ಹಾಲಪ್ಪ ಆಚಾರ್ ಅವರಿಂದ ಕ್ಷೇತ್ರದ ಅಭಿವೃದ್ಧಿ   ಶೂನ್ಯ : ಆರೋಪ


ಸಂಜೆವಾಣಿ ವಾರ್ತೆ
ಕುಕನೂರು, ಏ.20: ಹಾಲಪ್ಪ ಆಚಾರ್ ಅವರಿಗೆ  ಕ್ಷೇತ್ರದ ಅಭಿವೃದ್ಧಿ ಬಗ್ಗೆ  ಪರಿಕಲ್ಪನೆ ಇಲ್ಲ. ಐದು ವರ್ಷಗಳ ಕಾಲ ಯಲಬುರ್ಗಾ  ಕ್ಷೇತ್ರದ ಅಭಿವೃದ್ಧಿಗೆ  ಆದ್ಯತೆ ಕೊಡದೇ ಬರಿ  ಕುತಂತ್ರ   ರಾಜಕಾರಣ, ಜನರಿಗೆ ಸುಳ್ಳು  ಹೇಳಿ  ಕಾಂಗ್ರೆಸ್ ಪಕ್ಷವನ್ನು ಬೈಯುತ್ತಾ ಕಾಲ ಹರಣ ಮಾಡುತ್ತಾ ಬಂದಿದ್ದಾರೆ, ಅಂತವರಿಂದ  ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲವೆಂದು ಬಸವರಾಜ ರಾಯರೆಡ್ಡಿ  ಆರೋಪಿಸಿದರು. ಅವರು ಬುಧವಾರ  ಇಲ್ಲಿಯ  ಹರಪನಹಳ್ಳಿ ಅವರ ಮಿಲ್ಲಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ,  ಮತ್ತು ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದರು.
ಬಿಜೆಪಿ  ಅವರಿಗೆ  ಅಭಿವೃದ್ಧಿಯೆಂಬುದೇ ಗೊತ್ತಿಲ್ಲ,  ಈ  ಹಿಂದೆ ನಮ್ಮ ಕಾಂಗ್ರೆಸ್ ಸರ್ಕಾರದ ಆಡಳಿತದ  ಅವಧಿಯಲ್ಲಿ ಕೆರೆ ತುಂಬಿಸುವ ಯೋಜನೆ, ಗದಗ- ವಾಡಿ ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ, ರಸ್ತೆ ಸುಧಾರಣೆ, ಶಾಲಾ ಕಾಲೇಜುಗಳು  ಕಟ್ಟಡಗಳು  ಇನ್ನು ಅನೇಕ   ಜನಪರ ಯೋಜನೆಗಳನ್ನು ಹಾಲಪ್ಪ ಆಚಾರ್  ಅವರು  ಮುಂದಿಟ್ಟುಕೊಂಡು ಇವೆಲ್ಲವೂ  ಬಿಜೆಪಿ ಸರ್ಕಾರದ ಸಾಧನೆ ಎನ್ನುತ್ತಾ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ನೀರಾವರಿ ಯೋಜನೆ ಜ್ಞಾನವು ಇಲ್ಲ  ಮಂತ್ರಿಯಾದರೂ  ಸಹ
 ಕ್ಷೇತ್ರದ ಅಭಿವೃದ್ಧಿಗೆ  ಯಾವ ಪ್ರಯೋಜನವಾಗಲಿಲ್ಲ. ಈ ಬಾರಿ ಮತದಾರ ಮೂರ್ಖರ ಆಗುವುದಿಲ್ಲ. ಜಾಗ್ರತರಾಗಿದ್ದಾರೆ. ಅಷ್ಟಕ್ಕೂ  ಹಾಲಪ್ಪ ಆಚಾರ ಅವರು ಶಾಸಕ ಸ್ಥಾನಕ್ಕೆ ಯೋಗ್ಯರಲ್ಲವೆಂದು ಟೀಕಿಸಿದರು.
