿ ಕಾರ್ಯಕರ್ತರೊಂದಿಗೆ ತೆರಳುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕುಅಧ್ಯಕ್ಷ ಮುರಳಿ, ಮಂಜುನಾಥ್, ವೆಂಕಟ್, ಜಿಲ್ಲಾಉಪಾಧ್ಯಕ್ಷ ಲಕ್ಷ್ಮಣ್, ಶ್ರೀನಿವಾಸ್, ಹನುಮಪ್ಪ, ನಾರಾಯಣಸ್ವಾಮಿ, ಸೇರಿದಂತೆತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಕಾರ್ಯಕರ್ತರು ಸೇರಿದ್ದರು.