ಹಾಲಮತ ಸಮಾಜದಿಂದ ಪ್ರತಿಭಾ ಪುರಸ್ಕಾರ

ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ.ಸೆ.27 ಪಟ್ಟಣದ ಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಾಲುಮತ ಸಮಾಜದಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎಸ್ ಭೀಮಾ ನಾಯ್ಕ್ ನೆರವೇರಿಸಿ ಮಾತನಾಡಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಅವರಿಗೆ ಉನ್ನತ  ಶಿಕ್ಷಣ ಕೊಡಿಸುವ ಜೊತೆಗೆ    ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಹೆಸರು ತರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು  ಕುರುಬ ಸಮಾಜದ ಅಧ್ಯಕ್ಷ ಬುಡ್ಡಿ  ಬಸವರಾಜ್ ಮಾತನಾಡಿ ಪ್ರತಿಯೊಬ್ಬ ಸಮಾಜದ ವ್ಯಕ್ತಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಬಡತನದಲ್ಲಿರುವ ಸಮಾಜದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಬೇಕು. ಗುಡಿ ಕಟ್ಟಲು ಚಂದ ಎತ್ತುವ ಬದಲು ಶಾಲೆಯ ಏಳಿಗೆಗೆ ಚಂದ ಎತ್ತಬೇಕು ಎಂದರು.
ಸಾನಿಧ್ಯವನ್ನು ಕನಕಗುರುಪೀಠದ ಶ್ರಿ ಸಿದ್ದರಮನಂದಪುರಿ ಮಹಸ್ವಾಮಿಗಳು ವಹಿಸಿದ್ದರು
ಅಧ್ಯಕ್ಷತೆಯನ್ನು ಕೊಟ್ರಯ್ಯ ಒಡೆಯರುಗಳು ಕುಲಗುರುಗಳು, ವಿಶೇಷ ಆಹ್ವಾನಿತಾರಾಗಿ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಎರಿಗೌಡ್ರು, ಮಾತನಾಡಿದರು.
ಈ ಸಂದರ್ಭದಲ್ಲಿ ಬಿಇಒ  ಶೇಖರಪ್ಪ ಹೊರಪೇಟೆ, ಮುಖಂಡರಾದ ರಾಜ್ಯ ಕುರುಬ ಸಮಾಜದ ನಿರ್ದೇಶಕ ಮರಿ ರಾಮಪ್ಪ ಜಿಲ್ಲಾ ಉಪಾಧ್ಯಕ್ಷರಾದ ರಾಮಲಿಂಗಪ್ಪ, ಮುಟಗಾನಹಳ್ಳಿ ಕೊಟ್ರೇಶ್, ಸೊನ್ನದ ಮಹೇಶ್, ಜಳಕೆ ಗುರುಬಸಪ್ಪ, ಎಂಎಸ್ ಕಲ್ಗುಡಿ, ವಾಲ್ಮೀಕಿ ಸಮಾಜದ ಡಿಸ್ ಮಂಜುನಾಥ್ ವೀರಶೈವ ಸಮಾಜದ ವಿಜಯಕುಮಾರ್ ಹಾಲ್ದಾಳ್ ಇದ್ದರು. ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತ ಮೋರನಾಳ್ ನಿರ್ವಹಿಸಿದರು.