ಎಲ್ಲರ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಮ್ಮ   ಪ್ರಣಾಳಿಕೆಯಂತೆ  ಎರಡು ನೂರು ಯುನಿಟ್ ಉಚಿತ ವಿದ್ಯುತ್,  .2000 ರೂ. ಗ್ರಹಲಕ್ಷ್ಮಿ ಯೋಜನೆ,  ಪ್ರತಿ ಬಡ ಕುಟುಂಬಕ್ಕೆ  ಹತ್ತು ಕೆಜಿ ಉಚಿತ ಅಕ್ಕಿ, ಯುವನಿಧಿ ಯೋಜನೆಯಿಂದ  ಡಿಪ್ಲೋಮಾ ಪದವೀಧರಗಿ   1500, ಮತ್ತು ಪದವಿ ದಾರಿಗೆ  3000. ರೂ .ಪ್ರತಿ ತಿಂಗಳ ನಿರುದ್ಯೋಗ  ಭತ್ಯೆಯನ್ನು ಕೊಡಲಾಗುತ್ತದೆ ಮತದಾರರು ಜಾಗೃತಗೊಂಡು  ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡರು. 
: ನಾನು ಎಲ್ಲಿ ಮಲಗಿದರೆ ಏನ್ರೀ…ಕ್ಷೇತ್ರದ ಅಭಿವೃದ್ಧಿ ಸಾಕಲ್ಲ ನನ್ನ ವಾಸ್ತವ್ಯದ ಬಗ್ಗೆ ನಿಮಗೇಕೆ (ಬಿಜೆಪಿ) ಚಿಂತೆ ಎಂದು ಕಾಂಗ್ರೆಸ ಅಭ್ಯರ್ಥಿ ಬಸವರಾಜ್ ರಾಯರೆಡ್ಡಿ ಸಿಡಿಮಿಡಿಗೊಂಡರು. ಸುದ್ದಿಗೋಷ್ಠಿಯಲ್ಲಿ ಪತ್ರ ಕತ೯ರ ಪ್ರಶ್ನೆಗೆ ಉತ್ತರಿಸುತ್ತ ಹೇಳಿದರು.ರಾತ್ರಿ ೧೦ ರ ತನಕ ಜನರ ಕೆಲಸ ಮಾಡುತ್ತೇನೆ ಆದ್ರೂ ನನ್ನ ಬಗ್ಗೆ ಅಪ ಪ್ರಚಾರ ಮಾಡುವ ಬಿಜೆಪಿಯವರಿಗೆ ಸಾಮಾನ್ಯ ಜ್ಞಾನ ಇರಬೇಕು ಎಂದು  ಪತ್ರಕತ ೯ರಿ ಗೆ ಗರಂ ಆಗಿ ಉತ್ತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ  ಕಾಶಿಂ ಸಾಬ್ ತಳಕಲ್, ಹನುಮಂತ ಗೌಡ ಚಂಡೂರು, ವೆಂಕಣ್ಣ ಯರಾಶಿ, ರಾಮಣ್ಣ ಭಜಂತ್ರಿ, ಬಸವರಾಜ್ ಉಳ್ಳಾಗಡ್ಡಿ, ಮಂಜುನಾಥ್ ಕಡೆಮನಿ, ಸಿದ್ದಯ್ಯ ಕಳ್ಳಿ ಮಠ, ರತ್ನಾಕರ್ ತಳವಾರ್,  ರಹಿಮಾನ್ನ್  ಸಾಬ್ ಮಕ್ಕಪ್ಪನವರು. ಸಂಗಮೇಶ್ ಗುತ್ತಿ, ಮುತ್ತು ವಾಲ್ಮೀಕಿ, ಗಗನ್ ನೋಟಗಾರ ಮತ್ತಿತರು ಪಾಲ್ಗೊಂಡಿದ್ದರು.